Breaking News

ಕಸಾಪ ಭವನದಲ್ಲಿ ನಡೆದ 3ನೇ ದಿನದ ರಂಗ ತರಬೇತಿ

Written by 
Published: 22 November 2017
46 times Last modified on Wednesday, 22 November 2017 12:17

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.22;

ತಾಲೂಕಿನ ಕಸಾಪ ಭವನದಲ್ಲಿ 3ನೇ ದಿನದ ಉಚಿತ ರಂಗ ತರಬೇತಿ ಶಿಬಿರವು ನಡೆಯಿತು.

ದೀಪ ಸಮಾಜ ಸೇವಾ ಕೇಂದ್ರ ಮತ್ತು ಜನಪದ ರಂಗ ಶಾಲೆ ವತಿಯಿಂದ ಹಮ್ಮಿಕೊಳ್ಳಲಾದ 2ನೇ ಉಚಿತ ರಂಗ ತರಬೇತಿ ಶಿಬಿರದ ಮೂರನೇ ದಿನವಾದ ಇಂದು ನುರಿತ ರಂಗ ತರಬೇತುದಾರರಾದ ಶ.ಶಿ.ಪಾಟೀಲ್, ಶಿಬಿರಾರ್ಥಿಗಳಿಗೆ ಧ್ವನಿಯ ಏರಿಳಿತ, ಹಾವಭಾವ, ಅಭಿನಯ ತಾತ್ವಿಕತೆ ಹಾಗೂ ಪ್ರಾಯೋಗಿಕ, ರಂಗಭೂಮಿ, ಮತ್ತು ಇನ್ನಿತರ ವಿಷಯಗಳ ಕುರಿತು ಪ್ರಯೋಗಾತ್ಮಕವಾಗಿ ತರಬೇತಿ ನೀಡಿದರು. ಶಿಬಿರದಲ್ಲಿ ಶಿಬಿರಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ಮೂಡಿಬಂತು. 

ಈ ಕುರಿತು ಪ್ರತಿಕ್ರೀಯೆ ನೀಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಎಲ್.ವಿ.ಮಲಪನಗುಡಿ, ಈ ಭಾಗದಲ್ಲಿ ರಂಗ ಚಟುವಟಿಕೆಯನ್ನು ಅಭಿವೃದ್ಧಿಪಡಿಸಲು, ಮತ್ತು ರಂಗಾಸಕ್ತರಿಗೆ ಅವಶ್ಯಕವಾದ ತರಬೇತಿಯನ್ನು ನೀಡುವ ಉದ್ದೇಶದಿಂದಾಗಿ ಈ ತರನಾದ ಉಚಿತ ರಂಗ ತರಬೇತಿ ಶಿಬಿರಗಳನ್ನು ಸಂಸ್ಥೆಯ ವತಿಯಿಂದ ಆಯೋಜಿಸುತ್ತಾ ಬರಲಾಗುತ್ತಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಮೊದಲನೆ ಉಚಿತ ರಂಗ ತರಬೇತಿ ಶಿಬಿರವನ್ನು ಅಗಸ್ಟ್ 01 ರಿಂದ ಅಗಸ್ಟ್ 21ರವರೆಗೆ ಹೇಮಗುಡ್ಡದಲ್ಲಿ ನಡೆಸಲಾಗಿತ್ತು. ಅದರ ಮುಂದಿನ ಭಾಗವಾಗಿ 2ನೇ ಶಿಬಿರವನ್ನು ನ.16ರಿಂದ ಪ್ರಾರಂಭಿಸಲು ಸಂಸ್ಥೆಯಿಂದ ತೀರ್ಮಾನಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ನ.16ರಂದು ನಡೆಸಬೇಕಿದ್ದ ಶಿಬಿರವನ್ನು ನ.18ಕ್ಕೆ ಮುಂದೂಡಲಾಗಿತ್ತಾದರೂ ನೊಂದಣಿ ಕಾರ್ಯವು ಮುಂದುವರೆದಿತ್ತು.

ನಂತರ ಯಥಾವತ್ತಾಗಿ ನ.19ರಂದು ಶಿಬಿರಾರ್ಥಿಗಳ ಆಯ್ಕೆ ಪ್ರಕ್ರೀಯೆಯು ನಗರದಲ್ಲಿರುವ ಸಂಸ್ಥೆಯ ಕಾರ್ಯಾಲಯದಲ್ಲಿ ಜರುಗಿತು. ನ.20ರಿಂದ ತರಗತಿಗಳು ಆರಂಭವಾಗಿದ್ದು, ನ.30ರವರೆಗೆ ರಂಗ ತರಬೇತಿ ಶಿಬಿರದ ತರಗತಿಗಳು ನಡೆಯಲಿವೆ. ಇಲ್ಲಿಯವರೆಗೂ ರಂಗ ತರಬೇತಿ ಶಿಬಿರದ ಮೂರನೇ ದಿನವು ಯಶಸ್ವಿಯಾಗಿ ಪೂರ್ಣಗೊಂಡಿದೆ. 10ದಿನಗಳ ತರಬೇತಿ ನಡೆದ ನಂತರ ಶಿಬಿರಾರ್ಥಿಗಳಿಗೆ ಸೂಕ್ತ ಅವಕಾಶ ಮತ್ತು ವೇದಿಕೆಯನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ  ನಾಟಕ  ಪ್ರದರ್ಶನವನ್ನು ಸಹ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770695
Today
Yesterday
This Week
Last Week
This Month
Last Month
All days
5867
14978
20845
3647859
196922
189062
3770695
Your IP: 54.221.76.68
2017-12-18 08:41