Breaking News

ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

Written by 

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಸೆ.27;

ಗೋವಾದ ಬೈನಾ ಬೀಚ್‍ನಲ್ಲಿ ಕನ್ನಡಿಗರ ಬಡಾವಣೆ ತೆರವುಗೊಳಿಸಿ, ಕನ್ನಡಿಗರನ್ನು ಬೀದಿಪಾಲು ಮಾಡಿರುವುದನ್ನು ಖಂಡಿಸಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕನ್ನಡ ಒಕ್ಕೂಟದ ಆಶ್ರಯದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್‍ ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ, ಪ್ರವೀಣ್‍ಕುಮಾರ್‍ಶೆಟ್ಟಿ, ಕನ್ನಡ ಸೇನೆಯ ಕೆ.ಆರ್.ಕುಮಾರ್, ಹೋರಾಟಗಾರರಾದ ಮಂಜುನಾಥ್, ತ್ಯಾಗು, ಗಿರೀಶ್‍ಗೌಡ ಮತ್ತಿತರರು ಪಾಲ್ಗೊಂಡಿದ್ದರು. ಬೈನಾ ಬೀಚ್‍ನಲ್ಲಿ ಎರಡು ದೇವಸ್ಥಾನಗಳು ಸೇರಿದಂತೆ ಹಲವು ಮನೆಗಳನ್ನು ತೆರವುಗೊಳಿಸಲಾಗಿದೆ.

ಸುಮಾರು ವರ್ಷಗಳಿಂದ ಬೈನಾ ಬೀಚ್‍ನಲ್ಲಿ ಕನ್ನಡಿಗರು ಮನೆ ನಿರ್ಮಿಸಿಕೊಂಡು ಚಿಕ್ಕಪುಟ್ಟ ವ್ಯಾಪಾರ ಮಾಡುತ್ತಾ ಬದುಕುತ್ತಿದ್ದರು. ಅಲ್ಲಿನ ಗೋವಾ ಸರ್ಕಾರ ಈಗ ಏಕಾಏಕಿ ಅಲ್ಲಿರುವ ಮನೆಗಳನ್ನು ದ್ವಂಸಗೊಳಿಸಿದ್ದು, ಅವರೆಲ್ಲ ಬೀದಿ ಪಾಲಾಗಿದ್ದಾರೆ. ಕನಿಷ್ಠ ಪಯಾರ್ಯ ವ್ಯವಸ್ಥೆ ಮಾಡಿಲ್ಲ ಎಂದು ವಾಟಾಳ್ ಈ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕನ್ನಡಿಗರಿಗೆ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸುವಂತೆ ಆಗ್ರಹಿಸಿದರು. ಕನ್ನಡಿಗರ ರಕ್ಷಣೆಗೆ ಆಗ್ರಹಿಸಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ವಾಟಾಳ್ ಹೇಳಿದರು. ಈ ವೇಳೆ ಗೋವಾ ಮುಖ್ಯಮಂತ್ರಿಯ ಭಾವಚಿತ್ರ ಹಾಗೂ ಅಲ್ಲಿನ ಸರ್ಕಾರದ ಭೂತದಹನ ಮಾಡಿ ಆಕ್ರೋಶ ವ್ಯಕ್ತಪಡಿಸಲಾಯಿತು.Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770885
Today
Yesterday
This Week
Last Week
This Month
Last Month
All days
6057
14978
21035
3647859
197112
189062
3770885
Your IP: 54.221.76.68
2017-12-18 08:58