Breaking News

ಕೃಷ್ಣ ಮತ್ತು ದೇವೇಗೌಡ ಬಡಾವಣೆಗಳೇ ಚರಂಡಿಗಳು

Written by 
Published: 07 October 2017
21 times Last modified on Sunday, 08 October 2017 06:22

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಅ.೦8;

ವರದಿ :  ಮಹಮ್ಮದ್ ಅಬ್ದುಲ್ ರಖೀಬ್

ಜಗಳೂರು ಪಟ್ಟಣದ ಕೃಷ್ಣ ಮತ್ತು ದೇವೇಗೌಡ ಬಡಾವಣೆಗಳೇ ಚರಂಡಿಗಳಾಗಿವೆ.

 ಜಿಲ್ಲೆಯ ಜಗಳೂರು ಪಟ್ಟಣದ ಕೃಷ್ಣ ಬಡಾವಣೆ ಮತ್ತು ದೇವೇಗೌಡ ಬಡಾವಣೆಯಲ್ಲಿ ಸರಿಯಾದ ಚರಂಡಿ ಹಾಗೂ ರಸ್ತೆ ಇಲ್ಲದೆ ಇಲ್ಲಿಯ ನಿವಾಸಿಗಳು ಪರದಾಡುತ್ತಿದ್ದಾರೆ. ಈ ಕುರಿತು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಬಳಿ ಎಷ್ಟು ಬಾರಿ ಮನವಿ ಮಾಡಿದರು ಸಹ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಹೌದು ಇಲ್ಲಿ ಸುಮಾರು ವರ್ಷಗಳಿಂದ ಕೆಲವು ಖಾಲಿ ನಿವೇಶನಗಳಿದ್ದು, ಮಳೆ ಬಂದಾಗ ನೀರು ಸರಾಗವಾಗಿ ಹರಿಯದೇ ನಿಂತಿರುತ್ತದೆ. ಅಲ್ಲಿಂದ ಮುಂದಕ್ಕೆ ನೀರು ಹೋಗಲು ಚರಂಡಿ ಇಲ್ಲದಂತಾಗಿದೆ‌. ಇನ್ನೂ ಇಲ್ಲಿ ಡಾಂಬರೀಕರಣ ಆಗದೇ ರಸ್ತೆಗಳು ಕೆಸರು ಗದ್ದೆಗಳಂತಿವೆ. ಮಳೆ ಬಂದಾಗ ಓಡಾಡಲು ಆಗುವುದಿಲ್ಲ. ಇಲ್ಲಿ ಹಲವು ಬಾರಿ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದಿದ್ದಾರೆ. 

ಈ ವೇಳೆ ಮಾತನಾಡಿದ  ಜಿಲ್ಲಾ ಪಂಚಾಯತಿ ಸದಸ್ಯೆ ಸವಿತಾ ಕಲ್ಲೇಶಪ್ಪ, ಚರಂಡಿ ನೀರು ಸರಗವಾಗಿ ಹರಿಯದೆ ನೀರು ನಿಂತಿದೆ. ಆದರೆ ಡಕ್ ಹಾಕದೆ ಅವೈಜ್ಞಾನಿಕವಾಗಿ ಚರಂಡಿ ಕಳಪೆ ಕಾಮಗಾರಿ ನಡೆದಿದೆ. ಚರಂಡಿ ಕಾಮಗಾರಿಗೆ 25 ಲಕ್ಷ ರೂ ಹಣ ಬಿಡುಗಡೆ ಯಾಗಿದ್ದು ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದಾರೆ. ಇದರ ಬಗ್ಗೆ ಶಾಸಕರು ಗಮನಹರಿಸಿ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಹೇಳಿದರು. ಸವಿತಾ ಕಲ್ಲೇಶಪ್ಪ, ಹಲವು ಬಾರಿ  ಪಟ್ಟಣ ಪಂಚಾಯಿತಿ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಸಹ ಅವರು ಬಾರದೆ ನಿರ್ಲಕ್ಷ್ಯ ತೋರಿದ್ದಾರೆ. ಇನ್ನೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಾರ್ವಜನಿಕರ ಕೆಲಸಕ್ಕೆ ಎಷ್ಟರಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದು ಇದರಿಂದ ತಿಳಿದು ಬರುತ್ತದೆ. ಇನ್ನಾದರು ಅಧಿಕಾರಿಗಳು ಈ ವರದಿಗೆ ಎಚ್ಚೆತ್ತುಕೊಂಡು ಕಾಮಗಾರಿ ಪೂರ್ಣಗೊಳಿಸುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3278835
Today
Yesterday
This Week
Last Week
This Month
Last Month
All days
1030
6326
27678
3222209
103325
263209
3278835
Your IP: 54.80.236.48
2017-10-19 03:25