Breaking News

ಜನವರಿಯಿಂದ 50ಹೊಸ ತಾಲ್ಲೂಕುಗಳು ಅಸ್ತಿತ್ವಕ್ಕೆ : ಕಾಗೋಡು

Written by 
Published: 21 November 2017
48 times Last modified on Tuesday, 21 November 2017 04:39

ಕೆ.ಎನ್.ಪಿ.ವಾರ್ತೆ,ಬೆಳಗಾವಿ,ನ.21;

ರಾಜ್ಯದಲ್ಲಿ 50ಹೊಸ ತಾಲ್ಲೂಕುಗಳು ಜನವರಿ ತಿಂಗಳಿನಿಂದ ಅಸ್ತತ್ವಕ್ಕೆ ಬರಲಿವೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಮುಂದುವರೆದಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನಿನ್ನೆ ತಿಳಿಸಿದ್ದಾರೆ.

ವಿಧಾನಸಭೆಯಲ್ಲಿ ಶಾಸಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 50ಹೊಸ ತಾಲ್ಲೂಕುಗಳ ರಚನೆಗೆ ಕಳೆದ ಸೆ.6 ಮತ್ತು ಅ.16ರಂದು ತಾತ್ವಿಕವಾಗಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದಕ್ಕೆ ಹಣ ಕೂಡ ಒದಗಿಸಲಾಗಿದೆ. ಮುಂದಿನ ವರ್ಷದ ಜನವರಿಯಲ್ಲಿ ಹೊಸ ತಾಲ್ಲೂಕುಗಳು ಅಸ್ವಿತ್ವಕ್ಕೆ ಬರಲಿವೆ ಎಂದು ಹೇಳಿದರು.

ಪರಿಣಾಮಕಾರಿ ಹಾಗೂ ಸಮರ್ಥ ಆಡಳಿತ ನೀಡುವ ಸಲುವಾಗಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೇವೆ ಒದಗಿಸಲು ಮತ್ತು ಭೌಗೋಳಿಕ ಹಾಗೂ ಆಡಳಿತಾತ್ಮಕ ಅಗತ್ಯಗಳನ್ನು ಪರಿಗಣಿಸಿ ಹೊಸ ತಾಲ್ಲೂಕು ರಚಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಸಕರಿಂದ ಹೊಸ ತಾಲ್ಲೂಕುಗಳಿಗೆ ವ್ಯಾಪಕ ಬೇಡಿಕೆಗಳು ಕೇಳಿ ಬಂದವು.

ಚಿಕ್ಕಮಗಳೂರು ಜಿಲ್ಲೆಯ ಕಳಸ ಹೋಬಳಿಯನ್ನು ತಾಲ್ಲೂಕನ್ನಾಗಿ ಘೋಷಿಸಬೇಕು ಎಂದು ಬಿಜೆಪಿಯ ಸಿ.ಟಿ.ರವಿ ಮತ್ತು ಡಿ.ಎನ್‌.ಜೀವರಾಜ ಹೇಳಿದರು. ಜಮಖಂಡಿ ಕ್ಷೇತ್ರದ ಸವಳಿ ಹೋಬಳಿಯನ್ನು ಪ್ರತ್ಯೇಕ ತಾಲ್ಲೂಕನ್ನಾಗಿ ಮಾಡಬೇಕು. ಬೆಳಗಾವಿಯ ಹಾಲೋಗೇರಿ, ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಹೋಬಳಿಯನ್ನು ತಾಲ್ಲೂಕನ್ನಾಗಿ ಘೋಷಣೆ ಮಾಡಬೇಕೆಂದು ಬೇಡಿಕೆಗಳು ಕೇಳಿ ಬಂದವು. ಈ ಕುರಿತು ಪರಿಶೀಲನೆ ನಡೆಸುವುದಾಗಿ ಕಾಗೋಡು ಭರವಸೆ ನೀಡಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770734
Today
Yesterday
This Week
Last Week
This Month
Last Month
All days
5906
14978
20884
3647859
196961
189062
3770734
Your IP: 54.221.76.68
2017-12-18 08:45