Breaking News

ನಟ ಯಶ್ ಹುಟ್ಟುಹಬ್ಬಕ್ಕೆ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ

Written by 
Published: 10 January 2018
27 times Last modified on Thursday, 11 January 2018 06:19

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ‌.10;

ವರದಿ : ಬಸವರಾಜ್ ಪೂಜಾರ್

ನಟ ಯಶ್ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ಉಚ್ಚಂಗಿದುರ್ಗದಲ್ಲಿ ಶಾಲಾ ಮಕ್ಕಳಿಗೆ ಪೆನ್ನು, ಪುಸ್ತಕ ವಿತರಿಸಿದರು.

ಹರಪನಹಳ್ಳಿ ತಾಲೂಕಿನ  ಉಚ್ಚಂಗಿದುರ್ಗದಲ್ಲಿ ಯುವಕರ ತಂಡ ಬೆಳ್ಳಂಬೆಳಿಗ್ಗೆ ನಗರದ ಬೀದಿಗಿಳಿದು ಅವರ ನೆಚ್ಚಿನ ನಟ ಯಶ್ ರ ಹುಟ್ಟುಹಬ್ಬದ ನಿಮಿತ್ಯ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಪೆನ್ನು ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮೂಲಕ ವಿನೂತನವಾಗಿ ನಟ ಯಶ್ ರ ಹುಟ್ಟುಹಬ್ಬವನ್ನು ಆಚರಿಸಿದರು.  

ಶಾಲಾ ಮಕ್ಕಳಿಗೆ ಪೆನ್ನು ಕಲಿಕಾ ಸಾಮಗ್ರಿಗಳ ವಿತರಣೆ ಜೊತೆಗೆ ಅವರ ಅಭಿಮಾನಿಗಳು ನಗರದಲ್ಲಿ ಸರಕಾರಿ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣುಗಳನ್ನು ವಿತರಿಸಿ, ಕೇಕ್ ಕತ್ತರಿಸಿ ಅವರ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ನಟ ಯಶ್ ರ ಅಭಿಮಾನಿಗಳ ಸಂಭ್ರಮಾಚರಣೆಯನ್ನು ಕಂಡ ಸಾರ್ವಜನಿಕರು ಆಶ್ಚರ್ಯಚಕಿತರಾದರು. ಸಾರ್ವಜನಿಕರು ಮತ್ತು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಯಶ್ ರ ಹುಟ್ಟುಹಬ್ಬವನ್ನು ಸಾರ್ವಜನಿಕೆರಿಗೆ ಸೇವೆ ಮಾಡುವ ಮೂಲಕ ಅವರ ಅಭಿಮಾನಿಗಳು ಆಚರಿಸಿದ್ದು ಗಮನಾರ್ಹವಾಗಿದೆ. ಅಲ್ಲದೆ ಹುಚ್ಚಂಗೆಮ್ಮನ ಗುಡಿಯಲ್ಲಿ ಪೂಜೆ ಸಲ್ಲಿಸಿ ನಟ ಯಶ್ ಗೆ ಶುಭ ಕೋರಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250574
Today
Yesterday
This Week
Last Week
This Month
Last Month
All days
9981
16742
76302
4062809
281669
395132
4250574
Your IP: 54.234.190.237
2018-01-18 16:03