Breaking News

ಕೋಗಳಿ ಶಾಲೆಯ ಮಕ್ಕಳ ಗ್ರಾಮಸಭೆ

Written by 
Published: 30 November 2017
189 times Last modified on Thursday, 30 November 2017 07:54

ಕೆ.ಎನ್.ಪಿ.ವಾರ್ತೆ,ಹಗರಿಬೊಮ್ಮನಹಳ್ಳಿ,ನ.30;

ವರದಿ : ಶೇಖರ ಕೋಗಳಿ 

ಹಗರಿಬೊಮ್ಮನಹಳ್ಳಿ ತಾಲೂಕಿನ  ಕೋಗಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಮಕ್ಕಳ ಗ್ರಾಮಸಭೆ ನಡೆಯಿತು.

ಈ ಕಾರ್ಯಕ್ರಮವು ಕೋಗಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಸಮ್ಮುಖದಲ್ಲಿ ನಡೆಯಿತು. ಮಕ್ಕಳ ಗ್ರಾಮಸಭೆಯ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳು , ಎಸ್,ಡಿ,ಎಂ,ಸಿ. ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿ, ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಹಾಗೂ ಪಂಚಾಯಿತಿ ಪ್ರತಿನಿಧಿಗಳಿಗೆ, ಶಾಲೆಯ ಶೈಕ್ಷಣಿಕ ಅಭಿವೃದ್ಧಿಪಡಿಸುವ ಯೋಜನೆಗಳು, ಶಾಲೆಯ ಮೂಲ ಸೌಕರ್ಯಗಳು ಹಾಗೂ ಶೈಕ್ಷಣಿಕ ಅವಶ್ಯಕ ಸಮಸ್ಯೆಗಳ ಕುರಿತು ವಿವರಿಸಿದರು.

ಎಸ್,ಡಿ,ಎಂ,ಸಿ. ಅಧ್ಯಕ್ಷರಾದ ಡಿ.ಬಸವರಾಜ ಪ್ರಾಸ್ತಾವಿಕ ಮಾತನಾಡಿ, ಶಾಲೆಯ ಶೌಚಾಲಯ, ಕುಡಿಯುವ ನೀರು, ಕಾಂಪೌಂಡ್ ದುರಸ್ಥೆ, ಸಿ.ಸಿ. ಕ್ಯಾಮರಾ ಅಳವಡಿಕೆ, ಬಯೋಮೇಟ್ರಿಕ್, ಇಂಗ್ಲಿಷ್ ಶಿಕ್ಷಕರ ಕೊರತೆ ಹಾಗೂ ಶಿಕ್ಷಣಕ್ಕೆ ಬೇಕಾಗುವ ಸ್ಮಾರ್ಟ ಕ್ಲಾಸ್ ವ್ಯವಸ್ಥೆ ಇನ್ನೂ ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಯಕ್ರಮದಲ್ಲಿ ಕೋರಿದರು.

ನಂತರ ಎಸ್,ಡಿ,ಎಂ,ಸಿ. ಸದಸ್ಯರಾದ ಶ್ರೀನಿವಾಸ ನೇಕಾರ ಮಾತನಾಡಿ, ಮೊದಲು ಶಾಲೆಯ ಸುತ್ತಮುತ್ತಲಿನ ಸ್ವಚ್ಚತ ಕಾರ್ಯವನ್ನು ಪಂಚಾಯಿತಿಯವರು ಮಾಡಿಕೊಡಬೇಕು ಎಂದರು ಮತ್ತು ಶಾಲೆಯ ಅಗತ್ಯತೆಗಳನ್ನು ಚರ್ಚಿಸಿದರು. ನಂತರ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಟಿವಿ ನೋಡುವುದನ್ನ ಕಡಿಮೆ ಮಾಡಿ, ವಿದ್ಯಾಭ್ಯಾಸದ ಕಡೆ ಗಮನಹರಿಸಿ ಎಂದು ಕಿವಿಮಾತು ಹೇಳಿದರು.

ಗ್ರಾಮಸಭೆಯಲ್ಲಿ ಕೇಳಿಬಂದ ಬೇಡಿಕೆಗಳ ಕುರಿತು ಪ್ರತಿಕ್ರೀಯೆ ನೀಡಿದ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ.ಅಧ್ಯಕ್ಷರು ಹಾಗೂ ಸದಸ್ಯರು, ಪಂಚಾಯಿತಿಯಿಂದ ಎಷ್ಟು ಬೇಡಿಕೆಗಳನ್ನು ಈಡೇರಿಸಲು ಸಾಧ್ಯನೋ ಅಷ್ಟು ಕೆಲಸ ಕಾರ್ಯವನ್ನು ಮಾಡಿಕೊಡುವ ನಿಟ್ಟಿನಲ್ಲಿ  ನಾವುಗಳು ಸಹಕಾರ ಕೊಡುವುದಾಗಿ ಭರವಸೆ ನೀಡಿದರು. 

ಈ ವೇಳೆ ಏತ್ಮಧ್ಯೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕುಮ್ಮಿಬಾಯಿ, ಸದಸ್ಯರಾದ ಎನ್.ಪ್ರಕಾಶ, ಎಸ್.ಶಿವಮೂರ್ತಿ, ಯು.ಬಸವರಾಜ, ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ, ಹಾಗೂ ಸದಸ್ಯರಾದ ಜಿ,ಅಜ್ಜಪ್ಪ, ಬಸವರಾಜ, ಶ್ರೀನಿವಾಸ, ಹಾಗೂ ಶಾಲೆಯ ಮುಖ್ಯಗುರುಗಳಾದ ಕೆ.ಲೋಕನಗೌಡ ಹಾಗೂ ಶಾಲಾ ಶಿಕ್ಷಕರ ವೃಂದ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು.  

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770842
Today
Yesterday
This Week
Last Week
This Month
Last Month
All days
6014
14978
20992
3647859
197069
189062
3770842
Your IP: 54.221.76.68
2017-12-18 08:54