Breaking News

ಜೀವ ಇರೋವರೆಗೂ ಹರಪನಹಳ್ಳಿ ಜನರ ಸೇವೆ ಮಾಡುವೆ : ಜಿ.ಕರುಣಾಕರರೆಡ್ಡಿ

Written by 
Published: 03 October 2017
52 times Last modified on Tuesday, 03 October 2017 18:00

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.3;

ವರದಿ : ಟಿ.ಗಣೇಶ್

ಕಳೆದ ಬಾರಿ ನಾನು ಶಾಸಕನಾಗಿ, ಸಚಿವನಾಗಿ ನನ್ನ ಕ್ಷೇತ್ರಕ್ಕೆ ಮಾಡಿದ ಸೇವೆ ಪರಿಗಣಿಸಿ ಸ್ವ ಇಚ್ಛೆಯಿಂದ ನನ್ನ ಮನೆಗೆ ಆಗಮಿಸಿ ಸಂಪೂರ್ಣವಾಗಿ ಬೆಂಬಲ ಸೂಚಿಸುತ್ತಿರುವ ಹರಪನಹಳ್ಳಿ ಕ್ಷೇತ್ರದ ಜನರ ಸೇವೆಯನ್ನು ನನ್ನ ಜೀವ ಇರೋವರೆಗೂ ಮಾಡುವೆನೆಂದು ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ತಿಳಿಸಿದ್ದಾರೆ.

ಇಂದು ಉಪ್ಪಾರ(ಭಗೀರಥ) ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಭಗೀರಥನನ್ನು ನೆನೆಸಿಕೊಂಡು ನೀವೆಲ್ಲಾ ಬಂದಿದ್ದೀರಿ. ಯಾವುದೇ ಸುದೀರ್ಘ ಪ್ರಯತ್ನ ನಡೆಸಿದರೆ ಅದನ್ನು ಭಗೀರಥ ಪ್ರಯತ್ನ ಎಂದೇ ಕರೆಯುವ ರೂಢಿ ಇದೆ. ಗಂಗಾನದಿ ಭಗೀರಥನಿಂದಾಗಿಯೇ ಇಂದಿಗೂ ಪಾವಿತ್ರ್ಯತೆಯನ್ನು ಪಡೆದಿದೆ. ಅದೇ ರೀತಿ, ನೀವೆಲ್ಲರೂ ಆಗಮಿಸಿ ನನ್ನನ್ನು ಬೆಂಬಲಸಿದ್ದೀರಿ. ನಿಮ್ಮೆಲ್ಲರ ಪ್ರೀತಿ ಗಮನಿಸಿದರೆ ನಾನು ಕಳೆದ ಜನ್ಮದಲ್ಲಿ ಬಹುಶಃ ಹರಪನಹಳ್ಳಿ ಕ್ಷೇತ್ರದ ಜನರ ವಿಶ್ವಾಸಕ್ಕೆ ಪಾತ್ರನಾಗಿರಬೇಕೆನಿಸುತ್ತದೆ ಎಂದರು.

ಇದುವರೆಗೆ ಹರಪನಹಳ್ಳಿಯ 12ಸಾವಿರಕ್ಕೂ ಹೆಚ್ಚು ಜನರು ಬಳ್ಳಾರಿ ನಿವಾಸಕ್ಕೆ ಆಗಮಿಸಿದ್ದಾರೆ. ಎಲ್ಲ ಸಮುದಾಯದ ಜನರ ಪ್ರೀತಿ ಪಡೆದಿರುವುದು ನಿಜಕ್ಕೂ ಇನ್ನಷ್ಟು ಜವಾಬ್ದಾರಿ ಹೆಚ್ಚಿದೆ. ಕಳೆದ ಬಾರಿ ಶಾಸಕನಾಗಿದ್ದಾಗ ಮೊದಲು 60 ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಆದ್ಯತೆ ನೀಡಿದ್ದೆ. ಎಸ್‍ಸಿ, ಎಸ್‍ಟಿ ಕಾಲೋನಿಗಳಲ್ಲಿ ರಸ್ತೆ, ಸಮುದಾಯ ಭವನಗಳ ನಿರ್ಮಾಣ ಮಾಡಲಾಗಿತ್ತು.

