Breaking News

ಹೆಲ್ಮೆಟ್ ಜಾಗೃತಿಗಾಗಿ ಯಮ ಬಂದ!

Written by 
Published: 28 November 2017
83 times Last modified on Tuesday, 28 November 2017 16:13
ರೇವಣಸಿದ್ದಪ್ಪ, ಯಮನ ವೇಷ ಧರಿಸಿದ ಕಲಾವಿದ ರೇವಣಸಿದ್ದಪ್ಪ, ಯಮನ ವೇಷ ಧರಿಸಿದ ಕಲಾವಿದ

ಕೆ.ಎನ್.ಪಿ.ವಾರ್ತೆ,ಕಲಬುರಗಿ,ನ.28;

ಹೆಲ್ಮೆಟ್ ಜಾಗೃತಿ ಮೂಡಿಸಲು ಭೂಮಿಗಿಳಿದ ಯಮ!

ಇಂದು ನಗರದ ಬೀದಿಗಳಲ್ಲಿ ಯಮ ಪ್ರತ್ಯಕ್ಷನಾಗಿದ್ದ. ಕನಸಲ್ಲೂ ಆತನ ಹೆಸರು ನೆನಸದ ಜನರ ಗಲಿಬಿಲಿಗೊಂಡರು. ಇದೇನಪ್ಪ ಯಮ ಬರೋದು ಅಂದ್ರೇನು ಅಂತ ಯೋಚಿಸ್ತಿದಿರಾ....? ಹೌದು ಅದು ನಿಜ. ವಾಹನ ಸವಾರರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಯಮರೂಪಿ ವೇಷಧಾರಿ ವಾಹನ ಸವಾರರಿಗೆ ಹೆಲ್ಮೇಟ್ ಬಳಕೆ ಬಗ್ಗೆ ಜಾಗೃತಿ ಮೂಡಿಸಿದರು.

ಒಂದೆಡೆ ದ್ವಿಚಕ್ರ ವಾಹನಗಳನ್ನು ಕಂಡರೆ ಹೀಗೆ ಅತ್ತಿಂದಿತ್ತ ಓಡಾಡುತ್ತಿರುವ ಯಮರೂಪಿ. ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಫೈನ್ ಹಾಕುತ್ತಿರುವ ಟ್ರಾಫಿಕ್ ಪೊಲೀಸರು. ಸಂಚಾರ ನಿಯಮ ಪಾಲಿಸದಿದ್ದರೆ ನೇರವಾಗಿ ನನ್ನ ಜತೆ ಬರಬೇಕಾಗುತ್ತದೆ ಅಂತ ವಾಹನಗಳ ಸವಾರರರಿಗೆ ಹೇಳುತ್ತಿರುವ ಯಮ. ಈ ಚಿತ್ರಣ ಕಂಡುಬಂದಿರೋದು ಕಲಬುರಗಿಯಲ್ಲಿ. ಹೌದು‌, ಕಲಬುರಗಿ ನಗರ ಸೇರಿದಂತೆ ಈಶಾನ್ಯ ವಲಯದ ಜಿಲ್ಲೆಗಳಲ್ಲಿ ಟ್ರಾಫಿಕ್ ಜಾಮ್ ತಡೆಗಟ್ಟುವುದು‌ ಹಾಗೂ ಸಂಚಾರ ನಿಯ‌ಮ ಪಾಲಿಸಬೇಕು ಅಂತ ಐಜಿಪಿ ಅಲೋಕ ಕುಮಾರ ರೋಡ್ ಗೆ ಇಳಿದು ಅರಿವು ಮೂಡಿಸಿದ್ರು.

