Breaking News

ನಾಳೆ ಜ್ಞಾನವಿಕಾಸ ಸಮಾವೇಶ ಕಾರ್ಯಕ್ರಮ

Written by 
Published: 30 November 2017
32 times Last modified on Friday, 01 December 2017 07:56

ಕೆ.ಎನ್.ಪಿ.ವಾರ್ತೆ,ಕಾರಟಗಿ,ನ.30;

ಜ್ಞಾನವಿಕಾಸ ಸಮಾವೇಶ ಕಾರ್ಯಕ್ರಮವನ್ನು ನಾಳೆ ಆಯೋಜಿಸಲಾಗಿದೆ.

ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಕಾರಟಗಿ ಹಾಗೂ ಸಮಸ್ತ ಶಿಕ್ಷಣ ಪ್ರೇಮಿಗಳ ಆಶ್ರಯದಲ್ಲಿ "ಜ್ಞಾನವಿಕಾಸ ಸಮಾವೇಶ ಕಾರ್ಯಕ್ರಮ"ವನ್ನು ನಾಳೆ ಬೆಳಿಗ್ಗೆ 9.15ಕ್ಕೆ ಶ್ರೀ ಸಿದ್ದೇಶ್ವರ ಸ್ವಾಮಿಗಳ ರಂಗ ಮಂಟಪ ಸರಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನ ನವಲಿ ರಸ್ತೆ ಕಾರಟಗಿಯಲ್ಲಿ ಹಮ್ಮಿಕೊಳ್ಳಲಾಗಿದೆ.ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಶಿಕ್ಷಣದ ಮಹತ್ವ ಹಾಗೂ ಬೌಧಿಕ ಶಕ್ತಿಯನ್ನು ಹೆಚ್ಚಿಸುವ ಸದುದ್ದೇಶದಿಂದ ಜ್ಞಾನ ವಿಕಾಸವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ನಾಡಿನ ಗುರುವರ್ಯರು, ಸುಪ್ರಸಿದ್ದ ಚಿಂತಕರು ಹಾಗೂ ಸಾಧಕರು ಮುಖ್ಯ ವಕ್ತಾರರಾಗಿ ಆಗಮಿಸುವರು.

 

ಈ ಸಮಾವೇಶ ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗೂ ಯುವಶಕ್ತಿಯ ಚಿಂತನೆಗಳನ್ನು ಬಲಪಡಿಸುವ ಕುರಿತಾಗಿ ಉಪನ್ಯಾಸ ಮಾಲಿಕೆ ಹಾಗೂ ಯುವಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಗವಿಮಠ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, "ಭತ್ತದ ನಾಡಿನ ಯುವಶಕ್ತಿಗೊಂದು ಗವಿಮಠ ಸಂದೇಶ"  ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ.

 

"ಯುವಶಕ್ತಿ ಮತ್ತು ರಾಷ್ಟ್ರ ಪ್ರೇಮ" ಎಂಬ ವಿಷಯದ ಕುರಿತು ಸೇಡಂನ ರಾಜ್ಯಸಭಾ ಸದಸ್ಯರು ಹಾಗೂ ಶಿಕ್ಷಣ ಪ್ರೇಮಿಗಳಾದ ಬಸವರಾಜ ಪಾಟೀಲ್ ಮಾತನಾಡಲಿದ್ದಾರೆ. ಮಹಾರಾಷ್ಟ್ರ ಕನ್ನೇರಿ ಮಠದ ಮಹಾಸ್ವಾಮಿಗಳಾದ ಕಾಡಸಿದ್ದೇಶ್ವರ ಅವರು "ನಡೆ-ನುಡಿ ಹೊಂದಾದಾಗ ಬಾಳು ಬೆಳಗುವ ಶಿಕ್ಷಣ" ಕುರಿತು ಮಾತನಾಡುವರು.

 

ಗುರುರಾಜ ಕರಜಗಿ ಅಂತರರಾಷ್ಟ್ರೀಯ ಶಿಕ್ಷಣ ತಜ್ಞರು ಬೆಂಗಳೂರು : "ಬದಲಾದ ಪರಸ್ಥಿತಿಯಲ್ಲಿ ಬದಲಾದ ಶಿಕ್ಷಣ" 

ರವಿ ಡಿ ಚನ್ನಣ್ಣನವರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಮೈಸೂರು : "ಉತ್ತಿಷ್ಠಿತ ಜಾಗೃತ - ಯುವಕರಿಗೊಂದು ಕರೆ"

ಈ ಶಿಕ್ಷಣ ಸಮಾವೇಶಕ್ಕೆ ಯುವಕರು ಪಾಲಕರು ಹಾಗೂ ಸಾರ್ವಜನಿಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಕಾರಟಗಿಯ ವ್ಯವಸ್ಥಾಪಕ ನಿರ್ದೇಶಕರಾದ ಲೀಲಾ ಮಲ್ಲಿಕಾರ್ಜುನ ಹಾಗೂ ಸಮಸ್ತ ಶಿಕ್ಷಣ ಪ್ರೇಮಿಗಳ ಬಳಗ ಪ್ರಕಟಣೆಯಲ್ಲಿ ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 

ಮೊನಂ :  9148123636, 948211972526

 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770856
Today
Yesterday
This Week
Last Week
This Month
Last Month
All days
6028
14978
21006
3647859
197083
189062
3770856
Your IP: 54.221.76.68
2017-12-18 08:55