Breaking News

ಕಲ್ಲೇಶ್ವರನ ಜಾತ್ರೆ ಹಾಗೂ ರಸಮಂಜರಿ ಕಾರ್ಯಕ್ರಮ

Written by 
Published: 10 January 2018
34 times Last modified on Wednesday, 10 January 2018 16:40

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.10; 

ವರದಿ : ಬಸವರಾಜ್ ಪೂಜಾರ್

ಕಲ್ಲೇಶ್ವರನ ಜಾತ್ರೆ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಿತು.

ಹರಪನಹಳ್ಳಿ ತಾಲ್ಲೂಕು ರಾಮ ಘಟ್ಟದಲ್ಲಿ ಕಲ್ಲೇಶ್ವರನ ಜಾತ್ರೆ ವಿಜೃಂಭಣೆಯಿಂದ ನಡೆಯಿತು. ಈ ಜಾತ್ರೆಯಲ್ಲಿ ಕಲ್ಲೇಶ್ವರನ ಮೂರ್ತಿಗೆ ಗಂಗೆ ಪೂಜೆ ಮಾಡಿ, ಊರಿನ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಅಲ್ಲದೆ ಸುತ್ತಮುತ್ತಲಿನ ಎಲ್ಲ ತಾಂಡಾಗಳ ಜನರು ಹಾಗೂ ಗ್ರಾಮಸ್ಥರು ಕಲ್ಲೇಶ್ವರ ದೇವಸ್ಥಾನಕ್ಕೆ ಆಗಮಿಸಿ, ದೇವಸ್ಥಾನದಲ್ಲಿ ಪೂಜೆಯನ್ನು ಮಾಡಿಸಿದರು.

ಅಲ್ಲದೆ ಈ ಕಾರ್ಯಕ್ರಮಕ್ಕೆ ಮಾನ್ಯ ಮುಜರಾಯಿ ಮತ್ತು ಜವಳಿ ಸಚಿವರಾದ ರುದ್ರಪ್ಪ ಲಮಾಣಿಯವರು ಭೇಟಿ ನೀಡಿ, ಕಲ್ಲೇಶ್ವರನ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದವರು ಕುಡಿತ ಮತ್ತು ಇತರೆ ದುಶ್ಚಟಗಳನ್ನು ಬಿಟ್ಟು ಒಳ್ಳೆಯ ಸಂಸ್ಕೃತಿಯನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು. 

ಅಲ್ಲದೇ ರಾಮಘಟ್ಟದ ಕಲ್ಲೇಶ್ವರನ ಜಾತ್ರೆ ಪ್ರಯುಕ್ತ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮುಜರಾಯಿ ಮತ್ತು ಜವಳಿ ಸಚಿವರಾದ ರುದ್ರಪ್ಪ ಲಮಾಣಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ತಾಂಡದ ಯುವ ಪ್ರತಿಭೆ ರಾಜು ನಾಯಕ್ ಹಾಗೂ ಭದ್ರಾವತಿ ಆರ್ಕೆಸ್ಟ್ರಾದೊಂದಿಗೆ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಎಲ್ಲ ಜಾತ್ರೆಯ ಜನರಿಗೆ ಸಂಗೀತದ ರಸದೌತಣವನ್ನು ನೀಡಿದರು.  ಈ ವೇಳೆ ಸಚಿವರಾದ ರುದ್ರಪ್ಪ ಲಂಬಾಣಿ ಅವರಿಗೆ ಉಚ್ಚಂಗಿದುರ್ಗ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಮನವಿ ಪತ್ರವನ್ನು ನೀಡಲಾಯಿತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮಾನ್ಯಮಂತ್ರಿಗಳು, ನಾವು ಮುಂದಿನ ತಿಂಗಳ ಒಳಗಡೆ ಉಚ್ಚಂಗಿದುರ್ಗಕ್ಕೆ ಬರುವುದಾಗಿ ಭರವಸೆ ನೀಡಿದರು. 

ಅಲ್ಲದೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ಹಾಗೂ ನವೋದಯಕ್ಕೆ ಅಯ್ಕೆಯಾದವರಿಗೆ ಸನ್ಮಾನ ಮಾಡಿದರು. ಈ ಸಂದರ್ಭದಲ್ಲಿ ಜಗಳೂರ ಶಾಸಕರಾದ ಹೆಚ್.ಪಿ ರಾಜೇಶ್, ಗ್ರಾಮ ಪಂಚಾಯತ್ ಅದ್ಯಕ್ಷರು, ತಾಲ್ಲೂಕ್ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250531
Today
Yesterday
This Week
Last Week
This Month
Last Month
All days
9938
16742
76259
4062809
281626
395132
4250531
Your IP: 54.234.190.237
2018-01-18 16:00