Breaking News

ಲೋಕ ಕಲಾ ಯಾತ್ರೆ ಕಾರ್ಯಕ್ರಮಕ್ಕೆ ಕುಲಪತಿಗಳಿಂದ ಚಾಲನೆ

Written by 
Published: 09 October 2017
38 times Last modified on Monday, 09 October 2017 16:06

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.09;

ವರದಿ : ಟಿ.ಗಣೇಶ್

ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯಡಿಯಲ್ಲಿ ಇರುವ ದಕ್ಷಿಣ ಮಧ್ಯ ವಲಯ ಸಂಸ್ಕೃತಿ ಕೇಂದ್ರ ನಾಗಪುರ ಇವರು ಕನ್ನಡ ವಿಶ್ವವಿದ್ಯಾಲಯದ ದೃಶ್ಯಕಲೆ, ಸಂಗೀತ ಮತ್ತು ನಾಟಕ ವಿಭಾಗಗಳ ಸಹಯೋಗದಲ್ಲಿ ನಿನ್ನೆ ಭುವನವಿಜಯ ಸಭಾಂಗಣದಲ್ಲಿ ಲೋಕ ಕಲಾ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಐದು ರಾಜ್ಯಗಳಾದ 1. ಆಂದ್ರ್ರ ಪ್ರದೇಶ 2. ಮಧ್ಯ ಪ್ರದೇಶ 3. ತೆಲಂಗಾಣ 4. ಕರ್ನಾಟಕ ಮತ್ತು 5. ಮಹಾರಾಷ್ಟ್ರದ ರಾಜ್ಯಗಳಿಂದ ಬಂದ ಕಲಾವಿದರು ತಮ್ಮ ತಮ್ಮ ಪ್ರಾದೇಶಿಕ ಕಲೆಗಳ ಪ್ರದರ್ಶನ ನೀಡಿದರು. ಕಾರ್ಯಕ್ರಮವನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಮಲ್ಲಿಕಾ ಎಸ್. ಘಂಟಿ ಉದ್ಘಾಟಿಸಿದರು.

ಕುಲಸಚಿವರಾದ ಡಾ. ಡಿ. ಪಾಂಡುರಂಗ ಬಾಬು ಮತ್ತು ಲಲಿತ ಕಲೆಗಳ ಡೀನ್ ಆದ ಡಾ. ಅಶೋಕಕುಮಾರ ರಂಜೇರೆ ಮತ್ತು ದಕ್ಷಿಣ ಮಧ್ಯ ವಲಯ ಸಂಸ್ಕೃತಿ ಕೇಂದ್ರದ ಕಾರ್ಯಕ್ರಮ ಅಧಿಕಾರಿಯಾದ ಗೋಪಾಲ ಬೇತಾವರ ಉಪಸ್ಥಿತರಿದ್ದರು. ದೃಶಕಲಾ ವಿಭಾಗದ ಅಧ್ಯಾಪಕರಾದ ಡಾ.ಮೋಹನ ಪಾಂಚಾಳ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ಅಧ್ಯಾಪಕರು, ವಿದ್ಯಾರ್ಥಿಗಳು, ಆಡಳಿತ ಸಿಬ್ಬಂದಿಗಳು ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750162
Today
Yesterday
This Week
Last Week
This Month
Last Month
All days
312
13442
102303
3588738
176389
189062
3750162
Your IP: 23.22.136.56
2017-12-17 00:32