Breaking News

ಜನಪರ ಉತ್ಸವ -2017

Written by 
Published: 08 October 2017
55 times Last modified on Sunday, 08 October 2017 06:58

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.08;

ವರದಿ : ಟಿ.ಗಣೇಶ್

ಇಂದು ಸಂಜೆ ಜನಪರ ಉತ್ಸವ -2017 ಜರುಗಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಇಂದು ಸಂಜೆ 5.00 ಗಂಟೆಗೆ ಹಗರಿಬೊಮ್ಮನಹಳ್ಳಿಯ ಶ್ರೀ ಮಂಗನಹಳ್ಳಿ ಸಂಜೀವ ಮೂರ್ತಿ ಆವರಣದ ಬಯಲು ವೇದಿಕೆಯಲ್ಲಿ ವಿಶೇಷ ಘಟಕ ಯೋಜನೆಯಡಿ ಜನಪರ ಉತ್ಸವ – 2017ರ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಕಾರ್ಮಿಕ, ಕೌಶಲ್ಯಾಭಿವೃದ್ಧಿ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು ನೇರವೇರಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಗಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೀಮಾನಾಯ್ಕ ಎಲ್.ಬಿ.ಪಿ ವಹಿಸುವರು, ಮುಖ್ಯ ಅತಿಥಿಗಳಾಗಿ ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ. ವಿಶೇಷ ಉಪನ್ಯಾಸವನ್ನು ಬಳ್ಳಾರಿಯ  ಕಟ್ಟೇಸ್ವಾಮಿ ನೀಡುವರು.

ನಂತರ ತಂಬ್ರಹಳ್ಳಿಯ ಭಜಂತ್ರಿ ಯರ್ರಿಸ್ವಾಮಿ ಅವರಿಂದ ಸ್ಯಾಕ್ಸೋಫೋನ್, ಸಂಡೂರಿನ ಶ್ರೀಮತಿ ಶಾಂತಬಾಯಿ ಮತ್ತು ಸಂಗಡಿಗರಿಂದ ಲಂಬಾಣಿ ನೃತ್ಯ, ಹೊಸಪೇಟೆಯ ಕೆ.ವಿರುಪಾಕ್ಷಪ್ಪ ಇವರಿಂದ ಸುಡುಗಾಡು ಸಿದ್ದರ ಕೈ ಚಳಕ, ಮತ್ತು ಶಂಕ್ರಪ್ಪ ಬಾದಗಿ ಅವರಿಂದ ಮೋರ್ಚಿಂಗ್ ವಾದನ, ಬಳ್ಳಾರಿಯ ಕು. ವಿ.ಉಮಾಮಹೇಶ್ವರಿ ಮತ್ತು ಸಂಗಡಿಗರಿಂದ ಸಮೂಹ ನೃತ್ಯ, ಕೊಂಬಳಿಯ ರಾಮಣ್ಣ ಕಲಿಕೇರಿ ಇವರಿಂದ ಶಹನಾಯಿ ವಾದನ, ಹೊಸಪೇಟೆಯ ಯಲ್ಲಪ್ಪ ಅವರಿಂದ ಜಾನಪದ ಗೀತೆಗಳ ಗಾಯನ, ಬಳ್ಳಾರಿಯ ಕೆ.ಹೊನ್ನೂರಸ್ವಾಮಿ ಅವರಿಂದ ಕೃಷ್ಣದೇವರಾಯ ತೊಗಲುಗೊಂಬೆ ಪ್ರದರ್ಶನ, ಚಿಂತ್ರಪಳ್ಳಿಯ ಮೈಲಮ್ಮದೇವಿ ಪರಿಶಿಷ್ಟ ಜಾತಿ ಜಾನಪದ ಮಹಿಳಾ ಸಂಘದಿಂದ ಸಂಪ್ರದಾಯ ಹಾಡುಗಳು, ಮರಿಯಮ್ಮನಹಳ್ಳಿಯ ಎಲ್. ಪ್ರಶಾಂತ್ ಕುಮಾರ ಮತ್ತು ಸಂಗಡಿಗರಿಂದ “ಕೆಂಪು ಗುಲಾಬಿ” ಸಾಮಾಜಿಕ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ.

