Breaking News

ಕಲ್ಮಠದ ಗುರುಪಾದ ಶಿವಾಚಾರ್ಯರ ಪುಣ್ಯಸ್ಮರಣೋತ್ಸವ

Written by 
Published: 02 December 2017
23 times Last modified on Tuesday, 05 December 2017 06:53

ಕೆ.ಎನ್.ಪಿ.ವಾರ್ತೆ,ಬೀಳಗಿ,ಡಿ.05;

ವರದಿ : ಬಸವರಾಜ್ ಬಾಬು ಕೋರಿ

ನಗರದ ಕಲ್ಮಠದ ಗುರುಪಾದ ಶಿವಾಚಾರ್ಯರ 46ನೇ ಪುಣ್ಯಸ್ಮರಣೋತ್ಸವದ ನಿಮಿತ್ಯ ಅವರ ಭಾವಚಿತ್ರದ ಹಾಗೂ ಅಡ್ಡಪಲ್ಲಕ್ಕಿಯ ಮೆರವಣಿಗೆ ನಡೆಯಿತು.

ಮೆರವಣಿಗೆಯಲ್ಲಿ ಅಸಂಖ್ಯಾತ ಭಕ್ತರು ನೆರೆದಿದ್ದರು. ನಿಯೋಜಿತ ಪಟ್ಟಾಧಿಕಾರಿ ಗುರುಪಾದ ದೇವರ ನೇತೃತ್ವದಲ್ಲಿ ನ.26 ರಿಂದ ಡಿ.02ರವರೆಗೆ ಬೀಳಗಿ ಉತ್ಸವ ಹೆಸರಿನಲ್ಲಿ ನಡೆಸಲಾದ ಈ ಉತ್ಸವದಲ್ಲಿ ನಿತ್ಯ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ನ.27ರಂದು ಮಹಿಳಾ ಗೋಷ್ಟಿ, ನ.28 ರಂದು ತಾಲೂಕಿನ ಪತ್ರಕರ್ತರಿಗೆ ಗೌರವಾಭಿನಂದನ, ನ.29ರಂದು ಗಾಯನ ಸ್ವರ್ಧೆ ಹಾಗೂ ಕಾನೂನು ಮತ್ತು ಆರೋಗ್ಯ ಸಂಪದ, ನ.30ರಂದು ರಕ್ತದಾನ ಶಿಬಿರ ಮತ್ತು ಕೃಷಿ ಸಂವಾದ, ಡಿ.01ರಂದು ಅಧ್ಯಾತ್ಮ ಪ್ರವಚನ ಮಂಗಲ ಹಾಗೂ ಗೀತ ಸಂಭ್ರಮದಂತಹ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮಗಳಲ್ಲಿ ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡಿದ್ದರು.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770818
Today
Yesterday
This Week
Last Week
This Month
Last Month
All days
5990
14978
20968
3647859
197045
189062
3770818
Your IP: 54.221.76.68
2017-12-18 08:52