Breaking News

ಜನಪರ ಉತ್ಸವ - 2017 ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

Written by 
Published: 12 October 2017
56 times Last modified on Thursday, 12 October 2017 15:16

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.12;

ವರದಿ : ಟಿ.ಗಣೇಶ್

ಜನಪರ ಉತ್ಸವ - 2017 ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿನೆಯು ನಿನ್ನೆ ಜರುಗಿತು.

ಬಳ್ಳಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಭಾರತಿ ತಿಮ್ಮಾರೆಡ್ಡಿ, ನಗರದ ಕೂಡ್ಲಿಗಿ ವೃತ್ತದ ಬಳಿ ಎಂ.ಸಂಜೀವಮೂರ್ತಿ ಅವರ ಬಯಲು ಜಾಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿಶೇಷ ಯೋಜನೆಯಾದ ‘ಜನಪರ ಉತ್ಸವ -2017 ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ನಂತರ ಮಾತನಾಡಿದ ಅವರು, ಹಗರಿಬೊಮ್ಮನಹಳ್ಳಿ ಗ್ರಾಮೀಣ ಬದುಕಿನ ನೈಜ ಸಂಸ್ಕೃತಿಯನ್ನು ಜನಪದ ಕಲೆಗಳು ಬಿಂಬಿಸುತ್ತವೆ. ಗ್ರಾಮೀಣ ಜನಪದ ಕಲೆಗಳಾದ ಸುಗ್ಗಿ ಕುಣಿತ, ಚರ್ಮವಾದ್ಯ, ತೊಗಲು ಗೊಂಬೆ, ಗೀಗೀ ಪದಗಳು, ಬಯಲಾಟ, ಲಾವಣಿ ಪದ, ಹಂತಿಯ ಹಾಡುಗಳು ಮುಂತಾದ ಕಲೆಗಳು ಹಳ್ಳಿಗಾಡಿನ ಜನತೆಯ ಬದುಕಿನಲ್ಲಿ ಇಂದಿಗೂ ಜೀವಂತವಾಗಿ ಉಳಿದಿವೆ.

ಜನಪದ ಕಲಾವಿದರು ಕಲಾ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ಸಾಗಿಸುವ ಮಹತ್ವದ ಕಾರ್ಯ ನಡೆಸುತ್ತಿದ್ದಾರೆ. ರೈತಾಪಿವರ್ಗದ ಜನರ ಬದುಕಿನ ನೈಜಸ್ಥಿತಿಯನ್ನು ಬಿಂಬಿಸುವ ಕಲೆಗಳು ಜನಮನದಲ್ಲಿ ಉಳಿದಿವೆ. ಈ ಕಲಾ ಪ್ರಕಾರಗಳನ್ನು ಬೇರೆ ಬೇರೆ ಊರುಗಳಲ್ಲಿ ಪ್ರಚಾರಪಡಿಸುವ ಕಾರ್ಯ ನಡೆಸಿ, ನಾಡಿನಾದ್ಯಂತ ಈ ಪರಂಪರೆಯ ಸೊಗಡು ಹರಡುವಂತೆ ಮಾಡಬೇಕಾಗಿದೆ. ಇಂತಹ ಕಲೆಗಳು ಮತ್ತು ಕಲಾವಿದರಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಬೇಕಿದೆ. ಹಾಗಾದಲ್ಲಿ ಮಾತ್ರ ಕಲೆ, ಸಂಸ್ಕೃತಿ  ಉಳಿಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಜಾನಪದ ಕಲೆ ಉಳಿಸಿ ಬೆಳೆಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಹೆಚ್ಚು ಶ್ರಮ ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ. ಆಧುನಿಕತೆಯ ಗಾಢ ಪ್ರಭಾವದಿಂದ ನಮ್ಮ ಶ್ರೀಮಂತ ಜನಪದ ಕಲಾ ಪ್ರಕಾರಗಳು ನಶಿಸುತ್ತಿವೆ. ನಮ್ಮ ದೇಶದ ಹಲವು ಕಾರ್ಯಕ್ರಮಗಳಿಗೆ ವಿದೇಶಿ ಕಲಾವಿದರನ್ನು ಕರೆಸಿ ಉನ್ನತ ಗೌರವ ಸಲ್ಲಿಸಲಾಗುತ್ತಿದೆ.

