Breaking News

ಹಣವಾಳದಲ್ಲಿ ದಸರಾ ಉತ್ಸವ

Written by 
Published: 02 October 2017
58 times Last modified on Tuesday, 03 October 2017 07:40

ಕೆ.ಎನ್.ಪಿ.ವಾರ್ತೆ,ಹಣವಾಳ,ಅ.03;

ವರದಿ : ವಿರೇಶ್

ಹಣವಾಳ ಗ್ರಾಮದಲ್ಲಿ ನಿನ್ನೆ ದಸರಾ ಉತ್ಸವವು ವಿಜೃಂಭಣೆಯಿಂದ ಜರುಗಿತು.

ಉತ್ಸವಕ್ಕೆ ಊರಿನ ಮುಖಂಡರಾದ ಬಾಲಕೃಷ್ಣ ಪತ್ತಾರ್, ಕಳಸ ಬೆಳಗುವ ಮೂಲಕ ಚಾಲನೆ ನೀಡಿದರು. ಮೈಸೂರು ದಸರಾದ ಪ್ರೇರಣೆಯಿಂದ ಗ್ರಾಮದಲ್ಲಿ ಜಂಬೂ ಸವಾರಿಯನ್ನು ನಡೆಸುತ್ತಾ ಬರಲಾಗಿದೆ. ಆದರೆ ಈ ವರ್ಷ ಕಾರಣಾಂತರಗಳಿಂದ ಜಂಬೂ ಸವಾರಿಗೆ ಆನೆಯನ್ನು ತರಿಸಲು ಆಗಿಲ್ಲವಾದರೂ, ಬಾಳೆ ಎಲೆ ಮತ್ತು ಬಾಳೆಯ ದಿಂಡಿನಿಂದ ಮಾಡಿದ ಮಂಟಪದಲ್ಲಿ ದುರ್ಗಾದೇವಿಯ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.

ಉತ್ಸವದಲ್ಲಿ ಜನಪದ ಕಲೆಗಳಾದ ಡೊಳ್ಳು ಕುಣಿತ, ಹುಲಿ ಕುಣಿತದ ಜೊತೆಗೆ 101 ಕಳಸಗಳಿಂದ ದುರ್ಗಾದೇವಿ ದೇವಸ್ಥಾನದಿಂದ ಶರಣಬಸವೇಶ್ವರ ದೇವಸ್ಥಾನದ ವರೆಗೆ ವಿಜೃಂಭಣೆಯಿಂದ ಉತ್ಸವ ಸಾಗಿತು. ಈ ಉತ್ಸವದಲ್ಲಿ ಊರಿನ ಮುಖಂಡರಾದ ಈರಣ್ಣ ಕುರಿ, ಚಂದ್ರಶೇಖರ ತಿಗರಿ, ಮರಿಯಪ್ಪ ಜಿರಾಳ, ಚಾಂದಬಾಷ ತಿಗರಿ, ರುದ್ರಪ್ಪ ಕಿನ್ನಾಳ  ಮತ್ತು ಹಣವಾಳ ಗ್ರಾಮದ ಸಮಾಜ ಬಾಂಧವರು ಮತ್ತು ಸುತ್ತಮುತ್ತ ಊರಿನ ಭಕ್ತಾದಿಗಳು ನೆರೆದಿದ್ದರು.

ಉತ್ಸವದ ಕುರಿತು :

ಗ್ರಾಮದಲ್ಲಿ ಸುಮಾರು 40 ವರ್ಷಗಳಿಂದ ದಸರಾ ಉತ್ಸವವು ನಡೆಯುತ್ತಾ ಬಂದಿದೆ.  ಪ್ರಥಮ ವರ್ಷದ ಉತ್ಸವಕ್ಕೆ ಅಡಿವೆಪ್ಪ ಕುರಿ, ಹನುಮಂತಪ್ಪ ವಂಕಲಕುಂಟಿ ಮತ್ತು ದುರುಗಪ್ಪ ಕೊಲ್ಲಾರಿ ಚಾಲನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಲ್ಲಿಂದ ಇಲ್ಲಿಯವರೆಗೂ ಪ್ರತಿ ವರ್ಷ ದಸರಾ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3273901
Today
Yesterday
This Week
Last Week
This Month
Last Month
All days
2422
6468
22744
3222209
98391
263209
3273901
Your IP: 54.158.55.5
2017-10-18 09:05