Breaking News

ಜಾತಿ ಸಿಂದುತ್ವ ಪ್ರಮಾಣ ಪತ್ರ ನೀಡಲು ಆದೇಶಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

Written by 
Published: 10 December 2017
284 times Last modified on Monday, 11 December 2017 04:58

ಕೆ.ಎನ್.ಪಿ.ವಾರ್ತೆ,ಹಗರಿಬೊಮ್ಮನಹಳ್ಳಿ,ಡಿ.11;

ವರದಿ: ಕೋಗಳಿ ಶೇಖರ್

ಬೇಡಜಂಗಮರ ಜಾತಿ ಸಿಂದುತ್ವ ಪ್ರಮಾಣ ಪತ್ರ ನೀಡಲು ಆದೇಶಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಡಿ.09ರಂದು ತಾಲೂಕಿನಲ್ಲಿ ಡಾ||ಅಂಬೇಡ್ಕರ್ ಬೇಡಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ(ರಿ) ಮತ್ತು ತಾಲೂಕಿನ ಬೇಡಜಂಗಮ ಸಮುದಾಯವು ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಹ.ಬೊ.ಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಭೀಮಾ ನಾಯ್ಕರವರಿಗೆ ಬೇಡಜಂಗಮ ಜಾತಿ ಸಿಂದುತ್ವ ಪ್ರಮಾಣ ಪತ್ರ ನೀಡುವಂತೆ ಆದೇಶಿಸಿ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಮನವಿ ಸ್ವಿಕರಿಸಿ, ಬೇಡಜಂಗಮ ಜಾತಿ ಸಿಂಧುತ್ವ ಪ್ರಮಾಣಪತ್ರ ನೀಡುವ ಕುರಿತು ಕಾನೂನಿನ ಪ್ರಕಾರ ಆದೇಶವನ್ನು ಪರಿಶೀಲಿಸಿ, ಆದೇಶ ಹೊರಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು. ಹಾಗೂ ಈ ವಿಚಾರವಾಗಿ ಕ್ಷೇತ್ರದ ಶಾಸಕರು ಸಹ ಬೇಡಜಂಗಮ ಜಾತಿ ಸಿಂದುತ್ವ ಪ್ರಮಾಣ ಪತ್ರದ ಮನವಿ ಕುರಿತು ಆದೇಶದನ್ವಯ ಸಹಕರಿಸುವ ಮಾತುಗಳನ್ನಾಡಿದರು.  

ಮಾನ್ಯ ಕರ್ನಾಟಕ ಸರ್ಕಾರ ಆದೇಶದನ್ವಯ ಅಖಿಲ ಕರ್ನಾಟಕ ಡಾ|| ಅಂಬೇಡ್ಕರ್ ಬೇಡಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ(ರಿ)ಬೆಂಗಳೂರು ಇವರು ನೀಡುವ ಜಾತಿ ಗುರುತಿನ ಪ್ರಮಾಣಪತ್ರದ ಆಧಾರದ ಮೇಲೆ ಬೇಡಜಂಗಮ ಜಾತಿ/ ಸಿಂಧುತ್ವ ಪ್ರಮಾಣಪತ್ರ ನೀಡುವ ಜೊತೆಗೆ ಉಲ್ಲೇಖ 1) ಸರ್ಕಾರದ ಪತ್ರ ಸಂ.ಆರ್.ಡಿ/476/ಎಎಸ್‍ಡಿ 2016/ದಿ: 29/09/2016 ಮತ್ತು 28/12/2016 2) ಸರ್ಕಾರದ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು ರವರ ಪತ್ರಸಂಖ್ಯೆ ಸ.ಕಾ.ಇ/247/ಎಸ್.ಎ.ಡಿ/2016/ದಿ:21-12-2016 3) ಡಾ.ಎಂ.ಪಿ.ದಾರಕೇಶ್ವರಯ್ಯ, ರಾಜ್ಯಾಧ್ಯಕ್ಷರು, ಅಖಿಲ ಕರ್ನಾಟಕ ಡಾ||ಅಂಬೇಡ್ಕರ್ ಬೇಡಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ(ರಿ) ಬೆಂಗಳೂರು ಮನವಿಪತ್ರ ದಿ: 04-09-2017. 4) ಮಾನ್ಯ ಉಪನಿರ್ದೇಶಕರು,ಸಮಾಜ ಕಲ್ಯಾಣ ಇಲಾಖೆ, ಬಳ್ಳಾರಿ ಇವರಪತ್ರ ಸಂ.ಉನಿ/ಸ.ಕಾ.ನಿ/ಬ/ಎಸ್8/ಜಾತಿ/ಸಿಂಧುತ್ವ/2017-18/802/ದಿ:14/11/17 ವಿಷಯಕ್ಕೆ ಸಂಬಂಧಿಸಿದಂತೆ, 

