Breaking News

ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

Written by 
Published: 05 January 2018
118 times Last modified on Friday, 05 January 2018 06:07

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.05;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.

ಜಗಳೂರು ತಾಲೂಕಿನ ಕೊಣಚಗಲ್ಲು ರಂಗನಾಥ ದೇವಸ್ಥಾನದ ಗುಡ್ಡದಲ್ಲಿ, ಕೊಳೆತ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಶವದ ಪಕ್ಕದಲ್ಲಿ ವಿಷದ ಬಾಟಲಿ, ಗುಳಿಗೆ ಪತ್ತೆಯಾಗಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮೃತ ವ್ಯಕ್ತಿಯನ್ನು ಸೋಮನಹಳ್ಳಿ ಗ್ರಾಮದ ಕರಿಯಪ್ಪ(70) ಎಂದು ಗುರುತಿಸಲಾಗಿದೆ. 

ಕರಿಯಪ್ಪ, ಕಳೆದ ಹನ್ನೆರಡು ದಿನಗಳ ಹಿಂದೆ, ಮನೆ ಬಿಟ್ಟು ಮಗಳ ಮನೆ ಹಗರಬೊಮ್ಮನಹಳ್ಳಿಗೆ ತೆರಳಿದ್ದರು. ನಾಲ್ಕೈದು ದಿನಗಳ ಹಿಂದೆ ರಂಗನಾಥ ಸ್ವಾಮಿ ಗುಡ್ಡಕ್ಕೆ ಬಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಬುಧವಾರ ಕೊರಟಿಗೆರೆ ತಾಂಡಾದ ಮಹಿಳೆಯರು ಗುಡ್ಡಕ್ಕೆ ಕಟ್ಟಿಗೆಗೆಂದು ಹೋದ ವೇಳೆ, ಕೊಳೆತ ಸ್ಥಿತಿಯಲ್ಲಿದ್ದ ಶವ ಕಂಡು ಗಾಬರಿಗೊಂಡು, ಗ್ರಾಮಸ್ಥರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ, ಬಿಳಿಚೋಡು ಪೊಲೀಸ್ ಠಾಣೆ ಪಿಎಸ್ಐ ಡಿ.ಜಿ ಪರಮೇಶ್ ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250350
Today
Yesterday
This Week
Last Week
This Month
Last Month
All days
9757
16742
76078
4062809
281445
395132
4250350
Your IP: 54.234.190.237
2018-01-18 15:50