ನಮ್ಮ ಜತೆ ಬದುಕುತ್ತಿರುವ ಕಲಾವಿದರನ್ನು ಕಡೆಗಣಿಸುವ ಸಂಪ್ರದಾಯ ಬೆಳೆಯುತ್ತಿರುವುದು ನಿಜಕ್ಕೂ ಆತಂಕಕಾರಿ. ನಮ್ಮ ನಾಡಿನ ಕಲಾವಿದರ ಬದುಕನ್ನು ಹಸನುಗೊಳಿಸಿ ಅವರಲ್ಲಿ ಹುದುಗಿರುವ ಜನಪದ ಕಲಾ ಪ್ರಕಾರಗಳನ್ನು ಪೆÇೀಷಿಸಿ ಬೆಳೆಸುವ ಕಾರ್ಯ ನಡೆಯಬೇಕಾಗಿದೆ. ಇಂತಹ ಜನಪದ ಉತ್ಸವಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹೆಚ್ಚೆಚ್ಚು ನಡೆಯಬೇಕಿವೆ ಎಂದು  ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಬೆಸ್ಟ್ ಕಾಲೇಜಿನ ಶಿಕ್ಷಕರಾದ ಕಟ್ಟೆಸ್ವಾಮಿ ಕರೆ ನೀಡಿದರು.
 
ಮುಖ್ಯ ಅತಿಥಿಗಳಾಗಿದ್ದ ಜಿ.ಪಂ. ಸದಸ್ಯ ಗುರುಸಿದ್ದಪ್ಪ, ಜನಪದ ಕಲೆ ಯಾವುದೇ ಪೆÇೀಷಣೆಯಿಲ್ಲದೇ ತನ್ನಿಂದ ತಾನೇ ಬೆಳೆದು ಈ ಮಣ್ಣಿನ ಸಂಸ್ಕೃತಿಯ ಸಾರವಾಗಿದೆ. ಜನಪದ ಸಾಹಿತ್ಯದಲ್ಲಿ ಗ್ರಾಮೀಣ ಜೀವನ ಶೈಲಿ ಮತ್ತು ಜನಪದರ ಸಾಕ್ಷಿ ಪ್ರಜ್ಞೆ ಅಡಗಿದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಅನೇಕ ಕಲಾವಿದರಿದ್ದು ಅವರು ಸಾಧನೆಯಿಂದ ಕಲೆಯನ್ನು ಕರಗತಮಾಡಿಕೊಂಡು ನಮ್ಮ ಪ್ರದೇಶದ ಹೆಸರನ್ನು ಎಂ.ಪಿ.ಪ್ರಕಾಶರಂತೆ ನಾಡಿನಾದ್ಯಂತ ಪ್ರಸಾರ ಮಾಡಬೇಕು. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಪಡೆಯಬೇಕು ಎಂದು ಹೇಳಿದರು.

