Breaking News

ಮನೆ ಕಳ್ಳರ ಬಂಧನ : ಆಭರಣಗಳ ವಶ

Written by 
Published: 12 October 2017
35 times Last modified on Thursday, 12 October 2017 17:30
ಕಳ್ಳರಿಂದ ವಶಪಡಿಸಿ ಕೊಂಡಿರುವ ಬಂಗಾರ ಮತ್ತು ಬೆಳ್ಳಿಯ ಒಡವೆಗಳು. ಕಳ್ಳರಿಂದ ವಶಪಡಿಸಿ ಕೊಂಡಿರುವ ಬಂಗಾರ ಮತ್ತು ಬೆಳ್ಳಿಯ ಒಡವೆಗಳು.

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.12;

ವರದಿ : ಟಿ.ಗಣೇಶ

ಬಳ್ಳಾರಿ ನಗರದಲ್ಲಿ ಇಬ್ಬರು ಮನೆಗಳ್ಳರ ಬಂಧನ ಆಭರಣಗಳ ವಶ.

ನಗರದಲ್ಲಿ ಹಲವು ದಿನಗಳಿಂದ ನಡೆಯುತ್ತಿರುವ ಕಳ್ಳತನದ ಪ್ರಕರಣವನ್ನು ಬೇಧಿಸುವಲ್ಲಿ ಕೊನೆಗೂ ಬಳ್ಳಾರಿ ಪೋಲೀಸರು ಯಶಸ್ವಿಯಾಗಿದ್ದಾರೆ. ಬಳ್ಳಾರಿಯಲ್ಲಿ ನಡೆಯುತ್ತಿದ್ದ ಕಳ್ಳತನವನ್ನು ಪತ್ತೆಹಚ್ಚಿದ ಪೋಲೀಸರು ಇಬ್ಬರು ಕಳ್ಳರನ್ನು ಇಂದು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು ಮೂರು ಲಕ್ಷ ಎಪ್ಪತ್ತೆಂಟು ಲಕ್ಷ ರೂ. ಬೆಲೆಬಾಳುವ ಬಂಗಾರ, ಬೆಳ್ಳಿ ಆಭರಣಗಳನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೋಲೀಸ್ ಮೂಲಗಳು ತಿಳಿಸಿವೆ.

ಬಂಧಿತ ಆರೋಪಿಗಳು ಇರ್ಫಾನ್ ಮತ್ತು ನಿಜಾಮುಧ್ಧೀನ್ ಎಂದು ತಿಳಿದುಬಂದಿದೆ. ಬಂದಿತರನ್ನು ವಿಚಾರಿಸಿದಾಗ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 4 ಮನೆ ಕಳುವಿನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ತಿಳಿದುಬಂದಿದೆ. ಮೂರು ಲಕ್ಷಕ್ಕೂ ಹೆಚ್ಚು ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿ ಕೊಂಡಿದ್ದಾರೆಂಬುದು ಪೋಲೀಸರು ಮಾಹಿತಿ ನೀಡಿದ್ದಾರೆ. ಅವರಿಂದ ವಶಪಡಿಸಿಕೊಂಡಿರುವ ಬಂಗಾರ 115.5ಗ್ರಾಂ. ಬೆಳ್ಳಿ1042ಗ್ರಾಂ, ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.

ಕಳ್ಳರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಮತ್ತು ಈ ಕಾರ್ಯಚರಣೆಯಲ್ಲಿ ಭಾಗವಹಿಸಿದ ಪೋಲಿಸ್ ಸಿಬ್ಬಂದಿಗೆ ಮತ್ತು ಅಧಿಕಾರಿಗಳಿಗೆ ವರಿಷ್ಠಾಧಿಕಾರಿಗಳು ಶ್ಲಾಘಿಸಿ ಬಹುಮಾನವನ್ನು ಘೋಷಿಸಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3509697
Today
Yesterday
This Week
Last Week
This Month
Last Month
All days
10316
5787
16103
3460843
124986
209201
3509697
Your IP: 23.20.162.200
2017-11-20 16:57