Breaking News

ಪರಿಶ್ರಮವಿಲ್ಲದೆ ಸಾಧನೆ ಅಸಾಧ್ಯ : ಡಾ.ವಿ.ಟಿ.ಕಾಳೆ

Written by 
Published: 30 November 2017
28 times Last modified on Friday, 01 December 2017 06:27

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.01;

ವರದಿ : ಟಿ.ಗಣೇಶ್

ಪರಿಶ್ರಮವಿಲ್ಲದೆ ಸಾಧನೆ ಅಸಾಧ್ಯ ಎಂದು ಹಿರಿಯ ಚಿತ್ರಕಲಾವಿದ ಡಾ.ವಿ.ಟಿ.ಕಾಳೆ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದ ಬಸವರಾಜೇಶ್ವರಿ ಪಬ್ಲಿಕ್‌ ಸ್ಕೂಲ್‌ ಆ್ಯಂಡ್‌ ಕಾಲೇಜಿನಲ್ಲಿ ಏರ್ಪಡಿಸಿದ್ದ ನಾಡೋಜ ಬೆಳಗಲ್ ವೀರಣ್ಣ ಅವರ ಜೀವನ ಸಾಧನೆ ಕುರಿತಾದ ವಿಚಾರಣ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರಿಶ್ರಮವಿಲ್ಲದೆ ಸಾಧನೆ ಅಸಾಧ್ಯ, ಸಾಧಕರ ಸಾಧನೆಯನ್ನು ನೆನೆಯುವ ಮೂಲಕ ಮುಂದಿನ ಪೀಳಿಗೆಗೆ ಕಲೆಯನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕೆಂದು ತಿಳಿಸಿದರು.

ಸಂವಾದಕರ ಪ್ರಶ್ನೆಗೆ ಬೆಳಗಲ್ ವೀರಣ್ಣ ಮಾತನಾಡಿ, ಸತತ ಪರಿಶ್ರಮ, ಸಾಧನೆ ಮಾಡಬೇಕೆಂಬ ತುಡಿತವು ಸೌಲಭ್ಯ ಇಲ್ಲದಿರುವ ಕೊರತೆಯನ್ನು ಹೋಗಲಾಡಿಸಿ, ಸಾಧನೆಯ ತುಡಿತವನ್ನು ಹೆಚ್ಚಿಸುತ್ತದೆ. ಇಂದು ಜೀವನಕ್ಕೆ ವಿದ್ಯಾಭ್ಯಾಸ ಬೇಕಾದರೂ, ಕಲೆಯ ಉಳಿಯುವಿಕೆಗೆ ಇಚ್ಚಾಶಕ್ತಿ, ಆಸಕ್ತಿ ಬೇಕಾಗುತ್ತದೆ. ಇಂದು ವಿದ್ಯಾರ್ಥಿಗಳ ಸಾಧನೆಗೆ ಸಾಕಷ್ಟು ಅವಕಾಶಗಳಿವೆ. ಅದನ್ನು ಸಮರ್ಥವಾಗಿ ಬೆಳೆಸಿಕೊಳ್ಳುವ ಮನೋಭಾವನೆ ಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಂಜಮ್ಮ ಜೋಗತಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇರುತ್ತದೆ. ಅದನ್ನು ಹೊರತರಲು ತಮ್ಮ ಇಚ್ಛಾಶಕ್ತಿಯನ್ನು ತೋರಬೇಕಾಗಿದೆ. ವಿದ್ಯಾರ್ಥಿಗಳು ಸಮಯವನ್ನು ವಿದ್ಯಾಭ್ಯಾಸದೊಂದಿಗೆ ಕಲೆಯತ್ತ ತೊಡಗಿಸಿಕೊಳ್ಳಬೇಕು, ಜ್ಞಾನವು ನಮ್ಮ ಹೊಟ್ಟೆ ತುಂಬಿಸಿಕೊಳ್ಳಲು ನೆರವಾದರೆ, ಕಲೆಯು ನಮ್ಮ ಸಂಸ್ಕೃತಿಯನ್ನು ಶ್ರೀಮಂತಿಕೆಗೊಳಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬೆಳಗಲ್ ವೀರಣ್ಣನವರ ಜೀವನ ಮತ್ತು ಸಾಧನೆ ಕುರಿತಾಗಿ ಟಿ.ಕೆ.ಗಂಗಾಧರ ಪತ್ತಾರ್‍ರವರು, ರಂಗಭೂಮಿ ಮತ್ತು ತೊಗಲುಗೊಂಬೆ ಕಲಾಕ್ಷೇತ್ರದ ಕೊಡುಗೆಗಳು ಕುರಿತಾಗಿ ಎ.ಎಂ.ಜಯಶ್ರೀರವರು ವಿಚಾರ ಮಂಡಿಸಿದರು. ಈ ವೇಳೆ ಕಲಾವಿದರಾದ ವೀಣಾಕುಮಾರಿ, ಕೆ.ಪಂಪಾಪತಿ, ಪತ್ರಕರ್ತ ಸಿ.ಮಂಜುನಾಥ್, ಶಶಿಧರ ಮೇಟಿ, ಚಿತ್ರಕಲಾವಿದ ಕೆ.ವಿ.ಕಾಳೆಯವರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹೊಸಪೇಟೆಯ ಜೀವನ್‍ಸಾಬ್ ವಾಲಿಕರ್‍ರವರು ಜಾನಪದ ಗೀತೆಗಳ ಗಾಯನದ ಮೂಲಕ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಟಿಇಎಚ್‍ಆರ್‍ಡಿ ಟ್ರಸ್ಟ್ ನ ಡಾ.ಎಸ್.ಜೆ.ವಿ.ಮಹಿಪಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಬಸವರಾಜೇಶ್ವರಿ ಪಬ್ಲಿಕ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎಚ್.ಹರಿಕುಮಾರ್, ಸೇರಿದಂತೆ ಇತರರು ಇದ್ದರು. ಎಂ.ವಿನೋದ್ ಕಾರ್ಯಕ್ರಮ ನಿರ್ವಹಿಸಿದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770854
Today
Yesterday
This Week
Last Week
This Month
Last Month
All days
6026
14978
21004
3647859
197081
189062
3770854
Your IP: 54.221.76.68
2017-12-18 08:55