Breaking News

ಪ್ರಚಾರಕ್ಕಾಗಿ ಮಾಧ್ಯಮಗಳ ಹಿಂದೆ ಬಿದ್ದ ಸಿ.ಎಂ ; ಹೆಚ್.ಡಿ.ದೇವೇಗೌಡ ಆರೋಪ

Written by 
Published: 05 December 2017
45 times Last modified on Tuesday, 05 December 2017 14:35
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಹೆಚ್.ಡಿ.ದೇವೆಗೌಡ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಹೆಚ್.ಡಿ.ದೇವೆಗೌಡ

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.05;

ವರದಿ : ಟಿ.ಗಣೇಶ

ತನ್ನ ಸ್ವಂತ ಪ್ರಚಾರಕ್ಕಾಗಿ ಮಾಧ್ಯಮಗಳಿಗೆ ಜಾಹೀರಾತು ನೀಡುತ್ತಿರುವ ಸಿ.ಎಂ. ಸಿದ್ದರಾಮಯ್ಯ ಎಂದು ಹೆಚ್.ಡಿ.ದೇವೆಗೌಡ ಆರೋಪ.

ಸರ್ಕಾರದ ಹಲವು ಸಾಧನೆಗಳನ್ನು ಸಾರ್ವಜನಿಕರಿಗೆ ಪರಿಚಯಿಸಲು ಸಿ.ಎಂ.ಸಿದ್ದರಾಮಯ್ಯ ಪ್ರತಿದಿನ ಪತ್ರಿಕೆಗಳಿಗೆ ತಮ್ಮ ನಿಂತಿರುವ ಫೋಟೋಗಳನ್ನು ಹಾಕಿ ಜಾಹೀರಾತು ನೀಡುತ್ತಿದ್ದಾರೆ. ಸಾರ್ವಜನಿಕರ ಹಣದಲ್ಲಿ ತಮ್ಮ ಸ್ವಂತ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ ಎಂದು ಜೆ.ಡಿ.ಎಸ್.ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೆಗೌಡರು ಆರೋಪಿಸಿದರು.

ಮಂಗಳವಾರ ಬಳ್ಳಾರಿ ಜಿಲ್ಲಾ ಜೆ.ಡಿ.ಎಸ್. ಕಾರ್ಯಕರ್ತರ ಸಭೆಗೆ ಆಗಮಿಸಿದ ಹೆಚ್.ಡಿ.ದೇವೆಗೌಡ ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗಾರರೊಂದಿಗೆ ಸಭೆ ನೆಡೆಸಿ ಮಾತನಾಡಿದ ಅವರು ಸಿ.ಎಂ.ಸಿದ್ದರಾಮಯ್ಯ ಅವರು ಸಾರ್ವಜನಿಕರ ಕೋಟಿಗಟ್ಟಲೆ ಹಣವನ್ನು ಕೇವಲ ಪತ್ರಿಕೆ ಮಾಧ್ಯಮಗಳಿಗೆ ಪುಟಗಟ್ಟಲೆ ಜಾಹೀರಾತು ನೀಡುವ ಮೂಲಕ ಸರ್ಕಾರಿ ಸಾಧನೆಗಳ ಪರಿಚಯದ ನೆಪದಲ್ಲಿ ತಮ್ಮ ಫೋಟೋಗಳನ್ನು ಹಾಕಿ ಪ್ರಚಾರ ಮಾಡಿಸುವಲ್ಲಿ ಮುಂದಾಗಿದ್ದಾರೆ.

ಈ ಪ್ರಚಾರ ಯಾರಿಗೆ ಮತ್ತು ಏಕೆ ಬೇಕು ಎನ್ನುವುದು ತಿಳಿಯದಾಗಿದೆ. ಇದರಿಂದಾಗುವ ಲಾಭ ಕೇವಲ ಸಿ.ಎಂ. ಅವರ ಪ್ರಚಾರ ಬಿಟ್ಟರೆ ಬೇರೆ ಇಲ್ಲ. ಈ ರೀತಿ ಮಾಡುವುದರಿಂದ ಸರ್ಕಾರದ ಬೋಕ್ಕಸಕ್ಕೆ ನಷ್ಟವಾಗುತ್ತದೆ ಹೊರತು ಯಾವುದೇ ಉಪಯೋಗವಿಲ್ಲ ಎಂದು ಹೇಳಿದರು. ಈ ಸಂಧರ್ಭದಲ್ಲಿ ಜಿಲ್ಲೆಯ ಜೆ.ಡಿ.ಎಸ್. ಪಕ್ಷದ ಅನೇಕ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

R.K. Toona

"ಸತ್ಯದ ಹುಡುಕಾಟದಲಿ"

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770793
Today
Yesterday
This Week
Last Week
This Month
Last Month
All days
5965
14978
20943
3647859
197020
189062
3770793
Your IP: 54.221.76.68
2017-12-18 08:50