Breaking News

ಅ.09 ರಂದು ಬೆಂಗಳೂರು ಚಲೋ

Written by 
Published: 04 October 2017
48 times Last modified on Thursday, 05 October 2017 05:25
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಪಿಪಿವೇಧಿಕೆಯ ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಪಿಪಿವೇಧಿಕೆಯ ಮುಖಂಡರು

ಕೆ.ಎನ್.ಪಿ.ವಾರ್ತೆ,ಬಳ್ಳಾರಿ, ಅ.೦4; 

ವರದಿ : ಟಿ.ಗಣೇಶ್.

ಪ್ರಜಾಪರಿವರ್ತನಾ ಪಾರ್ಟಿಯ ಉದ್ಘಾಟನೆಗಾಗಿ ಅ.09ರಂದು ಬೆಂಗಳೂರು ಚಲೋ.

ರಾಷ್ಟ್ರೀಯ ಪ್ರಜಾಪರಿವರ್ತನಾ ಪಾರ್ಟಿಯ ಉದ್ಘಾಟನೆಗಾಗಿ ಅಕ್ಟೋಬರ್ 9ರಂದು ಬೆಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಪಿವಿಯ ಜಿಲ್ಲಾಧ್ಯಕ್ಷ ಸಿ.ಆನಂದ್ ತಿಳಿಸಿದರು. ಬುಧುವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಳ್ಳಾರಿ ಜಿಲ್ಲೆಯಿಂದ ಸುಮಾರು 2000ಕ್ಕೂ ಹೆಚ್ಚು ಕಾರ್ಯಕರ್ತರು ಅ 8ರಂದು ರಾತ್ರಿ 8ಗಂಟೆಗೆ ಬಳ್ಳಾರಿಯಿಂದ ಹೊರಡುತ್ತಿದ್ದೇವೆ. ಅ.9ರಂದು ಬೆಂಗಳೂರಿನಲ್ಲಿ ನಮ್ಮ ಪಕ್ಷ ಉದ್ಘಾಟನೆ ನಡೆಯಲಿದೆ ಎಂದರು.

ಈ ಉದ್ಘಾಟನಾ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳಿಂದ ಚತ್ತೀಸ್‍ಗಡ ಮಾಜಿ ವಿರೋಧಪಕ್ಷದ ನಾಯಕರಾದ ದಾವುದ್‍ರಾಮ್ ರತ್ನಾಕರ್, ಹರಿಯಾಣಾದಿಂದ ಕಾಂತಾರಾಮ್, ಭುಜೀತ್‍ಸಿಂಘ್, ಸರೋಜ್‍ನಾಯಕ್, ಪ್ರಭುಜಿತ್‍ಸಿಂಗ್, ಶಿವಪ್ರಕಾಶ್, ಇತರ ಪ್ರಮುಖರು  ಭಾಗವಹಿಸಲಿದ್ದಾರೆಂದು ರಾಜ್ಯಾಧ್ಯಕ್ಷ ಬಿ.ಗೋಪಾಲ್‍ ತಿಳಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಪ್ರಧಾನಕಾರ್ಯದರ್ಶಿ ವೈ.ಶಿವಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೊಳಗಲ್ ಕೃಷ್ಣ, ಜಿಲ್ಲಾ ಮುಖಂಡ ಕೆ.ಸಿ.ಸಿದ್ದಬಸಪ್ಪ, ಜಿಲ್ಲಾ ಉಪಾಧ್ಯಕ್ಷ ಉಮೇಶ್, ಲಕ್ಷ್ಮಿಕಾಂತ್, ಕುಡುತಿನಿ ಬಸವರಾಜ್, ಸಂಜೀವಪ್ಪ ಇತರರು ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770905
Today
Yesterday
This Week
Last Week
This Month
Last Month
All days
6077
14978
21055
3647859
197132
189062
3770905
Your IP: 54.221.76.68
2017-12-18 09:00