Breaking News

ಪ.ಪಂ ನೂತನ ಅಧ್ಯಕ್ಷರಾಗಿ ಕಸ್ತೂರೆವ್ವ ಆಯ್ಕೆ

Written by 
Published: 06 December 2017
10 times Last modified on Wednesday, 06 December 2017 05:14

ಕೆ.ಎನ್.ಪಿ.ವಾರ್ತೆ,ಬೀಳಗಿ,ಡಿ.05;

ವರದಿ : ಬಸವರಾಜ್ ಬಾಬು ಕೋರಿ

ಪ.ಪಂ ನೂತನ ಅಧ್ಯಕ್ಷರಾಗಿ ಕಸ್ತೂರೆವ್ವ ಆಯ್ಕೆಯಾಗಿದ್ದಾರೆ.

ಬೀಳಗಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿದ್ದ ಅನಿಲ ಗಚ್ಚಿನಮನಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಕಸ್ತೂರೆವ್ವ.ಶಿ.ಮಾದರ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕಾಗಿ ಇಬ್ಬರ ನಡುವೆ ಪೈಪೋಟಿ ನಡೆದಿದ್ದು, ಇಬ್ಬರೂ ಸಮಾನ ಮತಗಳನ್ನು ಪಡೆದ ಕಾರಣ, ಚೀಟಿಯನ್ನು ಎತ್ತುವ ಮೂಲಕ ಈ ಆಯ್ಕೆಯನ್ನು ಮಾಡಲಾಯಿತು.

ಚುನಾವಣಾಧಿಕಾರಿಯಾಗಿ ತಹಶೀಲ್ದಾರ ಉದಯ ಕುಂಬಾರ ಇದ್ದರು. ಈ ಸಂದರ್ಭದಲ್ಲಿ ಶಾಸಕರಾದ ಜೆ.ಟಿ.ಪಾಟೀಲ, ವಿಧಾನ ಪರಿಷತ್ತ್ ಸದಸ್ಯರಾದ ಹೆಚ್.ಆರ್.ನಿರಾಣಿ, ಪ.ಪಂ ಉಪಾಧ್ಯಕ್ಷೆ ಇಂದ್ರವ್ವ ಕೌಲಗಿ, ತಾಪಂ ಸದಸ್ಯ ಹಣಮಂತ ಕಾಖಂಡಕಿ ಮುಂತಾದವರು ಉಪಸ್ಥಿತರಿದ್ದರು. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770707
Today
Yesterday
This Week
Last Week
This Month
Last Month
All days
5879
14978
20857
3647859
196934
189062
3770707
Your IP: 54.221.76.68
2017-12-18 08:43