Breaking News

ಇಂಡಿಯಾ ಇಂಟರ್ ನ್ಯಾಷನಲ್ ಪೆಸ್ಟಿವಲ್-2017 ವಿಜ್ಞಾನ ಮೇಳಕ್ಕೆ ನವಲಿ ಶಾಲೆಯ ವಿದ್ಯಾರ್ಥಿಗಳು ಆಯ್ಕೆ

Written by 
Published: 13 October 2017
188 times Last modified on Friday, 13 October 2017 17:07

ಕೆ.ಎನ್.ಪಿ.ವಾರ್ತೆ,ನವಲಿ,ಅ.13;

ವರದಿ : ನವಲಿ ಸ್ವಾಮಿ

ಚೆನೈನಲ್ಲಿ ನಡೆಯುವ  ಇಂಡಿಯಾ ಇಂಟರ್ ನ್ಯಾಷನಲ್ಲ್ ಪೆಸ್ಟಿವಲ್-2017 ವಿಜ್ಞಾನ ಮೇಳಕ್ಕೆ ಕೊಪ್ಪಳ ಜಿಲ್ಲೆಯ ಪ್ರತಿನಿಧಿಗಳಾಗಿ ನವಲಿ ಸರಕಾರಿ ಫ್ರೌಢ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಕೇಂದ್ರ ಸರಕಾರದ ಸೈನ್ಸ ಆಂಡ್ ಟೆಕ್ನಾಲಜಿ ಸಚಿವಾಲಯದಿಂದ ಅಕ್ಟೊಬರ್ 13 ರಿಂದ 16ರವರೆಗೆ ಚೆನೈ ಐಐಟಿ ಮದ್ರಾಸ್ ಅಣ್ಣಾ ಯುನಿವರ್ಸಿಟಿ ಆವರಣದಲ್ಲಿ ನಡೆಯಲಿರುವ ಇಂಡಿಯಾ ‍ಇಂಟರ್ ನ್ಯಾಷನಲ್ ಸೈನ್ಸ ಪೆಸ್ಟಿವಲ್ -2017 ಗೆ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ತಾಲೂಕಿನ ನವಲಿ ಗ್ರಾಮದ ಸರಕಾರಿ ಫ್ರೌಢ ಶಾಲೆಯ 5 ಪ್ರತಿಭಾವಂತ  ವಿದ್ಯಾರ್ಥಿಗಳು ಹಾಗೂ ಒಬ್ಬ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ವಿಜ್ಞಾನ ಶಿಕ್ಷಕರಾದ ಶ್ರೀ ಹನುಮಂತಯ್ಯ ಹಾಗೂ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ರಾಜು ನಾಯ್ಕ, ಶರಣಬಸವ ವೆಂಕಟೇಶ,ರಾಜು ಆರ್, ವೆಂಕಟೇಶ ಈ ವಿಜ್ಞಾನ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.

ನಾಲ್ಕು ದಿನಗಳವರೆಗೆ ನಡೆಯುವ ಈ ಮೇಳದಲ್ಲಿ ವಿಜ್ಞಾನ ಲೋಕದ ವಿಸ್ಮಯಗಳು ಅನಾವರಣಗೊಳ್ಳಲಿದ್ದು, ಈ ವಿಜ್ಞಾನ ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ವಿಜ್ಞಾನಿಗಳೊಂದಿಗೆ ಚರ್ಚೆ ನಡೆಸುವ ಮೂಲಕ ಅನೇಕ ಕೌತಕಗಳಿಗೆ ಉತ್ತರ ಕಂಡುಕೊಳ್ಳಲಿದ್ದಾರೆ ಮತ್ತು ಸಂಬಂಧಪಟ್ಟ ವಿಜ್ಞಾನಿಗಳ ಜೊತೆಯಲ್ಲಿ ಪ್ರಶ್ನೋತ್ತರ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಶಾಲಾ ಕೀರ್ತಿಗೆ ಭಾಜನರಾಗಲಿದ್ದಾರೆ.

ಅ,11ರಂದು ಬೆಂಗಳೂರು ಮೂಲಕ ಚೈನ್ಯ ತಲುಪಲಿರುವ ಈ ತಂಡಕ್ಕೆ ಮಾನ್ಯ ಸಂಸದರಾದ ಕರಡಿ ಸಂಗಣ್ಣನವರು, ಜಿಲ್ಲಾಧಿಕಾರಿಗಳು, ಶಾಲಾ ಮುಖ್ಯೋಪಾಧ್ಯಾಯರಾದ ಪರಯ್ಯ ಅರವಟಿಗೆಮಠ, ಶ್ರೀ ವಿರಭದ್ರೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರು, ಶಾಲಾ ಆಡಳಿತ ಮಂಡಿಳಿಯವರು, ನವಲಿ ಗ್ರಾಮ ಪಂಚಾಯತ ಸದಸ್ಯರು, ಮುಖಂಡರು ಶುಭ ಹಾರೈಸಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3509702
Today
Yesterday
This Week
Last Week
This Month
Last Month
All days
10321
5787
16108
3460843
124991
209201
3509702
Your IP: 23.20.162.200
2017-11-20 16:58