ಅದರ ಬೆನ್ನಲ್ಲೇ ಇಂದು ಕಲಬುರಗಿ ನಗರದ ಸರ್ದಾರ್ ‌ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಹುಮನಾಬಾದ್ ನಿವಾಸಿ ರೇವಣಸಿದ್ದಪ್ಪ ಅನ್ನೋರು ಹೆಲ್ಮೆಟ್ ಬಗ್ಗೆ ಅರಿವು ಮೂಡಿಸಿದ್ರು. ಕಲಾವಿದರಾದ ರೇವಣಸಿದ್ದಪ್ಪ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಅಂತ ಸದಾ ಯೋಚಿಸ್ತಾರೆ‌. ಈಗ ಹೆಲ್ಮೆಟ್ ಕಡ್ಡಾಯಕ್ಕೆ ಐಜಿಪಿ ರೋಡಿಗೆ ಇಳಿದು ಜಾಗೃತಿ ಮೂಡಿಸ್ತಾ ಇರೋದ್ರಿಂದ ನೇರವಾಗಿ ಅವ್ರನ್ನ ಭೇಟಿ ಮಾಡಿದ್ದಾರೆ. ಯಮನ ವೇಷ ಧರಿಸಿ ವಾಹನಗಳ ಸವಾರರಲ್ಲಿ ಹೆಲ್ಮೆಟ್ ಕಡ್ಡಾಯ ಧರಿಸುವ ಕುರಿತು ಅರಿವು ಮೂಡಿಸುವುದಾಗಿ ಕೇಳಿಕೊಂಡಿದ್ದಾರೆ‌. ಪೊಲೀಸ್ ಇಲಾಖೆ ಕಲಾವಿದ ರೇವಣಸಿದ್ದಪ್ಪ ಯಮನ ವೇಷ ಧರಿಸಲು ಸಹಮತ ವ್ಯಕ್ತಪಡಿಸಿದೆ. ಹೀಗಾಗಿ ಬೆಳಗ್ಗೆಯಿಂದ ಯಮನ ವೇಷದಲ್ಲಿ ರೇವಣಸಿದ್ದಪ್ಪ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸವಾರರಲ್ಲಿ ಮನವಿ ಮಾಡುತ್ತಿದ್ದಾರೆ.

ಹೆಲ್ಮೆಟ್ ಧರಿಸದ ವಾಹನಗಳ ಸವಾರರ ಬೈಕ್ ಗಳನ್ನು ಟ್ರಾಫಿಕ್ ಪೊಲೀಸರ ನೆರವಿನಿಂದ ತಡೆದು ಅರಿವು‌ ಮೂಡಿಸಿದ್ರು. ಸೀಟ್ ಬೆಲ್ಟ್ ಧರಿಸದ ಕಾರ್ ಗಳ ಚಾಲಕರಿಗೂ ನಿಯಮ ಪಾಲಿಸುವಂತೆ ಯಮರೂಪಿ ಕಲಾವಿದ ಕೋರಿದ್ರು. ಕಲಾವಿದನ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಒಟ್ನಲ್ಲಿ ಟ್ರಾಫಿಕ್ ಜಾಮ್ ತಡೆಗಟ್ಟುವುದು, ಸಂಚಾರ ನಿಯಮ ಪಾಲನೆ, ಹೆಲ್ಮೆಟ್ ಮತ್ತು ಕಾರ್ ಚಾಲಕರು ಸೀಟ್ ಬೆಲ್ಟ್ ಕಡ್ಡಾಯ ಧರಿಸುವಂತೆ ಮಾಡುತ್ತಿರುವ ಪೊಲೀಸರ ಕ್ರಮಕ್ಕೆ ಸಾರ್ವಜನಿಕರು, ಕಲಾವಿದರು ಸಾಥ್ ನೀಡುತ್ತಿರುವುದು ವಿಶೇಷ.

R.K. Toona

"ಸತ್ಯದ ಹುಡುಕಾಟದಲಿ"

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770763
Today
Yesterday
This Week
Last Week
This Month
Last Month
All days
5935
14978
20913
3647859
196990
189062
3770763
Your IP: 54.221.76.68
2017-12-18 08:46