Breaking News

ಜಾತಿ ಪಕ್ಷಪಾತ ಮಾಡಿದ್ದರೆ ರಾಜಕೀಯ ನಿವೃತ್ತಿ : ಯಡಿಯೂರಪ್ಪ

Written by 
Published: 29 November 2017
47 times Last modified on Thursday, 30 November 2017 08:35

ಕೆ.ಎನ್.ಪಿ.ವಾರ್ತೆ,ಬೀಳಗಿ,ನ.30;

ವರದಿ : ಬಸವರಾಜ್ ಬಾಬು ಕೋರಿ

ಜಾತಿ ಪಕ್ಷಪಾತ ಮಾಡಿದ್ದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ನನ್ನ ಅಧಿಕಾರಾವಧಿಯಲ್ಲಿ ಎಲ್ಲ ಜಾತಿಗಳಿಗೆ ಸಮಾನ ಪ್ರಾಶಸ್ತ್ಯ ನೀಡಿದ್ದೇನೆ. ನಾನು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಮಾಡಿದ್ದು ತೋರಿಸಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ನನಗೆ ರಾಜ್ಯದ ಜನತೆ ಮತ್ತೊಮ್ಮೆ ಆಶೀರ್ವದಿಸಿದರೆ ಅವರ ನಂಬಿಕಗೆ ದ್ರೋಹ ಮಾಡುವುದಿಲ್ಲವೆಂದು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

ನ.28ರಂದು ಮಿನಿ ವಿಧಾನಸೌಧದ ಆವರಣದ ಸಭಾಂಗಣದಲ್ಲಿ ನಡೆದ ಪರಿವರ್ತನಾ ಯಾತ್ರೆಯ 52ನೇ ಕ್ಷೇತ್ರದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹೀಗೆ ಹೇಳಿದರು. ಮುಂದುವರೆದು ಮಾತನಾಡುತ್ತಾ , ಮೋದಿ ಮುಂದೆ ಸಿದ್ಧರಾಮಯ್ಯ ಒಬ್ಬ ಬಚ್ಚಾ, ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ. ಮೋದಿ ಚಹಾ ಮಾರಿದ್ದಾರೆ ಆದರೆ ದೇಶ ಮಾರಿಲ್ಲ.

ಕಳೆದ ನಾಲ್ಕುವರೆ ವರ್ಷದಲ್ಲಿ ಉತ್ತರ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಆಲಮಟ್ಟ ಯೋಜನೆಗಾಗಿ ಪ್ರತಿ ವರ್ಷ 10 ಸಾವಿರ ಕೋಟಿ ಹಣ ನೀಡುತ್ತೇನೆ ಎಂದ ನೀವು 10 ರೂ ಕೂಡಾ ನೀಡಿಲ್ಲ. ಆದರೆ ನನ್ನ ಅವಧಿಯಲ್ಲಿ ದೇಶದಲ್ಲೇ ಪ್ರಥಮ ಸಲ ಬಡ್ಡಿ ರಹಿತ ಕೃಷಿ ಸಾಲ ನೀಡಿದ್ದೇನೆ. ದಲಿತರ ಹೆಸರು ಹೇಳಿಕೊಂಡು ತಿರುಗುತ್ತಿರುವ ಕಾಂಗ್ರೇಸ್, ಡಾ. ಅಂಬೇಡ್ಕರ್ ಅವರ ಶವಸಂಸ್ಕಾರವನ್ನು ದೆಹಲಿಯಲ್ಲಿ ಮಾಡಲು ಅಡ್ಡಿಪಡಿಸಿ, ಮುಂಬೈನ ದಾದರನಲ್ಲಿ ಆಗುವಂತೆ ಮಾಡಿತು. ಆದರೆ ಮೋದಿಯವರು ಬಾಬಾಸಾಹೇಬರಿಗೆ ಸಂಬಂಧಿಸಿದ 5 ಕೇಂದ್ರಗಳ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಮುಂಬರುವ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು ಎಂದು ಹೇಳಿದರು.

ಶಾಸಕರಾದ ಗೋವಿಂದ ಕಾರಜೋಳ ಮಾತನಾಡುತ್ತಾ, ಕಳೆದ 70ವರ್ಷಗಳ ಅವಧಿಯಲ್ಲಿ ನಮ್ಮ ದೇಶವನ್ನು 57ವರ್ಷ ಕಾಂಗ್ರೇಸ್ ಆಳಿದೆ. ಅದರಲ್ಲಿ 37ವರ್ಷ ಒಂದೇ ಮನೆತನ ಆಳಿದೆ. ಇದರಿಂದ ಕಾಂಗ್ರೇಸ್ ನಾಯಕರ ಗರೀಬಿ ಹಟಾವೋ ಮಾತ್ರ ಆಗಿದೆ. ಪ್ರಪಂಚದ ಎಲ್ಲ ದೇಶಗಳು ಮೋದಿ ಅವರ ಆಡಳಿತವನ್ನು ಮೆಚ್ಚಿಕೊಂಡಿವೆ ಎಂದು ಹೇಳಿದರು.

