Breaking News

ಮಾತೆ ಮಹಾದೇವಿ ಗಡಿಪಾರಿಗೆ ಒತ್ತಾಯ

Written by 
Published: 14 October 2017
55 times Last modified on Saturday, 14 October 2017 17:24

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಅ.14;

ವರದಿ : ಟಿ.ಗಣೇಶ್

ಮಾತೆ ಮಹಾದೇವಿ ಅವರಿಗೆ ಬುದ್ಧಿ ಭ್ರಮಣೆಯಾಗಿದ್ದು, ಸಮಾಜದ ಶಾಂತಿ ಹಾಗೂ ಸೌಹಾರ್ದತೆ ಕಾಪಾಡುವ ದೃಷ್ಟಿಯಿಂದ ರಾಜ್ಯ ಸರ್ಕಾರವೇ ಪೂರ್ಣ ವೆಚ್ಚ ಭರಿಸಿ ಅವರಲ್ಲಿನ ಮಾನಸಿಕ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡಬೇಕು. ಇಂತಹ ಹೇಳಿಕೆಗಳು ಮರುಕಳಿಸಿದರೆ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು  ಎಂದು ಡಾ||ಪುಟ್ಟ್ರಾಜ ಕವಿ ಗವಾಯಿಗಳ ಸೇವಾ ಸಂಘದ ಅಧ್ಯಕ್ಷ ಮೃತ್ಯಂಜಯಸ್ವಾಮಿ ಬಂಡ್ರಾಳ್ ಸರ್ಕಾರವನ್ನು ಒತ್ತಾಯಿಸಿದರು.

ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತೆ ಮಹದೇವಿ ಲಿಂಗಾಯಿತ ಹಾಗೂ ವೀರಶೈವರ ನಡುವೆ ಕದನ ತಂದಿಟ್ಟಿರುವುದಷ್ಟೆ ಅಲ್ಲದೇ, ಲಿ|| ಹಾನಗಲ್ ಶ್ರೀಕುಮಾರ ಶಿವಯೋಗಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಹಾನಗಲ್ ಶ್ರೀಗಳ ಬಗ್ಗೆ ಇವರಿಗೆ ಯಾವುದೇ ಆಳವಾದ ಜ್ಞಾನವಿಲ್ಲದೆ ಅಜ್ಞಾನ ತುಂಬಿಕೊಂಡಿದೆ ಎಂಬುದುಕ್ಕೆ ಶ್ರೀಗಳ ಬಗ್ಗೆ ಮಾತೆ ಮಹದೇವಿ ನೀಡಿರುವ ಹೇಳಿಕೆಗಳು ನಿದರ್ಶನವಾಗಿದೆ ಎಂದು ಹೇಳಿ ಅವರನ್ನು ಗಡಿಪಾರು ಮಾಡುವಂತೆ  ಒತ್ತಾಯಿಸಿದರು.

