Breaking News

ನಾಳೆ ಗದಗದಲ್ಲಿ ಪ್ರತಿಭಟನೆ

Written by 
Published: 29 September 2017
40 times Last modified on Friday, 29 September 2017 18:50

ಕೆ.ಎನ್.ಪಿ.ವಾರ್ತೆ,ಗದಗ,ಸೆ.29;

ವಿಚಾರವಾದಿ, ಚಿಂತಕರಾದ ಡಾ.ಕಲಬುರ್ಗಿ, ದಾಬೋಲ್ಕರ, ಪನ್ಸಾರೆ ಹಾಗೂ ಖ್ಯಾತ  ಪತ್ರಕರ್ತೆ, ಪ್ರಖರ ವಿಚಾರಧಾರೆಗಳ ಚಿಂತಕಿ ಗೌರಿ ಲಂಕೇಶ್ ಅವರನ್ನು ಕೋಮುವಾದಿ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿರುವುದನ್ನು  ಖಂಡಿಸಿ ಹತ್ಯಾಕೋರರನ್ನು ಬಂಧಿಸಲು ಒತ್ತಾಯಿಸಿ ಹತ್ಯಾಕೋರರನ್ನು ಬಂಧಿಸುವ ತನಕ  ಗದಗಿನಲ್ಲಿ ಪ್ರತಿ ತಿಂಗಳ 15 ಮತ್ತು 30 ತಾರೀಖುಗಳಂದು ನಿರಂತರ ಪ್ರತಿಭಟನೆ ನಡೆಯುತ್ತಿದೆ. 

ಈ ಹಿನ್ನೆಲೆಯಲ್ಲಿ ನಾಳೆ ನಗರದ ಗಾಂಧಿ ವೃತ್ತದಲ್ಲಿ ಸಂಜೆ 6 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಈ ಹತ್ಯೆಗಳನ್ನು ಖಂಡಿಸಿ ಪ್ರತಿಭಟನೆಯನ್ನು ದಾಖಲಿಸಲು ಪತ್ರಕರ್ತರು, ಲೇಖಕರು, ಪ್ರಜ್ಞಾವಂತ ಚಿಂತಕರು 'ಲೇಖನಿ ರಕ್ಷಿಸಿ' (Protest pen) ಹೆಸರಿನಲ್ಲಿ ಭಿನ್ನ ಬಗೆಯ ಪ್ರತಿಭಟನೆಗೆ ಮುಂದಾಗಿದ್ದು, ನಾಳೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರತಿಭಟನಾರ್ಥವಾಗಿ ಪೆನ್ನು ಕೊಡಲಾಗುವದು.

ಕಲಾವಿದರು ತಮ್ಮ ಕುಂಚವನ್ನು ನೀಡುವ ಮೂಲಕ ಡಾಕ್ಟರ್ ಗಳು ತಮ್ಮ ಸ್ಟೆತಸ್ಕೋಪ್ ನೀಡುವ ಮೂಲಕ ಕಾರ್ಮಿಕರು ತಮ್ಮ ಕೆಲಸದ ಸಾಮಗ್ರಿಗಳನ್ನು ನೀಡುವ ಮೂಲಕ ಇಂಜನಿಯರ್ ತಮ್ಮ ಸ್ಕೇಲ್ಗಳನ್ನು ನೀಡುವ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ತಮ್ಮ ಪ್ರತಿಭಟನೆಯನ್ನ ವ್ಯಕ್ತಪಡಿಸಲಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಗಾಗಿ ಬದ್ಧತೆ ಪ್ರದರ್ಶಿಸಲು, ಮತ್ತು ಪ್ರಜಾಪ್ರಭುತ್ವವನ್ನೇ ಹತ್ಯೆ ಮಾಡುವ ಈ ವಿದ್ವಂಸಕ ಕೃತ್ಯವನ್ನು ಖಂಡಿಸಲು.

ನಾಳೆ ಸಂಜೆ 6 ರಿಂದ 7.30 ರವರೆಗೆ ಗಾಂಧಿ ಸರ್ಕಲ್ ನಲ್ಲಿ ಧರಣಿ ನಡೆಸೋಣ. ಹಂತಕರನ್ನು ಬಂಧಿಸಲು ಎರಡೂ ಸರ್ಕಾರಗಳ ಮೇಲೆ ಒತ್ತಡ ಹಾಕೋಣ. ತಾವು ಸಹ ಈ ಪ್ರತಿಭಟನೆಯಲ್ಲಿ ಭಾಗವಹಿಸಿ, ಮನವಿಯೊಂದನ್ನು ಸರಕಾರಕ್ಕೆ  ಸಲ್ಲಿಸಲು ಕೈಜೋಡಿಸಬೇಕೆಂದು  ನಗರದ ಗೌರಿ ಲಂಕೇಶ್ ಡಾ. ಕಲಬುರ್ಗಿ ಪನ್ಸಾರೆ ದಾಭೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿಯವರು ಪ್ರಕಟನೆಯಲ್ಲಿ ಕೋರಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3278806
Today
Yesterday
This Week
Last Week
This Month
Last Month
All days
1001
6326
27649
3222209
103296
263209
3278806
Your IP: 54.80.236.48
2017-10-19 03:21