Breaking News

ಜ.27ರಂದು ಹೊಸಪೇಟೆಗೆ ರಾಹುಲ್ ಗಾಂಧಿ ಭೇಟಿ- ರಮೇಶ ಜಾರಕಿಹೊಳಿ.

Written by 
Published: 03 January 2018
69 times Last modified on Wednesday, 03 January 2018 16:46
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಸಚಿವ ರಮೇಶ್ ಜಾರಕಿಹೊಳಿ, ಉಗ್ರಪ್ಪ, ಇತರ ಮುಖಂಡರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಸಚಿವ ರಮೇಶ್ ಜಾರಕಿಹೊಳಿ, ಉಗ್ರಪ್ಪ, ಇತರ ಮುಖಂಡರು.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.03;

ವರದಿ : ಟಿ.ಗಣೇಶ

ಇದೇ ಜನವರಿ 27 ರಂದು ಬಳ್ಳಾರಿ ಜಿಲ್ಲೆಗೆ ಎ.ಐ.ಸಿ.ಸಿ.ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ ಭೇಟಿ- ರಮೇಶ್‍ಜಾರಕಿಹೊಳಿ.

ಜನವರಿ 27 ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಆಗಮಿಸಲಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಾದ ನಂತರ ಪ್ರಥಮ ಬಾರಿಗೆ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಅವರು ಪ್ರವಾಸ ಮಾಡಲಿದ್ದಾರೆಂದು ಸಣ್ಣ ಕೈಗಾರಿಕೆ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಬುಧವಾರ ಬೆಳ್ಳಿಗ್ಗೆ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ರಾಹುಲ್‍ಗಾಂಧಿ ಅವರು ರಾಷ್ಟ್ರೀಯ ಅಧ್ಯಕ್ಷರಾದ ನಂತರ ಪ್ರಥಮವಾಗಿ ಬಳ್ಳಾರಿ ಜಿಲ್ಲೆಯ ಹೊಸಪೇಟೆಗೆ ಭೇಟಿ ನೀಡಲಿದ್ದಾರೆ. ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಅವರ ಭೇಟಿ ಅತ್ಯಂತ ಮಹತ್ವವನ್ನು ಪಡೆಯುತ್ತದೆ ಎಂದು ಹೇಳಿದರು. ಇವರ ಭೇಟಿಗೆ ಸ್ಥಳ ಪರಿಶೀಲನೆಗೆ ಬಂದಿರುವುದಾಗಿ ಸಚಿವರು ತಿಳಿಸಿದರು.

ಈ ಸಂಧರ್ಭದಲ್ಲಿ ಉಗ್ರಪ್ಪ, ವಿಧಾನ ಪರಿಷತ್ ಸದಸ್ಯ ಅಲ್ಲಂವೀರಭಧ್ರಪ್ಪ, ಮಾಜಿ ಶಾಸಕ ಸೂಯ್ಯನಾರಾಯಣ ರೆಡ್ಡಿ, ಗ್ರಾಮೀಣ ಶಾಸಕ ಎನ್,ವೈ.ಗೋಪಾಲಕೃಷ್ಣ, ಇತರ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250436
Today
Yesterday
This Week
Last Week
This Month
Last Month
All days
9843
16742
76164
4062809
281531
395132
4250436
Your IP: 54.234.190.237
2018-01-18 15:55