ಇತ್ತೀಚೆಗೆ ಅಂದರೆ ಡಿಸೆಂಬರ್ 6 ರಂದು ಚಿತ್ರದುರ್ಗದಲ್ಲಿ ಮಾತನಾಡಿರುವ ಮಾತೆ ಮಹಾದೇವಿ, ಮುರುಘಾಮಠದ ಪೀಠಾಧಿಪತಿ ಆಗುವ ಅವಕಾಶ ಸಿಗದೆ ನಿರಾಶರಾಗಿ ಹಾನಗಲ್ಲು ಕುಮಾರಸ್ವಾಮಿಗಳು 1904ರಲ್ಲಿ ವೀರಶೈವ ಮಹಾಸಭಾ ಸ್ಥಾಪಿಸಿ ಸಮಾಜದಲ್ಲಿ ಗೊಂದಲ ಮೂಡಿಸಿದರು. ಈಗಿನ ವೀರಶೈವ -ಲಿಂಗಾಯತ ಸಮಸ್ಯೆಗೂ ಅವರೇ ಕಾರಣ ಎಂದು ಹೇಳಿಕೆ ಕೊಟ್ಟಿದ್ದಾರೆ. ಮುರುಘಾ ಮಠದ ಮಠಾಧಿಪತಿ ಆಯ್ಕೆ ವೇಳೆ ಜಯದೇವ ಶ್ರೀಗಳ ಜೊತೆ ಹಾನಗಲ್ಲು ಕುಮಾರಸ್ವಾಮಿಗಳು ಸ್ಪರ್ಧೆಯಲ್ಲಿದ್ದರಾದರೂ ಆಗ ಜಯದೇವ ಶ್ರೀಗಳು ಆಯ್ಕೆಯಾಗಿದ್ದರು. ಇದರಿಂದ ಬೇಸರಗೊಂಡು ಲಿಂಗಾಯಿತಕ್ಕೆ ಸಂಬಂಧ ಇಲ್ಲದ ವೀರಶೈವ ಪದ ಇಟ್ಟುಕೊಂಡು ಮಹಾಸಭಾ ಸ್ಥಾಪಿಸಿದರು. ಇದರ ಹಿಂದೆ ಒಳ್ಳೆಯ ಉದ್ದೇಶ ಇರಲಿಲ್ಲ ಎಂದು ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದರು. 

ಪುಟ್ಟರಾಜ ಗವಾಯಿಗಳ ಶಿಷ್ಯ ಸಮೂಹಕ್ಕೆ ಅಪಾರ ನೋವು :-  ಗುರು ವಿರಕ್ತರಲ್ಲಿ ಸಾಮರಸ್ಯ ತಂದು ಪ್ರತಿಯೊಂದು ಜನಾಂಗದ ಶ್ರೇಯಸ್ಸಿಗೆ ಹಾನಗಲ್ಲು ಶ್ರೀಗಳು ಶ್ರಮಿಸಿದ್ದಾರೆ. ಪೂಜ್ಯರು ಯಾವುದೇ ಪೀಠದ ಕನಸು ಕಂಡಿರಲಿಲ್ಲ. ಎಷ್ಟೋ ಪೀಠಗಳಿಗೆ ಪೂಜ್ಯರಾಗುವ ಅವಕಾಶ ಸಿಕ್ಕರೂ ಅದನ್ನು ಬೇರೆಯವರಿಗೆ ದಯಪಾಲಿಸಿ, ಇಡೀ ಸಮಾಜವೇ ಮಠ ಎಂದು ಸೇವೆ ಸಲ್ಲಿಸಿದ್ದಾರೆ. ಆಯುರ್ವೇದ, ಕೃಷಿ, ಉದ್ಯೋಗ, ಮುದ್ರಣ, ಸಾಹಿತ್ಯ, ಪತ್ರಿಕಾರಂಗ ನಡೆಸಿ, ಸಮಾಜದ ಒಳಿತಿಗಾಗಿ ದುಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿರುವ ಮಾತೆಮಹಾದೇವಿಯ ನಡೆಯ ಬಗ್ಗೆ ಪುಟ್ಟರಾಜ ಗವಾಯಿಗಳ ಶಿಷ್ಯ ಸಮೂಹಕ್ಕೆ ಅಪಾರ ನೋವು ತಂದಿದೆ. ಇಂತಹ ಅಜ್ಞಾನದ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದರು. 

ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಹೆಚ್.ಎಂ. ಅಮರೇಶ, ಮಠಂ ಶಿವಲಿಂಗಯ್ಯ ಶಾಸ್ತ್ರೀ, ಕೆ.ಶ್ರೀರಾಮುಲು, ಕೆ.ಅಶೋಕ್, ಬಾಬುಲಾಲ್, ಮೇಟಿ ಪೊಂಪನಗೌಡರು, ವಕೀಲರು ಮುಂತಾದವರು ಭಾಗವಹಿಸಿದ್ದರು. 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3509690
Today
Yesterday
This Week
Last Week
This Month
Last Month
All days
10309
5787
16096
3460843
124979
209201
3509690
Your IP: 23.20.162.200
2017-11-20 16:57