ಬಡತನ ಹೋಗಲಾಡಿಸಲು ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆ, ವೃದ್ಧಾಪ್ಯ ವೇತನ, ಭಾಗ್ಯಲಕ್ಷ್ಮಿ ಯೋಜನೆ, ವಿಧವಾ ವೇತನ ಸೇರಿದಂತೆ ಬಹುತೇಕ ಯೋಜನೆಗಳನ್ನು ಕ್ಷೇತ್ರದಲ್ಲಿ ಜಾರಿಗೆ ತರುವ ಪ್ರಯತ್ನ ಮಾಡಿದ್ದೆ. ಕ್ಷೇತ್ರದಲ್ಲಿ 300 ಕಿ.ಮೀ.ಡಾಂಬರು ರಸ್ತೆ ನಿರ್ಮಾಣ, ನಿರಂತರ ವಿದ್ಯುತ್ ಯೋಜನೆ, ರೂ.55 ಕೋಟಿ ವೆಚ್ಚದಲ್ಲಿ 250 ಕೆ.ವಿ.ಉಪಕೇಂದ್ರ ನಿರ್ಮಾಣ ಮಾಡಿದ್ದೇನೆ.

ಪದವಿ ಕಾಲೇಜು, ಐಟಿಐ, ಡಿಪ್ಲೋಮಾ ಕಾಲೇಜುಗಳು ಅಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿವೆ. ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲು ಮುಂದಿನ ಚುನಾವಣೆಯಲ್ಲಿ ಬೆಂಬಲಿಸಬೇಕೆಂದು ಮನವಿ ಮಾಡಿದರು.

ಹರಪನಹಳ್ಳಿ ಕ್ಷೇತ್ರದ ಶಾಸಕ ಎಂ.ಪಿ.ರವೀಂದ್ರ ಹೆಸರಿಗೆ ಮಾತ್ರ ಶಾಸಕರಾಗಿದ್ದಾರೆ. ಅವರು ಕ್ಷೇತ್ರದ ಯಾವುದೇ ಹಳ್ಳಿಗಳಿಗೆ ಸಂಚರಿಸಿಲ್ಲ. ಸುಳ್ಳು ಹೇಳುವ ಮೂಲಕ ಕಾಲ ಹರಣ ಮಾಡುತ್ತಿದ್ದಾರೆ. ನನ್ನ ಅವಧಿಯಲ್ಲಿ ಪ್ರಗತಿಯಲ್ಲಿರುವ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಲು ಅವರಿಂದ ಆಗುತ್ತಿಲ್ಲ. 157 ಕೋಟಿ ರೂ.ವೆಚ್ಚದಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗಿದ್ದೆ. ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿ ನಾಲ್ಕೂವರೆ ವರ್ಷಗಳು ಗತಿಸಿದವು. ಇನ್ನೂ ಕುಡಿಯುವ ನೀರಿನ ಭವಣೆ ನೀಗಲಿಲ್ಲ. ಕೇವಲ ಸುಳ್ಳು ಹೇಳುತ್ತ ಕಾಲಹರಣ ಮಾಡುವ ಕಾಂಗ್ರೆಸ್ ಸರ್ಕಾರವನ್ನು ನಂಬಬೇಡಿ ಎಂದೂ ತಿಳಿಸಿದರು.

ಇದೇ ವೇಳೆ ಹರಪನಹಳ್ಳಿಯಿಂದ ಆಗಮಿಸಿದ್ದ ಮಹಿಳೆಯರು ಸೇರಿದಂತೆ, ಸಾವಿರಾರು ಜನ ಉಪ್ಪಾರ ಸಮುದಾಯದವರು ಮುಂದಿನ ಚುನಾವಣೆಯಲ್ಲಿ ಜಿ.ಕರುಣಾಕರರೆಡ್ಡಿ ಅವರನ್ನು ಗೆಲ್ಲಿಸಿಕೊಡುವುದಾಗಿ ಪ್ರಮಾಣ ಮಾಡಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750189
Today
Yesterday
This Week
Last Week
This Month
Last Month
All days
339
13442
102330
3588738
176416
189062
3750189
Your IP: 23.22.136.56
2017-12-17 00:33