ನಗರೀಕರಣದ ನಡುವೆಯೂ ಜನಪದ ಉಳಿದಿರುವುದನ್ನು ನೋಡಿದರೆ ನಿಜವಾಗಿ ಜನಪದ ಕಲೆಗಳಿಗೆ ಶಕ್ತಿ ಇದೆ. ಜನಪದ ಕಲೆಗಳು ಹಳ್ಳಿ ಮತ್ತು ರಾಜ್ಯಗಳಿಗೆ ಸೀಮಿತವಾಗಿರದೇ ದೇಶ-ಭಾಷೆ ಮೀರಿದ ಕಲೆಯಾಗಿದೆ. ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಅದು ಇಲ್ಲಿಗೆ ನಾಶವಾಗಬಾರದು. ಅಳಿವಿನ ಅಂಚಿನಲ್ಲಿರುವ ಇಂತಹ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಯುವಕರು ಮುಂದೆ ಬರಬೇಕು ಎಂದು ಮುಖ್ಯ ಅತಿಥಿಗಳಾದ ಜಿ.ಪಂ. ಸದಸ್ಯರಾದ ಮಲ್ಲಿಕಾರ್ಜುನ ನಾಯ್ಕ್ ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಗರಿಬೊಮ್ಮನಹಳ್ಳಿ ಪುರಸಭೆಯ ಅಧ್ಯಕ್ಷರಾದ ತಳವಾರ ರಾಘವೇಂದ್ರ ಮಾತನಾಡಿ, ಸಾವಿರಾರು ವರ್ಷದ ಹಿಂದೆ ಮನೋರಂಜನೆಗೆ ಇದ್ದ ಒಂದೆ ಮಾಧ್ಯಮ ಜಾನಪದ. ಮಾನವನು ತಾನು ಮಾಡುವ ಕೆಲಸಗಳಲ್ಲೆಲ್ಲಾ ತನ್ಮಯತೆಯನ್ನು ತುಂಬಲು ಮಾಡಿದ ಪ್ರಯತ್ನಗಳ ಸರಮಾಲೆಯೇ ಜಾನಪದವಾಗಿದೆ. ಇದರ ಕುರಿತು ನಿರಂತರ ಅಧ್ಯಯನ, ಹೊಸತನಕ್ಕೆ ಒಡ್ಡಿಕೊಳ್ಳುವಿಕೆ ಜೊತೆಗೆ ಮುಂದಿನ ಪೀಳಿಗೆಯವರು ಆಸಕ್ತಿವಹಿಸುವುದು ಮೊದಲು ಆಗಬೇಕಾದ ಕೆಲಸ, ಆ ನಿಟ್ಟಿನಲ್ಲಿ ನಮ್ಮ ಚಿಂತನೆಗಳಿರಲಿ ಎಂದು ಹೇಳಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಪುರಸಭೆಯ ಸದಸ್ಯರಾದ ಜೋಗಿ ಹನುಮಂತಪ್ಪ, ಇ. ಭರತ, ಮುಖಂಡರಾದ ಹನುಮಂತಪ್ಪ ಮತ್ತು ರಾಜ್ಯಪ್ರಶಸ್ತಿ ವಿಜೇತ ಕಲಾವಿದ ವಿರುಪಾಕ್ಷಪ್ಪ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ನಾಗರಾಜ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಯಲ್ಲಪ್ಪಭಂಡಾರಕರ್ ನಾಡಗೀತೆ ಹಾಡಿದರು. ಬಿ.ನಾಗರಾಜ ಅವರು ಸ್ವಾಗತ ಮತ್ತು ಕಾರ್ಯಕ್ರಮದ ಹಿನ್ನಲೆ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮತಿ ಹೆಚ್.ಎಂ.ವನಿತಾ ಮತ್ತು ಪರಮೇಶ್ವರಯ್ಯ ಸೊಪ್ಪಿಮಠ ನಿರೂಪಿಸಿದರು.

ಜನಪದವಾಹಿನಿ ಸೆಳೆತ:- ವೇದಿಕೆ ಕಾರ್ಯಕ್ರಮಕ್ಕಿಂತ ಮುಂಚಿತವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಕಹಳೆವಾದನ, ಪೂಜಾಕುಣಿತ, ತಾಷರಂಡೋಲ್, ಹಲಗೆ ವಾದನ, ಮಹಿಳೆ ಉರುಮೆ ವಾದ್ಯ, ಹಗಲುವೇಷ, ಮರಗಾಲುಕುಣಿತ, ಕರಬಲ್ ಕುಣಿತಗಳ ಜನಪದ ಕಲಾತಂಡಗಳ ಮೆರವಣಿಗೆ ಜನಪದ ವಾಹಿನಿಯು ಜನರನ್ನು ತನ್ನತ್ತ ಸೂಜಿಗಲ್ಲಿನಂತೆ ಆಕರ್ಷಿಸಿತು.

ಮನಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು:- ವೇದಿಕೆ ಕಾರ್ಯಕ್ರಮದಲ್ಲಿ ಸ್ಯಾಕ್ಸೋಫೋನ್, ಲಂಬಾಣಿ ನೃತ್ಯ, ಸುಡುಗಾಡುಸಿದ್ದರ ಕೈ ಚಳಕ, ಮೋರ್ಚಿಂಗ್ ವಾದನ, ಸಮೂಹ ನೃತ್ಯ, ಶಹನಾಯಿ, ಜಾನಪದ ಗೀತೆಗಳು, ತೊಗಲುಗೊಂಬೆ ಪ್ರದರ್ಶನ, ಸಂಪ್ರದಾಯಿಕ ಹಾಡುಗಳು, ಸಾಮಾಜಿಕ ಹಾಸ್ಯ ನಾಟಕಗಳು, ಸೇರಿದ್ದ ಅಪಾರ ಪ್ರಮಾಣದ ಜನರ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾದವು.Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750325
Today
Yesterday
This Week
Last Week
This Month
Last Month
All days
475
13442
102466
3588738
176552
189062
3750325
Your IP: 23.22.136.56
2017-12-17 00:40