Breaking News

ಹಾರಿ ಹೋದ ಪ್ರೇಮಿಗಳಿಬ್ಬರ ಪ್ರಾಣ ಪಕ್ಷಿ

Written by 
Published: 18 November 2017
43 times Last modified on Saturday, 18 November 2017 13:25

ಕೆ.ಎನ್.ಪಿ.ವಾರ್ತೆ, ದಾವಣಗೆರೆ,ನ.18;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಕಳೆದ ಎರಡು ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದ ಪ್ರೇಮಿಗಳಿಬ್ಬರ ಪ್ರಾಣಪಕ್ಷಿ ಹಾರಿ ಹೋಗಿವೆ.

ಇವರ ಪ್ರೀತಿ ವಿಚಾರ ಮನೆಯವರಿಗೆಲ್ಲವೂ ತಿಳಿದಿತ್ತು. ಇವರಿಬ್ಬರೂ ಸಂಬಂಧಿಕರೇ ಆಗಿದ್ರು. ಇನ್ನೇನು ಮನೆಯವರನ್ನೆಲ್ಲ ಒಪ್ಪಿಸಿ ಮದುವೆ ಆಗ್ಬೇಕು ಎನ್ನುವಷ್ಟರಲ್ಲಿ ಆ ಪ್ರೇಮಿಗಳು ಮೃತಪಟ್ಟಿದ್ದಾರೆ.

ಹೌದು, ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಾಕನಡುಕು ಗ್ರಾಮದ ರೇಣುಕಾ ಮತ್ತು ಸಂಡೂರು ತಾಲೂಕಿನ ಮಲೆತುಂಬರಗುಂದಿ ಗ್ರಾಮದ ಹುಲಿಗೇಶ್ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಾ ಇದ್ದರು. ಇತ್ತೀಚೆಗಷ್ಟೆ ಯುವತಿ ರೇಣುಕಾಗೆ ಬೇರೆ ಕಡೆ ನಿಶ್ಚಿತಾರ್ಥ ನಡೆದ ಕಾರಣ ಪ್ರೇಮಿಗಳಿಬ್ಬರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ. 

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿ ಹಳ್ಳಿ ಗ್ರಾಮದ ಚರ್ಚ್ ಬಳಿ ಇಬ್ಬರು ಕಳೆದ ದಿನ ಪ್ರೇಮಿಗಳು ವಿಷ ಸೇವಿಸಿದ್ದಾರೆ. ವಿಷ ಸೇವಿಸಿದ ಪ್ರೇಮಿಗಳನ್ನು ದಾವಣಗೆರೆಯ ಜಗಳೂರು ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಇಬ್ಬರು ಮೃತಪಟ್ಟಿದ್ದಾರೆ.

ಈ ದುರ್ಘಟನೆ ಎರಡು ಕುಟುಂಬದಲ್ಲಿ ದು:ಖ ಮುಡುಗಟ್ಟುವಂತೆ ಮಾಡಿದೆ. ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ತಂದೆ ಕುಸಿದು ಬಿದ್ದಿದ್ದು ಪ್ರಜ್ಞೆ ತಪ್ಪಿದ್ದಾರೆ. ಈ ಕುರಿತು ಖಾನಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770671
Today
Yesterday
This Week
Last Week
This Month
Last Month
All days
5843
14978
20821
3647859
196898
189062
3770671
Your IP: 54.221.76.68
2017-12-18 08:39