Breaking News

ಇಲ್ಲಿ ರಸ್ತೆಯೇ ಚರಂಡಿ..!

Written by 
Published: 28 September 2017
47 times Last modified on Friday, 29 September 2017 11:10

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಸೆ.29;

ವರದಿ : ಟಿ.ಗಣೇಶ್

ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಹೋಗುವ ಮಾರ್ಗದಲ್ಲಿ ರೈಲ್ವೆ ಸೇತುವೆಯ ಕೆಳಗಿನ ರಸ್ತೆ ಅಕ್ಷರಶಃ ಮಳೆ ನೀರಿನಿಂದ ಚರಂಡಿಯಂತಾಗಿದೆ.

ಬಳ್ಳಾರಿಯ ನಗರದಲ್ಲಿ ಮಳೆ ಬಂದರೆ ಮುಖ್ಯ ರಸ್ತೆಗಳೆ ಚರಂಡಿಗಳು. ಇದಕ್ಕೆ ನಗರದ ರೈಲ್ವೆ ಸೇತುವೆಯ ಕೆಳಗಿನ ರಸ್ತೆ ಸಾಕ್ಷಿಯೆಂಬಂತಾಗಿದೆ. ಇದೊಂದೆ ಬಹುತೇಕ ರಸ್ತೆಗಳ ಪಾಡು ಇದೆ. ಅವೈಜ್ಞಾನಿಕವಾಗಿ ರಸ್ತೆಗಳು,  ಅಂಡರ್ ಪಾಸ್ ಗಳು  ನಿರ್ಮಾಣದ ಹಂತದಲ್ಲಿ ಸಂಬಂಧಪಟ್ಟವರು ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆಯನ್ನು ಮಾಡಬೇಕಾಗಿತ್ತು.

ಮತ್ತು ಪಾದಚಾರಿಗಳಿಗಾಗಿ ಓಡಾಡಲು ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕಿತ್ತು. ಆದರೆ ಅದು ಕೂಡ ಆಗಿಲ್ಲ. ನಿನ್ನೆ ಸುರಿದ ಭಾರೀ ಮಳೆಗೆ ರೈಲ್ವೆ ಸೇತುವೆ ಕೆಳಗಿನ ರಸ್ತೆಯು ಮಳೆ ನೀರಿನಿಂದ ಚರಂಡಿಯಂತಾಗಿದೆ. ನಗರಾಡಳಿತ ಇಂತಹ ಸಮಸ್ಯೆಗಳು ಕಣ್ಣೆದುರಿಗಿದ್ದರೂ ಕಂಡು ಕಾಣದಂತೆ ಜಾಣ ಕುರುಡುತನ ಮೆರೆಯುತ್ತಿದ್ದಾರೆ ಎಂದು ಸಂಚಾರಕರು ನಗರಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟವರು ಇಂತಹ ಸಮಸ್ಯೆಗಳ ಕಡೆ ಗಮನಹರಿಸಿ, ಬಗೆಹರಿಸಬೇಕಾಗಿದೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770890
Today
Yesterday
This Week
Last Week
This Month
Last Month
All days
6062
14978
21040
3647859
197117
189062
3770890
Your IP: 54.221.76.68
2017-12-18 08:59