Breaking News

ಕಾಲುವೆ ಒಡೆದು ನೂರಾರು ಎಕರೆ ಬೆಳೆ ನಷ್ಟ

Written by 
Published: 01 December 2017
35 times Last modified on Friday, 01 December 2017 07:52

ಕೆ.ಎನ್.ಪಿ.ವಾರ್ತೆ,ಕಲಬುರಗಿ,ಡಿ.01;

ಕಾಲುವೆ ಒಡೆದು ನೂರಾರು ಎಕರೆ ಬೆಳೆ ನಷ್ಟ: ಆತಂಕದಲ್ಲಿ ಜೇವರ್ಗಿ ತಾಲೂಕಿನ ರೈತರು

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ರೈತರಿಗೆ ಹೊಸ ಸಂಕಷ್ಟ ಎದುರಾಗಿದೆ. ಇದೀಗ ಕಾಲುವೆ ಒಡೆದು ನೂರಾರು ಎಕರೆ ಬೆಳೆ ಹಾನಿಗೀಡಾಗಿದೆ. ಹೀಗಾಗಿ ಮುಂದೇನು ಮಾಡುವುದು ಎಂದು ಬೆಳೆ ಹಾನಿಗೀಡಾದ ಅನ್ನದಾತರು ಚಿಂತಾಕ್ರಾಂತರಾಗಿದ್ದಾರೆ.


ಬಿಸಿಲು ನಾಡು ಖ್ಯಾತಿಯ ಆ ಜಿಲ್ಲೆಯ ರೈತರಿಗೆ ಸಮಸ್ಯೆಗಳು ಬೆನ್ನು ಬಿಡದ ಬೇತಾಳದಂತಾಗಿವೆ. ಒಂದೊಮ್ಮೆ ಬರ ಇದ್ದರೆ, ಮತ್ತೊಮ್ಮೆ ಬೇರಾವುದೋ ಸಮಸ್ಯೆ ರೈತರನ್ನು ಕಾಡುತ್ತಲೇ ಇರುತ್ತದೆ. ಹೇಳಿ ಕೇಳಿ ಕಲಬುರಗಿ ಜಿಲ್ಲೆ ಬರಪೀಡಿತ ಪ್ರದೇಶ. ಇದೀಗ ಅಲ್ಲಲ್ಲಿ ಸ್ವಲ್ಪ ಪ್ರದೇಶ ನೀರಾವರಿಗೆ ಒಳಪಡುತ್ತಿದೆ. ಆದರೆ ನೀರು ಪೂರೈಸಬೇಕಿದ್ದ ಕಾಲುವೆಗಳೇ ಅಸಮರ್ಪಕ ನಿರ್ವಹಣೆಯಿಂದಾಗಿ ವರದಾನವಾಗುವ ಬದಲು ಬೆಳೆಗಾರರ ಸಂಕಷ್ಟಕ್ಕೆ ಮತ್ತೆ ಮತ್ತೆ ಕಾರಣವಾಗುತ್ತಿವೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಚನ್ನೂರು, ಅವರಾದಿ, ಆಂದೋಲಾ ಗ್ರಾಮಗಳಲ್ಲಿ ಕಾಲುವೆ ಒಡೆದು ನೂರಾರು ಎಕರೆ ಬೆಳೆ ಹಾನಿ ಸಂಭವಿಸಿದೆ. ಚಿಗರಳ್ಳಿ 280 ಶಾಖಾ ಕಾಲುವೆಯ 25 ಎಂಬಿಸಿ ಕಾಲುವೆ ಒಡೆದು ನೂರಾರು ಎಕರೆ ಬೆಳೆ ಹಾನಿಗೀಡಾಗಿದೆ. ಏಕಾಏಕಿಯಾಗಿ ಹೆಚ್ಚುವರಿ ನೀರನ್ನು ಕಾಲುವೆಗೆ ಹರಿಸಿದ್ದರಿಂದ ಕಾಲುವೆ ಒಡೆದು ಬೆಳೆಗಳು ಹಾಳಾಗಿವೆ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅಂತಾರೆ ಇವ್ರು.

ಜೇವರ್ಗಿ ತಾಲೂಕಿನಲ್ಲಿಯೂ ತೊಗರಿ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಕಟಾವಿಗೆ ಬಂದಿದ್ದ ತೊಗರಿಯು ಕಾಲುವೆ ಒಡೆದಿದ್ದರಿಂದ ಹಾಳಾಗಿದೆ. ಇದ್ರಿಂದ ಬೆಳೆಗಾರರು ಅಪಾರವಾಗಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತೊಗರಿ, ಹತ್ತಿ, ಜೋಳದ ಬೆಳೆ ಹಾಳಾಗಿವೆ. ಐದಾರು ವರ್ಷಗಳಿಂದ ಕಾಲುವೆ ದುರಸ್ತಿ ಮಾಡಿಲ್ಲ. ಹೀಗಾಗಿ ಕೂಡಲೇ ಕಾಲುವೆ ದುರಸ್ತಿ ಮಾಡಬೇಕು ಅಂತ ರೈತರು ಒತ್ತಾಯಿಸುತ್ತಿದ್ದಾರೆ. 

ಅಲ್ಪಸ್ವಲ್ಪ ಲಾಭದ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ಕಾಲುವೆ ಒಡೆದಿದ್ದರಿಂದ ಭಾರಿ ಹಾನಿ ಸಂಭವಿಸಿದೆ. ಹೀಗಾಗಿ ಅನ್ನದಾತರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ನೀರು ಸಂಪೂರ್ಣವಾಗಿ ಹೊಲಗಳಲ್ಲಿ ತುಂಬಿಕೊಂಡಿರುವುದರಿಂದ ಕೈಗೆ ಬಂದ ಫಸಲಿನ ತುತ್ತು ತಮ್ಮದಲ್ಲದ ತಪ್ಪಿಗೆ ಬೆಳೆಗಾರನ ಬಾಯಿಗೆ ಬರದಂತಾಗಿದೆ. ಹೀಗಾಗಿ ಹಾನಿಗೀಡಾದ ಬೆಳೆಗೆ ಸರಕಾರ ಪರಿಹಾರ ಕೊಡಬೇಕು ಅನ್ನೋದು ಬೆಳೆಗಾರರ ಒತ್ತಾಯವಾಗಿದೆ.

R.K. Toona

"ಸತ್ಯದ ಹುಡುಕಾಟದಲಿ"

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770829
Today
Yesterday
This Week
Last Week
This Month
Last Month
All days
6001
14978
20979
3647859
197056
189062
3770829
Your IP: 54.221.76.68
2017-12-18 08:53