ಅನಂತಕುಮಾರ ಹೆಗಡೆ ಮಾತನಾಡುತ್ತಾ, ಕಾಂಗ್ರೇಸ್ಗೆ ಹಿಂದುತ್ವದ ದಮ್ಮು ಇಲ್ಲ. ಎಪ್ರೀಲ್ ನಂತರ ಕರ್ನಾಟಕದಲ್ಲಿ ಆ ಸರ್ಕಾರ ಇರುವುದಿಲ್ಲ ಎಂದು ಹೇಳಿದರು. ಹೋಳಿ ಕನಸು ಕಾಣುತ್ತಿರುವ ಕಾಂಗ್ರೇಸ್ ನಾಯಕರಿಗೆ ರಾಜ್ಯದ ಆರೂ ವರೆ ಕೋಟಿ ಜನತೆ ಮಾರಿ ಹಬ್ಬ ಮಾಡಲಿದೆ. ಬಡಜನತೆಯ ಅನುಕೂಲತೆಗಾಗಿ ಶೇ 30 ದರದಲ್ಲಿ ಮುಖ್ಯ ಔಷಧಿಗಳು ದೊರೆಯುವಂತೆ ಮಾಡಲು ಬೀಳಗಿಯಲ್ಲಿ 5 ಜನೌಷಧಿ ಅಂಗಡಿಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

ಶಾಸಕರಾದ ಅರವಿಂದ ಲಿಂಬಾವಳಿ ಮಾತನಾಡುತ್ತಾ, ತಮ್ಮ ಸರ್ಕಾರ ಕನಕ, ವಾಲ್ಮೀಕಿ ಹಾಗೂ ಸಿದ್ಧರಾಮೇಶ್ವರ ಶರಣರಂತಹ ಜಯಂತಿಗಳನ್ನು ಆರಂಭಿಸಿದ್ದರೆ, ಕಾಂಗ್ರೇಸ್ ಟಿಪ್ಪು ಜಯಂತಿಯನ್ನು ಆರಂಭಿಸಿದೆ ಎಂದು ಟೀಕಿಸಿದರು.

ಸಂಸದರಾದ ಪಿ.ಸಿ ಗದ್ದಿಗೌಡರ ಮಾತನಾಡುತ್ತಾ, ಕಾಂಗ್ರೇಸ್ ನ ಕೆಲಸಗಳನ್ನು ವ್ಯವಹಾರಗಳೆಂದು ಕರೆದರು. ನಮ್ಮ ಬಾಗಲಕೋಟ ಕ್ಷೇತ್ರದ ಅಭಿವೃದ್ಧಿಗಾಗಿ ಮೋದಿ ಸರ್ಕಾರ 100 ಕೋಟಿ ನೀಡಿದೆ ಎಂದು ಹೇಳಿದರು.

ಮಾಜಿ ಸಚಿವರಾದ ಮುರುಗೇಶ ನಿರಾಣಿಯವರು ಮಾತನಾಡುತ್ತಾ, ಕಳೆದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಒಂದು ಬ್ರಾಸು ಉಸುಕು ಕೂಡಾ ಸಿಗದಂತೆ ಮಾಡಿ, 280 ಎಫ್.ಆಯ್.ಆರ್ ಮಾಡಿದ್ದು ಜೆ.ಟಿ ಪಾಟೀಲರ ಸಾಧನೆಯಾಗಿದೆ. ತಮ್ಮ ಪಕ್ಷದ ಅವಧಿಯಲ್ಲಿ ತಮ್ಮ ಕ್ಷೇತ್ರದಲ್ಲಿ 15 ಪ್ರೌಢಶಾಲೆಗಳು, 5 ಡಿಗ್ರಿ ಕಾಲೇಜುಗಳು, 1 ಪಾಲಿಟೆಕ್ನಿಕ್, 4 ಮುರಾರ್ಜಿ ವಸತಿ ಶಾಲೆಗಳು, ನವೋದಯ ಶಾಲೆ ಕಸ್ತೂರ ಬಾ ಶಾಲೆ ಹಾಗೂ ಆಯ್.ಟಿ.ಆಯ್ ಕಾಲೇಜುಗಳನ್ನು ಆರಂಭಿಸಲಾಗಿದೆ ಎಂದರು.

ಈ ವೇಳೆ ಪಕ್ಷದ ಮುಖಂಡರಾದ ಡಾ. ವಾಮನಾಚಾರ್ಯ, ಹೆಚ್.ಆರ್.ನಿರಾಣಿ, ಶ್ರೀಕಾಂತ ಕುಲಕರ್ಣಿ, ನಾರಾಯಣಸಾ ಭಾಂಡಗೆ, ಸಿದ್ದು ಸವದಿ, ಮೋಹನ ಲಿಂಬಿಕಾಯಿ, ಹೂವಪಣ್ಣ ರಾಠೋಡ, ನೀರಬೂದಿಹಾಳದ ದೇಸಾಯಿಯವರು, ಮಹಾಂತೇಶ ಮಮದಾಪೂರ, ಸಿದ್ದು ಮಾದರ, ಪಟಿಯಪ್ಪ ಕಳಿಮನಿ ಮೋಹನ ಜಾಧವ, ವಿ.ಜಿ.ರೇವಡಿಗಾರ, ಸಂಗಣ್ಣ ಕಟಗೇರಿ, ಅನಿಲ ದೇಶಪಾಂಡೆ ಇದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770667
Today
Yesterday
This Week
Last Week
This Month
Last Month
All days
5839
14978
20817
3647859
196894
189062
3770667
Your IP: 54.221.76.68
2017-12-18 08:38