ಬಳ್ಳಾರಿಯ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ತಾಲೂಕು ಕಛೇರಿಗಳಿಗೆ ದಿನಾಂಕ: 14-11-2017 ರಂದು (ಸಂ.ಕಂ/ಜಾತಿ ಪರಿಶೀಲನೆ/207/2017-18) ಬೇಡಜಂಗಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸ್ಪಷ್ಟವಾಗಿ ಆದೇಶಿಸಿದ್ದರು. 

ಈ ಆದೇಶದ ಮೇರೆಗೆ ಸಮಾಜ ಬಾಂಧವರು ಈಗಾಗಲೇ ಮಾನ್ಯ ತಹಶೀಲ್ದಾರರ ಜೊತೆಯಲ್ಲಿ ಈ ವಿಚಾರವಾಗಿ ಮೌಖಿಕವಾಗಿ ಚರ್ಚಿಸಿ ಮತ್ತು ಈಗಾಗಲೇ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿಗಳನ್ನು ಸಹ ಸಲ್ಲಿಸಿ. ಜಾತಿ ಪ್ರಮಾಣ ಪತ್ರವನ್ನು ನೀಡುವುದರ ಬಗ್ಗೆ ಮಾನ್ಯ ತಹಶೀಲ್ದಾರರ ಬಳಿ ವಿಚಾರಿಸಿದಾಗ ಮಾನ್ಯ ಜಿಲ್ಲಾಧಿಕಾರಿಗಳಿಂದ ಸ್ಪಷ್ಟ ಆದೇಶ ಬಂದಿರುವುದಿಲ್ಲ. ಆದ್ದರಿಂದ ಬೇಡಜಂಗಮ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ಸಾಧ್ಯವಿಲ್ಲ ಎಂದು ಉತ್ತರಿಸುತ್ತಾರೆ. ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಅಧಿಕ ಸಂಖ್ಯೆಯಲ್ಲಿ ಬೇಡಜಂಗಮರು ವಾಸವಾಗಿದ್ದು, ಅವರು ಆರ್ಥಿಕವಾಗಿ ಹಿಂದುಳಿದಿದ್ದು ಅವಕಾಶ ವಂಚಿತರಾಗುತ್ತಿದ್ದಾರೆ. 

ಕಾರಣ ಜಿಲ್ಲಾಧಿಕಾರಿಗಳು ಈ ಕೂಡಲೇ ಮಾನ್ಯ ತಹಶೀಲ್ದಾರರು, ಹಗರಿಬೊಮ್ಮನಹಳ್ಳಿ ಇವರಿಗೆ ಸ್ಪಷ್ಟ ಆದೇಶ ನೀಡಬೇಕೆಂದು ಈ ಮೂಲಕ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಸಿದ್ಧಲಿಂಗಯ್ಯ ಹಾಗೂ ತಾಲೂಕಿನ ಯುವ ಘಟಕದ ಡಾ||ಅಂಬೇಡ್ಕರ್ ಬೇಡಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ಅಧ್ಯಕ್ಷರಾದ ಜಗದೀಶ.ಜಿ.ಎಂ. ಹಾಗೂ ಶಶಿಧರ್, ಡಾ|| ಸುರೇಶ, ಚನ್ನವೀರಸ್ವಾಮಿ, ಯರಿಸ್ವಾಮಿ.ಜಿ.ಎಂ. ಇತರರು ಮನವಿ ಮಾಡಿದರು.

 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4274347
Today
Yesterday
This Week
Last Week
This Month
Last Month
All days
782
15484
100075
4062809
305442
395132
4274347
Your IP: 54.167.126.106
2018-01-20 01:15