Breaking News

ಮೂರು ದಿನಕ್ಕೊಮ್ಮೆ ಕಾಂಗ್ರೇಸ್ ಹಗರಣ ಬಯಲು : ಯಡಿಯೂರಪ್ಪ

Written by 
Published: 06 October 2017
23 times Last modified on Saturday, 07 October 2017 06:40

ಕೆ.ಎನ್.ಪಿ.ವಾರ್ತೆ,ಬಾಗಲಕೋಟೆ,ಅ.07;

ವರದಿ : ಬಸವರಾಜ್ ಬಾಬು ಕೋರಿ

ಪ್ರತಿ ಮೂರು ದಿನಕ್ಕೊಮ್ಮೆ ಕಾಂಗ್ರೇಸ್ ಪಕ್ಷದ ಒಂದೊಂದು ಹಗರಣವನ್ನು ಬಿ.ಜೆ.ಪಿ ಬಯಲು ಮಾಡುತ್ತದೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ನಿನ್ನೆ ಬೀಳಗಿ ಬಿ.ಜೆ.ಪಿ ಕಾರ್ಯಾಲಯದಲ್ಲಿ ನಡೆದ ಪಕ್ಷ ಸೇರ್ಪಡೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಅವರು ಹೀಗೆ ಹೇಳಿದರು. ಈಗಾಗಲೇ ಶೋಭಾ ಕರಂದ್ಲಾಜೆ ಕಾಂಗ್ರೇಸ್ ಪಕ್ಷದ ಒಂದು ಹಗರಣವನ್ನು ಬಯಲು ಮಾಡಿದ್ದಾರೆ. ಇನ್ನೂ ಅನೇಕ ಹಗರಣಗಳನ್ನು ನಾವು ಬಯಲು ಮಾಡುತ್ತೇವೆ. ಮತ್ತು ಬರುವ 23 ರಂದು ವಿಜಯಪುರದಲ್ಲಿ ನೀರಾವರಿಗಾಗಿ 50 ಸಾವಿರ ರೈತರೊಂದಿಗೆ ಹೋರಾಟ ಮಾಡುವುದಾಗಿ ತಿಳಿಸಿದರು.

ನಂತರ 24 ರಂದು ಬೀಳಗಿಯಲ್ಲಿ ತಮ್ಮ ಪಕ್ಷದ ಎಸ್.ಸಿ, ಎಸ್.ಟಿ ಸಮಾವೇಶ ನಡೆಯಲ್ಲಿದ್ದು, ಅದರಲ್ಲಿ ಈ ಸಮುದಾಯದ 1 ಲಕ್ಷ ವ್ಯಕ್ತಿಗಳನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ತಿಳಿಸಿದರು. ಆಲಮಟ್ಟಿ ಅಣೆಕಟ್ಟಿನ ಮೂರನೇ ಹಂತದ ಯೋಜನೆಯಲ್ಲಿ ರೈತರು ಕಳೆದುಕೊಂಡಿರುವ ಜಮೀನುಗಳಿಗೆ ಯೋಗ್ಯ ಬೆಲೆ ನಿಗದಿ ಮಾಡಬೇಕು. ಅದಕ್ಕಾಗಿ ಬೆಲೆ ನಿರ್ಧಾರಕ್ಕಾಗಿ ಸರ್ಕಾರ ನೇಮಿಸುವ ಸಮಿತಿಯಲ್ಲಿ ಮುಳುಗಡೆ ಸಂತ್ರಸ್ಥರ ಹೋರಾಟ ಸಮಿತಿಯ ಅಧ್ಯಕ್ಷರನ್ನೂ ಸದಸ್ಯರನ್ನಾಗಿ ತೆಗೆದುಕೊಳ್ಳಬೇಕೆಂದು ಹೇಳಿದರು.

ನವಂಬರ್ 2 ರಿಂದ ರಾಜ್ಯದ 224 ಮತಕ್ಷೇತ್ರಗಳಲ್ಲಿ ಸಂಚರಿಸುವ ರಥಯಾತ್ರೆ ಆರಂಭಗೊಳ್ಳಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸ ತಮಗಿದೆ. ಅದಕ್ಕಾಗಿ ಜನತೆ ಆಶೀರ್ವದಿಸಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಅನೇಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಯಿತು.

ಅದರಲ್ಲಿ ಕಾಂಗ್ರೇಸ್ ತೊರೆದು ಬಂದವರೂ ಇದ್ದರು. ಕಾರ್ಯಕ್ರಮದಲ್ಲಿ ಶೋಭಾ ಕರಂದ್ಲಾಜೆ, ಗೋವಿಂದ ಕಾರಜೋಳ, ಸಂಸದರಾದ ಗದ್ದಿಗೌಡರ, ವಿಧಾನ ಪರಿಷತ್ತ್ ಸದಸ್ಯರಾದ ಹೆಚ್.ಆರ್.ನಿರಾಣಿ, ಸ್ಥಳೀಯ ಮುಖಂಡರಾದ ಮೋಹನ ಜಾಧವ, ಸಂಗಣ್ಣ ಕಟಗೇರಿ, ಹೊಳಬಸು ಬಾಳಶೆಟ್ಟಿ ಮತ್ತು ಶಿವಪ್ಪ ಮಸೂತಿ ಉಪಸ್ಥಿತರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3274035
Today
Yesterday
This Week
Last Week
This Month
Last Month
All days
2556
6468
22878
3222209
98525
263209
3274035
Your IP: 54.158.55.5
2017-10-18 09:21