Breaking News

ಜ.5ರಂದು ಬಳ್ಳಾರಿಗೆ ಬಿಜೆಪಿ ಪರಿವರ್ತನಾ ಯಾತ್ರೆ

Written by 
Published: 02 January 2018
46 times Last modified on Tuesday, 02 January 2018 12:48

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.02;

ವರದಿ : ಟಿ.ಗಣೇಶ್

ಬಿಜೆಪಿ ಪರಿವರ್ತನಾ ಯಾತ್ರೆಯು ವಿವಿಧ ಜಿಲ್ಲೆಗಳಲ್ಲಿ  ಪ್ರವಾಸಮಾಡಿ, ಜನವರಿ 5ರಂದು ಬಳ್ಳಾರಿಗೆ ಬಂದು ಸೇರಲಿದೆ ಎಂದು ನಗರದ ಮಾಜಿ ಶಾಸಕ ಸೋಮಶೇಖರ ರೆಡ್ಡಿ ತಿಳಿಸಿದರು.

ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾತ್ರೆಯು ಜನವರಿ 4ರಂದು ಸಂಜೆ ನಗರವನ್ನು ಪ್ರವೇಶಿಸಲಿದೆ. ನಗರದ ಪ್ರವಾಸಿ ಮಂದಿರದಲ್ಲಿ ರಾಜಕೀಯ ಮುಖಂಡರು ಅಂದು ರಾತ್ರಿ ವಾಸ್ಥವ್ಯ ಹೂಡಲಿದ್ದಾರೆ. ಜ.5ರಂದು ಬೆಳಿಗ್ಗೆ ಯಾತ್ರೆಯು, ಮುಖಂಡರೊಂದಿಗೆ ರಾಯಲ್ ವೃತ್ತದಿಂದ ಬೆಂಗಳೂರು ರಸ್ತೆಯ ಮೂಲಕ ಜೈನ್ ಮಾರ್ಕೆಟ್ ಮುಖಾಂತರ ಜಿಲ್ಲಾ ಕ್ರೀಡಾಂಗಣಕ್ಕೆ ಸೇರಲಿದೆ.

ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮಗಳು ನಡೆಯಲಿದ್ದು, ಈ ಸಮಾವೇಶದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ಅನಂತಕುಮಾರ್, ಸದಾನಂದಗೌಡ, ದಿ.ಎನ್.ಟಿ.ಆರ್.ಮಗಳು ಪ್ರರಂದೇಶ್ವರಿ, ಮುರಳೀಧರ್‍ ರಾಯ್ಕರ್, ಸೇರಿದಂತೆ ಇತರ ಅನೇಕ ರಾಜಕೀಯ ಮುಖಂಡರು ಆಗಮಿಸುವರು ಎಂದು ಹೇಳಿದರು. 

ಕಾಂಗ್ರಸ್ ಆಡಳಿತದ ಬಗ್ಗೆ ಬೇಸರ :

ನಗರದಲ್ಲಿ ಕಾಂಗ್ರೆಸ್ ಆಡಳಿತವು ಜನರಿಗೆ ಸಾಕಾಗಿ ಹೋಗಿದೆ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಸೋಮಶೇಖರ ರೆಡ್ಡಿ ನುಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಕೆಲಸಗಳು ಮರಿಚಿಕೆಯಾಗಿವೆ. ರಸ್ತೆ, ನೀರಿನ ಸಮಸ್ಯೆಗಳನ್ನು ಜನರು ಎದುರಿಸುವಂತಾಗಿದೆ. ನಮ್ಮ ಅಧಿಕಾರದ ಅವಧಿ ಯಲ್ಲಿ ನಾವು ಮಾಡಿದ ಅಭಿವೃದ್ಧಿಗಳನ್ನು ಜನರು ನೆನೆಯುವುದರ ಮುಖಾಂತರ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷವು 9 ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದರು. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250389
Today
Yesterday
This Week
Last Week
This Month
Last Month
All days
9796
16742
76117
4062809
281484
395132
4250389
Your IP: 54.234.190.237
2018-01-18 15:53