Breaking News

ಕವನಸಂಕಲನ ಬಿಡುಗಡೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಸಮಾರಂಭ

Written by 
Published: 17 December 2017
130 times Last modified on Sunday, 17 December 2017 15:51

ಕೆ.ಎನ್.ಪಿ.ವಾರ್ತೆ, ದಾವಣಗೆರೆ,ಡಿ.17;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಕವನಸಂಕಲನ ಬಿಡುಗಡೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಸಮಾರಂಭವನ್ನು ಆಯೋಜಿಸಲಾಗಿತ್ತು.

ಜಗಳೂರು ಪಟ್ಟಣದ ಗರುಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸಿರಿಗನ್ನಡ ಮಹಿಳಾ ವೇದಿಕೆ ಸಹಯೋಗದೊಂದಿಗೆ "ಗೀತಮಂಜರಿ" ಕವನಸಂಕಲನ ಬಿಡುಗಡೆ ಹಾಗೂ ರಾಜ್ಯಮಟ್ಟದ ಕವಿಗೋಷ್ಠಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಶಾಸಕ ಹೆಚ್.ಪಿ.ರಾಜೇಶ್ ಉದ್ಘಾಟಿಸಿದರು. ಈ ವೇಳೆ "ಗೀತಮಂಜರಿ" ಕವನಸಂಕಲನ ಪುಸ್ತಕವನ್ನು ಬಿಡುಗಡೆ ಮಾಡಿದರು. 

ನಂತರ ಮಾತನಾಡಿದ ಅವರು, ಕವಿಗಳಿಗೆ ಸ್ಪೂರ್ತಿ ತುಂಬುವಂತಹ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ, ಯುವ ಪೀಳಿಗೆ ಕವಿತೆಗಳನ್ನು ಬರೆಯಲು ಪ್ರೋತ್ಸಾಹಿಸಬೇಕು.

ಇತ್ತೀಚಿನ ದಿನಗಳಲ್ಲಿ ಕನ್ನಡ ಮರೆತು ಹೋಗುತ್ತಿದ್ದಾರೆ ಇಂತಹ ಕಾರ್ಯಕ್ರಮಗಳಿಂದ ಕನ್ನಡ ಉಳಿಸಿ ಬೆಳೆಸುವಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ಇನ್ನೂ ಈ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ ಆಯೋಜಿಸಲಾಗಿತ್ತು. ಇದರಲ್ಲಿ ಸುಮಾರು 27 ಕವಿಗಳು ಕವಿತೆ ವಾಚನ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಕೆ. ಮಂಜುನಾಥ್, ಪಟ್ಟಣದ ಪಂಚಾಯತಿ ಅಧ್ಯಕ್ಷ ನೂರ್ ಜಹಾನ್, ತಾಲೂಕು ಪಂಚಾಯತಿ ಅಧ್ಯಕ್ಷ ಮಂಜುಳ ಶಿವಾನಂದಪ್ಪ , ತಾಲೂಕು ಪಂಚಾಯತಿ ಸದಸ್ಯರು ಟಿ. ಬಸವರಾಜ್ , ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಮಂಜುನಾಥ್ ಕುರ್ಕೆ, ತಾಲೂಕು ಅಧ್ಯಕ್ಷ ಹಜರತ್ ಅಲಿ, ಎಸ್.ಟಿ. ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ,  ಹಿರಿಯ ಸಾಹಿತಿ ಎಂ.ಜಿ. ದೇಶಪಾಂಡೆ, ಸಾಹಿತಿಗಳಾದ ಶಿವಕುಮಾರ್ ಆರ್ ದಂಡಿನ ಮತ್ತು ಗೀತ ಮಂಜು, ಸ.ಹಿ.ಪ್ರ ಶಾಲೆ ಬೆಣ್ಣೆಹಳ್ಳಿ, ನಿರ್ದೇಶಕರು ಭದ್ರ ಅಚ್ಚುಕಟ್ಟು ಪ್ರಾಧಿಕಾರ ಪಲ್ಲಾಗಟ್ಟೆ ಶೇಖರಪ್ಪ, ಡಾ.ಪಿ.ಎಸ್ ಅರವಿಂದ್ ಸೇರಿದಂತೆ ಇತರರು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250454
Today
Yesterday
This Week
Last Week
This Month
Last Month
All days
9861
16742
76182
4062809
281549
395132
4250454
Your IP: 54.234.190.237
2018-01-18 15:56