Breaking News

ಮೊಹರಂ ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

Written by 
Published: 02 October 2017
51 times Last modified on Monday, 02 October 2017 07:50

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಅ.02;

ಜಗಳೂರು ಪಟ್ಟಣದ ದೊಡ್ಡ ಮೊಹರಂ ಮಸೀದಿ ಆವರಣದಲ್ಲಿ ಮೊಹರಂ ಹಬ್ಬದ ಪ್ರಯುಕ್ತ 3ನೇ ವರ್ಷದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ರಕ್ತದಾನ ಶಿಬಿರಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನೂರ್ ಜಹನ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಮೊಹರಂ ಮಸೀದಿಯ ಅಧ್ಯಕ್ಷ ಹೈದರ್ ಅಲಿ, ಪ್ರತಿ ವರ್ಷ ಯುವಕರ ಬಳಗದಿಂದ ರಕ್ತದಾನ ಮಾಡುತ್ತಾರೆ. ಇನ್ನೂ ಹೆಚ್ಚಿನದಾಗಿ  ರಕ್ತದಾನ ಮಾಡಿ ಜನರ ಜೀವವನ್ನು ಉಳಿಸಿ‌ ಎಂದು ರಕ್ತದಾನ ಮಾಡಿದ ಯುವಕರಿಗೆ ಧನ್ಯವಾದ ತಿಳಿಸಿದರು.

ಉಪಾಧ್ಯಕ್ಷ ಪರ್ವಿಜ್ ಮಾತನಾಡಿ, ಪ್ರತಿ ವರ್ಷ ಮೊಹರಂ ಹಬ್ಬದ 9ನೇ ದಿನದಂದು ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತೇವೆ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಜನರ ಜೀವ ಉಳಿಸಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಎನ್.ಎಂ.ಹಾಲಸ್ವಾಮಿ , ಬಿಲಾಲ್ ಮಸೀದಿಯ ಅಧ್ಯಕ್ಷ ಇಮಾಂ ಅಲಿ, ಮುಖಂಡರಾದ ಹುಸೇನ್ ಮಿಯಸಾಬ್ , ಪತ್ರಕರ್ತ ಸೂಬಾನ್, ಪ್ರಯೋಗಾಲಯದ ತಜ್ಞ ಉಮೇಶ್ , ಅಶ್ವಿನಿ  ಸೇರಿದಂತೆ ಇತರರು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3750246
Today
Yesterday
This Week
Last Week
This Month
Last Month
All days
396
13442
102387
3588738
176473
189062
3750246
Your IP: 23.22.136.56
2017-12-17 00:36