Breaking News

ಜ.8ರಂದು ಉಪ್ಪಾರರ ಬೃಹತ್ ಪ್ರತಿಭಟನಾ ಧರಣಿ

Written by 
Published: 07 January 2018
34 times Last modified on Sunday, 07 January 2018 15:42

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.07;

ವರದಿ : ಟಿ.ಗಣೇಶ್

ಉಪ್ಪಾರರ ಜನಾಂಗವನ್ನು ಎಸ್.ಟಿ.ಮೀಸಲಾತಿಗಾಗಿ ಆಗ್ರಹಿಸಿ, ಜನವರಿ 8ರಂದು ಬೆಳಿಗ್ಗೆ 10:30ಕ್ಕೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಭಗೀರಥ ಸಮಾಜದ ಜಿಲ್ಲಾ ಅಧ್ಯಕ್ಷ ಉಪ್ಪಾರ ಎರ್ರಿಸ್ವಾಮಿ ತಿಳಿಸಿದರು.

ನಿನ್ನೆ ನಗರದ ಖಾಸಗಿ ಹೊಟೆಲ್‍ನಲ್ಲಿ ಕರೆದ ಸುಧ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಸಮಾಜವಾಗಿದೆ. ನಮ್ಮ ಪೂರ್ವಜರು ಗಾಂಧಿ ಕಾಲದಿಂದಲೂ ಉಪ್ಪನ್ನು ತಯಾರು ಮಾಡುವಂತಹ ಕಾರ್ಯದಿಂದ ಬಂದಿರುವುದರಿಂದ ನಮಗೆ ಉಪ್ಪಾರರು ಎಂದು ಹೆಸರು ಬಂದಿದೆ.

ಹಾಗೂ ಗಾಂಧಿಜಿಯವರು ಅಂದು ಉಪ್ಪಿನ ಸತ್ಯಾಗ್ರಹವನ್ನು, ಉಪವಾಸ ಸತ್ಯಾಗ್ರಹವನ್ನು ಮಾಡಿ ದೇಶಕ್ಕಾಗಿ ಹೋರಾಟ ಮಾಡಿದ್ದರು. ನಮ್ಮ ಉಪ್ಪಾರರ ಮೀಸಲಾತಿ ಹೋರಾಟ ಸಮಿತಿ, ಬಳ್ಳಾರಿ ಜಿಲ್ಲಾ ಘಟಕ ಹಾಗೂ ಬಳ್ಳಾರಿ ಜಿಲ್ಲಾ ಶ್ರೀ ಭಗೀರಥ ಉಪ್ಪಾರ ಸಂಘಗಳಿಂದ ಉಪ್ಪಾರರ ಎಸ್.ಟಿ.ಮೀಸಲಾತಿಗಾಗಿ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ.

ನಮ್ಮ ಉಪ್ಪಾರರು ಅನೇಕ ವರ್ಷಗಳಿಂದ ಮೀಸಲಾತಿಗಾಗಿ ಹೋರಾಟ ಮಾಡಿದ್ದರೂ, ಇದುವರೆಗೆ ಸರ್ಕಾರಗಳು ಇದರ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ. ರಾಜ್ಯದಲ್ಲಿ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಅವರ ಅವಧಿಯಲ್ಲಿರುವ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ನಮ್ಮ ಮನವಿ ಸಲ್ಲಿಸಿದಾಗ ಅವರು ನಿಮ್ಮ ಸಮಾಜವನ್ನು ಮೀಸಲಾತಿಯಲ್ಲಿ ಸೇರಿಸುವುದಾಗಿ ಭರವಸೆ ನೀಡಿದ್ದರು.

ಆದರೆ ಇದುವರೆಗೆ ಅವರು ತಮ್ಮ ಭರವಸೆಗಳನ್ನು ಮರೆತಿದ್ದಾರೆ ಎಂದು ಹೇಳಿದರು. ನಮ್ಮ ಸಮುದಾಯವನ್ನು ಎಸ್.ಟಿ.ಗೆ. ಸೇರಿಸುವಲ್ಲಿ ವಿಳಂಬ ಮಾಡಿದಲ್ಲಿ ಬೆಂಗಳೂರಿನಲ್ಲಿ ಬೃಹತ್ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿರ್ಮಾನಿಸಿದ್ದೇವೆ ಎಂದು ನುಡಿದರು. ಈ ಸಂದರ್ಭದಲ್ಲಿ ಸಿದ್ದೇಶ್ ಪ್ರಧಾನ ಕಾರ್ಯದರ್ಶಿ, ಕ್ರಿಷ್ಣಯ್ಯ ಉಪ್ಪಾರ ತಾಲೂಕು ಭಗೀರಥ ಉಪ್ಪಾರ ಸಂಘ, ಇತರರು ಭಾಗವಹಿಸಿದ್ದರು. 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250387
Today
Yesterday
This Week
Last Week
This Month
Last Month
All days
9794
16742
76115
4062809
281482
395132
4250387
Your IP: 54.234.190.237
2018-01-18 15:53