Breaking News

ಕೆಎಸ್‍ಎಫ್‍ಸಿ : ಹೊಸ ಉದ್ದಿಮೆದಾರರಿಗೆ ಸಾಲಸೌಲಭ್ಯ 5ಲಕ್ಷಕ್ಕೇರಿಕೆ

Written by 
Published: 20 November 2017
34 times Last modified on Monday, 20 November 2017 10:01

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ನ.20;

ಮೊದಲ ಪೀಳಿಗೆ ಉದ್ದಿಮೆದಾರರಿಗೆ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯಿಂದ ನೀಡಲಾಗುವ ಬಡ್ಡಿ ಸಹಾಯಧನ ಯೋಜನೆ ಮೊತ್ತವನ್ನು 1ಲಕ್ಷ ದಿಂದ 5ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಪರಿಷ್ಕೃತ ಯೋಜನೆ ನಾಳೆಯಿಂದ ಜಾರಿಗೆ ಬರಲಿದ್ದು, ಯುವ ಉದ್ದಿಮೆದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೆಎಸ್‍ಎಫ್‍ಸಿ ಸಂಸ್ಥೆ ಮನವಿ ಮಾಡಿದೆ. ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ರಾಜ್ಯ ಮಟ್ಟದ ಹಣಕಾಸು ಸಂಸ್ಥೆಯಾಗಿದ್ದು, ರಾಜ್ಯ ಹಣಕಾಸು ಸಂಸ್ಥೆಗಳ ಕಾಯ್ದೆ 1951ರ ಅನ್ವಯ 1959ರಲ್ಲಿ ರಾಜ್ಯ ಸರ್ಕಾರದಿಂದ ಸ್ಥಾಪಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೋದ್ಯಮಿಗಳಿಗೆ ಹಣಕಾಸಿನ ನೆರವನ್ನು ನೀಡುವುದೇ ಸಂಸ್ಥೆಯ ಮೂಲ ಉದ್ದೇಶವಾಗಿದೆ.

ಕೆಎಸ್‍ಎಫ್‍ಸಿ ಸಂಸ್ಥೆ ಇದುವರೆಗೂ 1.72 ಲಕ್ಷಕ್ಕೂ ಹೆಚ್ಚು ಉದ್ದಿಮೆದಾರರಿಗೆ 15,276.05ಕೋಟಿ ರೂ.ಗಳ ಸಾಲಸೌಲಭ್ಯ ಒದಗಿಸಿದೆ. ಬೆಂಗಳೂರಿನಲ್ಲಿ ಹಲವಾರು ಯುವ ಉದ್ದಿಮೆಗಳು ಹೊಸ ಹೊಸ ಉದ್ದಿಮೆಗಳನ್ನು ಸ್ಥಾಪಿಸಲು ಮುಂದೆ ಬರುತ್ತಿದ್ದು, ಇದುವರೆಗೂ ಶೇ.60 ರಿಂದ 70ರಷ್ಟು ಮಂದಿಗೆ ಸಂಸ್ಥೆಯಿಂದ ಸಾಲಸೌಲಭ್ಯ ಒದಗಿಸಲಾಗಿದೆ.


ಮೊದಲ ಪೀಳಿಗೆ ಉದ್ದಿಮೆದಾರರಿಗೆ ವಾರ್ಷಿಕ ಶೇ.8ರ ನಿವ್ವಳ ಬಡ್ಡಿ ದರದಲ್ಲಿ ಬಡ್ಡಿ ಸಹಾಯ ಧನ ಯೋಜನೆಯಲ್ಲಿ ಒಂದು ಲಕ್ಷ ರೂ.ಗಳವರೆಗೆ ಸಾಲಸೌಲಭ್ಯ ನೀಡುವ ಸವಲತ್ತನ್ನು 2015ರಲ್ಲಿ ಜಾರಿಗೆ ತರಲಾಯಿತು. ಈ ಯೋಜನೆಗೆ ಉದ್ದಿಮೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸಾಲಸೌಲಭ್ಯದ ಮೊತ್ತವನ್ನು 5ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ.

ಈ ಯೋಜನೆಯಡಿ ಸಾಲಸೌಲಭ್ಯ ಪಡೆಯುವ ವ್ಯಕ್ತಿಗಳು ಮೊದಲ ಬಾರಿಗೆ ಉದ್ದಿಮೆ ಸ್ಥಾಪಿಸುವಂತಹವರಾಗಿರಬೇಕು. ಯಾವುದೇ ಹಾಲಿ ಉದ್ದಿಮೆಗಳಲ್ಲಿ ಪಾಲುದಾರಿಕೆ ಹೊಂದಿರಬಾರದು, ಈ ಯೋಜನೆಯಡಿ ವಾರ್ಷಿಕ ಶೇ.8ರಷ್ಟು ಬಡ್ಡಿ ದರದಲ್ಲಿ ಸಾಲಸೌಲಭ್ಯ ಪಡೆದವರಿಗೆ ಸರ್ಕಾರ ಗರಿಷ್ಠ ಶೇ.6ರಷ್ಟು ಸಹಾಯಧನ ನೀಡಲಿದೆ. ಸಾಲಸೌಲಭ್ಯ ಪಡೆಯಲಿಚ್ಛಿಸುವ ಹೊಸ ಉದ್ದಿಮೆದಾರರು ಜಿಲ್ಲಾ ಕೇಂದ್ರಗಳಲ್ಲಿರುವ ಸಂಸ್ಥೆಯ ಶಾಖಾ ಕಚೇರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770809
Today
Yesterday
This Week
Last Week
This Month
Last Month
All days
5981
14978
20959
3647859
197036
189062
3770809
Your IP: 54.221.76.68
2017-12-18 08:51