Breaking News

ಮೈಸೂರು ದಸರಾ ಕವಿಗೋಷ್ಠಿಗೆ ಮಕಾನದರ ಆಯ್ಕೆ

Written by 
Published: 26 September 2017
49 times Last modified on Tuesday, 26 September 2017 12:13

ಕೆ.ಎನ್.ಪಿ.ವಾರ್ತೆ,ಗದಗ,ಸೆ.26;

ನಾಳೆ ಜರುಗಲಿರುವ ಪ್ರಧಾನ ದಸರಾ ಕವಿಗೋಷ್ಠಿಗೆ  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾದ ಕವಿ ಎಸ್.ಮಕಾನದರ ಆಯ್ಕೆಯಾಗಿದ್ದಾರೆ.

ಸೆ.21ರಿಂದ 30ರವರೆಗೆ ಜರುಗಲಿರುವ ವಿಶ್ವ ವಿಖ್ಯಾತಿ ಮೈಸೂರು ದಸರೆಯಲ್ಲಿ ಸಾಹಿತ್ಯಾಭಿಮಾನಿಗಳ ನೆಚ್ಚಿನ ಕಾರ್ಯಕ್ರಮವಾದ ಕವಿಗೋಷ್ಠಿಯ ಉದ್ಘಾಟನೆಯು ಸೆ.24ರಂದು ನೆರವೇರಿದೆ. ವಿಕಾಸ, ವಿನೋದ, ವಿಶಿಷ್ಟ ಮತ್ತು ಪ್ರಧಾನ ದಸರಾ ಕವಿಗೋಷ್ಠಿ ಎಂಬ 4 ಪ್ರಕಾರಗಳಲ್ಲಿನಡೆಯಲಿರುವ ಕವಿಗೋಷ್ಠಿ, ಸೆಪ್ಟಂಬರ್ 24 ರಿಂದ 27 ರವರೆಗೆ ನಾಲ್ಕು ದಿನ ಜಗನ್ಮೋಹನ ಅರಮನೆಯಲ್ಲಿ ನಡೆಯಲಿದೆ. 

ಕವಿ ಮಕಾನದಾರರು ಭಾಗವಹಿಸಲಿರುವ ಪ್ರಧಾನ ಕವಿಗೊಷ್ಠಿಯಲ್ಲಿ ಕನ್ನಡ ಭಾಷೆಯ ಜೊತೆಗೆ ಬ್ಯಾರಿ, ಕೊಡುವ ಉರ್ದು ಕೊಂಕಣ ತುಳು ಭಾಷಿಕರು ಕವಿಗಳು ಕವಿಗೊಷ್ಠಿಯಲ್ಲಿ ಕವಿತೆ ವಾಚನ ಮಾಡುವರು. ನಾಳೆ ನಡೆಯಲಿರುವ ಪ್ರಧಾನ ಕವಿಗೋಷ್ಥಿಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಹಾಗೂ ಗೀತ ರಚನಕಾರ ಜಯಂತ್ ಕಾಯ್ಕಿಣಿ, ಮತ್ತು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿ ಅಥಿತಿಯಾಗಿ ಪಾಲ್ಗೊಳ್ಳಲಿದ್ದಾರೆ.

ಡಾ. ಬಂಜಗೆರೆ ಜಯಪ್ರಕಾಶ ಟಿ.ಸಿ. ಪೂರ್ಣಿಮಾ, ಎಂ.ಜಿ ದೇಶಪಾಂಡೆ, ಜಯಪ್ಪ ಹೊನ್ನಳ್ಳಿ, ಮಹಾಂತಪ್ಪ, ನಂದೂರು, ಮಹ್ಮದ ಬಡ್ಡೂರು, ಮುಂತಾದ ಖ್ಯಾತ ನಾಮ ಕವಿಗಳ ಜೊತೆಗೆ ನ್ಯಾಯಾಂಗ ಇಲಾಖೆಯ ಉದ್ಯೊಗಿ ಮಕಾನದಾರರು ಗದಗ ಜಿಲ್ಲೆಯನ್ನು ಪ್ರತಿನಿಧಿಸಿ ಕವಿತೆ ವಾಚಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ.


shivakumar h

There is will There is way 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3278788
Today
Yesterday
This Week
Last Week
This Month
Last Month
All days
983
6326
27631
3222209
103278
263209
3278788
Your IP: 54.80.236.48
2017-10-19 03:19