ಆವರಣದ ಬಯಲು ಜಾಗದಲ್ಲಿ ಚಿತ್ರಕಲಾವಿದರಾದ  ರಾಜಶೇಖರ್.ಹೆಚ್. ಶರಣಪ್ಪ, ಇವರಿಂದ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ವೇದಿಕೆ ಕಾರ್ಯಕ್ರಮದಲ್ಲಿ 10 ಕಲಾಂಡಗಳು ಸೇರಿ ಒಟ್ಟು 90 ಜನ ಕಲಾವಿದರು ಭಾಗವಹಿಸಲಿದ್ದಾರೆ. ಇದಕ್ಕೂ ಮೊದಲು ಅಪರಾಹ್ನ 3.00 ಗಂಟೆಗೆ ಹಗರಿಬೊಮ್ಮನಹಳ್ಳಿಯ ಹಗರಿ ಆಂಜನೇಯ ದೇವಸ್ಥಾನದಿಂದ ಮಂಗನಹಳ್ಳಿ ಸಂಜೀವ ಮೂರ್ತಿ ಬಯಲು ಆವರಣದವರೆಗೆ ಜಾನಪದವಾಹಿನಿ ಮೆರವಣಿಗೆಯಲ್ಲಿ 8 ಕಲಾತಂಡಗಳು ರಾಮಸಾಗರದ ಕೆ.ವಸಂತಕುಮಾರ್ ಮತ್ತು ಸಂಗಡಿಗರಿಂದ ಕಹಳೆವಾದನ, ರಾಮನಗರದ ಶಿವಶಂಕರನಾಯ್ಕ ಮತ್ತು ಸಂಗಡಿಗರಿಂದ ಪೂಜಾ ಕುಣಿತ, ಗಾದಿಗನೂರಿನ ಕೆ.ಮೌನೇಶ್ ಮತ್ತು ಸಂಗಡಿಗರಿಂದ ತಾಷರಂಡೋಲ್, ಇಮಡಾಪುರದ ಶ್ರೀಮತಿ ಆರ್.ಲಕ್ಷ್ಮಿ ಮತ್ತು ಸಂಗಡಿಗರಿಂದ ಮಹಿಳಾ ಉರುಮೆವಾದ್ಯ, ಹಗರಿಬೊಮ್ಮನಹಳ್ಳಿಯ ವೆಂಕಟೇಶಲು ಮತ್ತು ಸಂಗಡಿಗರಂದ ಹಗಲುವೇಷ, ಹೊಸಪೇಟೆಯ ಏಸೋಫ್ ಮತ್ತು ಸಂಗಡಿಗರಿಂದ ಮರಗಾಲು ಕುಣಿತ, ಬೆಳಗಾವಿಯ ಶ್ರೀ ಮಲ್ಲಪ್ಪ ಲಕ್ಷ್ಮಣ ತಾಂಬಳ ಮತ್ತು ಸಂಗಡಿಗರಿಂದ ಕರಬಲ್ ಕುಣಿತ  ಕಲಾಪ್ರದರ್ಶನಗಳು ಭಾಗವಹಿಸಲಿದ್ದು, ಮೆರವಣಿಗೆಯಲ್ಲಿ ಒಟ್ಟು 115 ಜನ ಕಲಾವಿದರು ಭಾಗವಹಿಸಲಿದ್ದಾರೆ. 

ಜನಪರ  ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹಗರಿಬೊಮ್ಮನಹಳ್ಳಿಯ ಕಲಾಸಕ್ತರು, ಸಾರ್ವಜನಿಕರು ಭಾಗವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಬಿ.ನಾಗರಾಜ ಪತ್ರಿಕಾ ಪ್ರಕಟಣೆಗೆ ಕೋರಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750232
Today
Yesterday
This Week
Last Week
This Month
Last Month
All days
382
13442
102373
3588738
176459
189062
3750232
Your IP: 23.22.136.56
2017-12-17 00:36