Breaking News

ಜನವರಿ 27ರ ಬದಲಾಗಿ ಜ.25ರಂದು ಕರ್ನಾಟಕ ಬಂದ್ ಗೆ ಕರೆ

Written by 
Published: 12 January 2018
24 times Last modified on Friday, 12 January 2018 08:33

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಜ.12;

ಮಹದಾಯಿ ನದಿ ನೀರು ವಿಚಾರವಾಗಿ ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ದಿನಾಂಕ ಬದಲಾಗಿದ್ದು, ಜನವರಿ 27ರ ಬದಲಾಗಿ ಜ.25ರಂದು ಬಂದ್ ಗೆ ಕರೆ ನೀಡಲಾಗಿದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಈ ಮೊದಲು ಜನವರಿ 27ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿತ್ತು. ದಿನಾಂಕವನ್ನು ಬದಲಿಸಿ ಜನವರಿ 25ರಂದೇ ಬಂದ್ ಆಚರಿಸಲು ಕನ್ನಡಪರ ಒಕ್ಕೂಟ ತೀರ್ಮಾನಿಸಿದೆ. ಈ ಕುರಿತು ನಿನ್ನೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ಜ. 28ರಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಜ.27ಕ್ಕೆ ಬಂದ್ ಆಚರಿಸಲು ನಿಶ್ಚಯಿಸಲಾಗಿತ್ತು. ಆದರೆ, ಆ ವೇಳೆ ಸಾಲು ಸಾಲು ರಜೆಗಳು ಇರುವುದರಿಂದ ದಿನಾಂಕವನ್ನು ಬದಲಿಸಿ ಜ. 25ರಂದು ಬಂದ್ ಗೆ ಕರೆ ನೀಡಲಾಗಿದೆ. 

ಜ.25ರಂದು, ಟೌನ್ಹಾಲ್ನಿಂದ ಫ್ರೀಡಂ ಪಾರ್ಕ್ವರೆಗೂ ಬೃಹತ್ ಜಾಥಾ ನಡೆಯಲಿದೆ. ಕನ್ನಡ ಚಿತ್ರರಂಗ ಕೂಡ ಸ್ತಬ್ಧಗೊಳ್ಳಲಿದ್ದು, ರಾಜ್ಯದಲ್ಲಿ ಚಿತ್ರ ಪ್ರದರ್ಶನವಾಗಲೀ, ಚಿತ್ರೀಕರಣವಾಗಲೀ ನಡೆಯುವುದಿಲ್ಲ. ಸ್ಯಾಂಡಲ್ ವುಡ್ ಸ್ಟಾರ್ಸ್ ಮತ್ತು ಚಿತ್ರರಂಗದ ಗಣ್ಯರು ಈ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250589
Today
Yesterday
This Week
Last Week
This Month
Last Month
All days
9996
16742
76317
4062809
281684
395132
4250589
Your IP: 54.234.190.237
2018-01-18 16:04