Breaking News

ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ : ಶಾಸಕ ಆನಂದ್ ಸಿಂಗ್

Written by 
Published: 14 December 2017
52 times Last modified on Thursday, 14 December 2017 06:36

ಕೆ.ಎನ್.ಪಿ.ವಾರ್ತೆ,ಹೊಸಪೇಟೆ,ಡಿ.14;

ವರದಿ : ರಾಮಕೃಷ್ಣ

ಸಾರ್ವಜನಿಕ ಜೀವನಕ್ಕೆ ಬಂದ ಮೇಲೆ ಈವರೆಗೂ ಜನರಿಗೆ ಕೊಟ್ಟ ಮಾತನ್ನು ತಪ್ಪಿಲ್ಲ ಮುಂದೆ ತಪ್ಪೋದು ಇಲ್ಲ. ಜನರೇ ನನ್ನ ಉಸಿರು ಅವರಿಂದಲೇ ನನ್ನ ಜೀವನ ಎಂದು ಶಾಸಕ ಆನಂದ್ ಸಿಂಗ್ ಭಾವುಕರಾಗಿ ಮಾತನಾಡಿದರು.

ವಿಜಯನಗರ ಕ್ಷೇತ್ರದ ಶಾಸಕರಾದ ಆನಂದ್ ಸಿಂಗ್ ಗ್ರಾಮವಾಸ್ತವ್ಯದ 100ನೇ ದಿನದ ಪ್ರಯುಕ್ತ, ತಾಲೂಕು ಕ್ರೀಡಾಂಗಣದಲ್ಲಿ ನಿನ್ನೆ ಸಂಜೆ "ಆನಂದಲಕ್ಷ್ಮೀ ಲಕ್ಕಿಡಿಪ್" ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆಟೋ ಚಾಲಕರಿಗೆ ಉತ್ಸಾಹ ತುಂಬಲು ಮಾಡಿದ "ಆನಂದಲಕ್ಷ್ಮೀ ಲಕ್ಕಿಡಿಪ್" ಮೊದಲನೇ ಡಿಪ್ ನಲ್ಲಿ  ಶಾಸಕ ಆನಂದ್ ಸಿಂಗ್, ಮೂವರು ಆಟೋ ಚಾಲಕರಿಗೆ ಉಚಿತವಾಗಿ ಆಟೋ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು, ಜನರಿಗೆ ತೊಂದರೆಯಾದ ಮರುಕ್ಷಣ ನಾನಲ್ಲಿರುವೆ. ಯಾಕಂದ್ರೇ ಇಲ್ಲಿಯ ಜನರ ಜೊತೆ ನನ್ನದು ಭಾವನಾತ್ಮಕ ನಂಟು ಬೆಳೆದುಕೊಂಡಿದೆ. ಯಾರನ್ನು ಕಷ್ಟದಲ್ಲಿ ನೋಡಲು ಬಯಸುವುದಿಲ್ಲ. ನೂತನ ಮಾರ್ಕೆಟ್ ನಿರ್ಮಾಣ ಮಾಡೋವರೆಗೂ ತರಕಾರಿ ಮಾರುವವರು ಬೀದಿಗೆ ಬೀಳುವ ಸ್ಥಿತಿ ಇತ್ತು. ಆದ್ರೇ ಅವರ ಕಷ್ಟ ನೋಡಲಾಗದೇ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿದೆ.

ಆಟೋ ನಡೆಸುವ ಚಾಲಕರು ಸಮಾಜದ ಒಂದು ಭಾಗ. ಅವರ ಜೀವನದಲ್ಲಿ ಒಂದಷ್ಟ ಉತ್ಸಾಹ ಮತ್ತು ಹುಮ್ಮಸ್ಸು ಬರಲೆಂದು ಈ ಲಕ್ಕಿಡಿಪ್ ಸ್ಕೀಂ ಮಾಡಿ ಪ್ರತಿ ತಿಂಗಳು 3 ಆಟೋಗಳಂತೆ 9 ಆಟೋಗಳನ್ನು ನೀಡುತ್ತಿದ್ದೇವೆ. ಇದರ ಹಿಂದೆ ಯಾವ ದುರುದ್ದೇಶವು ಇಲ್ಲ. ಈ‌ ಹಿಂದೆಯೂ ಸುಮಾರು 2ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿ ಸಾವಿರಕ್ಕೂ ಹೆಚ್ಚು ಆಟೋಗಳಿಗೆ ಗ್ಯಾಸ್ ಕಿಟ್ ಕೊಟ್ಟಿದ್ದೇನೆ.

ಜನರೇ ನನ್ನ ಆಸ್ತಿ ಅವರಿಗಾಗಿಯೇ ನನ್ನ ಜೀವನ ಮೀಸಲು. ಅವರಿಗಾಗಿ ನಾನು ಹಗಲಿರುಳು ಶ್ರಮಿಸಲು ಸಿದ್ದನಿದ್ದೇನೆ ಎಂದರು. ಲಕ್ಕಿಡಿಪ್ ನಲ್ಲಿ  ಸಂತೋಷ, ರಾಕೇಶ್, ಗೋಪಿ ಆಯ್ಕೆಯಾಗಿ ಆಟೋ ಪಡೆದರು ಹಾಗೂ ತಾಯಪ್ಪ ಎನ್ನುವ ಅಭಿಮಾನಿಗೆ ಜೀವನ ನಡೆಸಲು ಸ್ವಯಂಪ್ರೇರಿತವಾಗಿ ಒಂದು ಆಟೋ ನೀಡಿದರು.

ಈ ವೇಳೆ ಮಾಜಿ ಶಾಸಕರಾದ ರತನ್ ಸಿಂಗ್ , ಬಿಜೆಪಿ ಪಕ್ಷದ ಹಿರಿಯರು, ತಾಲೂಕು ಪಂಚಾಯಿತಿ ಸದಸ್ಯರು, ನಗರಸಭೆ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು, ಆಟೋ ಸಂಘಟನೆಗಳು, ಕಲಾವಿದರು, ವಿವಿಧ ಸಮಾಜದ ಸಂಘಸಂಸ್ಥೆಗಳ ಮುಖಂಡರು ಸೇರಿದಂತೆ ಇತರರು ಉಪಸ್ಥಿತದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4274389
Today
Yesterday
This Week
Last Week
This Month
Last Month
All days
824
15484
100117
4062809
305484
395132
4274389
Your IP: 54.167.126.106
2018-01-20 01:18