Breaking News

ಪ್ರಗತಿಪರ ಸಂಘಟನೆಗಳಿಂದ ನಾಳೆ ಗಂಗಾವತಿ ಬಂದ್ ಗೆ ಕರೆ

Written by 
Published: 11 January 2018
53 times Last modified on Thursday, 11 January 2018 10:04

ಕೆ.ಎನ್.ಪಿ.ವಾರ್ತೆ,ಗಂಗಾವತಿ,ಜ.11;

ವಿಜಯಪುರದ ಬಾಲಕಿ ಮೇಲಿನ ಅತ್ಯಾಚಾರ, ಸಚಿವ ಅನಂತ್‌ಕುಮಾರ ಹೆಗಡೆ ಹೇಳಿಕೆ ವಿರೋಧಿಸಿ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ, ಪ್ರಗತಿಪರ ಸಂಘಟನೆಗಳಿಂದ ನಾಳೆ ಗಂಗಾವತಿ ಬಂದ್‍ಗೆ ಕರೆ ನೀಡಲಾಗಿದೆ. 

ಪ್ರಗತಿಪರ ಸಂಘಟನೆಗಳ ಮುಖಂಡರು ನಾಳೆ ಬಂದ್‌ ಮಾಡಲು ನಿರ್ಣಯಿಸಿದ್ದು, ವಿಜಯಪುರ ಜಿಲ್ಲೆಯಲ್ಲಿನ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಅಮಾನವೀಯ ಕೃತ್ಯ, ಕೋರೆಗಾಂವ್‌ನಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿರುವುದು ಸೇರಿ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವ ಕೇಂದ್ರ ಸಚಿವ ಅನಂತ್‌ಕುಮಾರ ಹೆಗಡೆ ಹೇಳಿಕೆ ಖಂಡಿಸಿ, ಪ್ರಗತಿಪರ ಸಂಘಟನೆಗಳು ನಾಳೆ ಬಂದ್‌ ಗೆ ಕರೆ ನೀಡಿದ್ದು, ವಿವಿಧ ಪ್ರಗತಿಪರ ಸಂಘಟನೆ, ಎಡಪಕ್ಷಗಳು, ಆಮ್ ಆದ್ಮಿ, ಕಾರ್ಮಿಕ ಸಂಘಟನೆ ಬಂದ್‍ಗೆ ಬೆಂಬಲ ಸೂಚಿಸಿವೆ. 

ಸಮಾಜದಲ್ಲಿ ಅಮಾನವೀಯ ಕೃತ್ಯಗಳು ನಿರಂತರವಾಗಿ ಹೆಚ್ಚುತ್ತಿವೆ. ವಿಜಯಪುರ ಜಿಲ್ಲೆಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ. ಕೋರೆಗಾಂವ್‌ನಲ್ಲಿ ದಲಿತರ ಮೇಲೆ ನಡೆದ ಹಲ್ಲೆ ವಿರುದ್ಧವೂ ಕ್ರಮ ಜರುಗಿಲ್ಲ. ಇನ್ನು ಸಚಿವ ಅನಂತ್‌ಕುಮಾರ ಹೆಗಡೆ ಸಮಾಜ ವಿರೋಧಿ ಹೇಳಿಕೆ ನೀಡುವ ಮೂಲಕ ಸಮಾಜದ ಶಾಂತಿ ಹಾಳು ಮಾಡುತ್ತಿದ್ದಾರೆ. ಇಂಥವರ ವಿರುದ್ಧವೂ ಯಾವುದೇ ಕ್ರಮವಿಲ್ಲ.

ರಾಜ್ಯದಲ್ಲಿ ನಿತ್ಯ ಒಂದಿಲ್ಲೊಂದು ಘಟನೆ, ದೌರ್ಜನ್ಯಗಳು ನಡೆಯುತ್ತಿದ್ದರೂ ರಾಜ್ಯ, ಕೇಂದ್ರ ಸರಕಾರಗಳು ಇವು ತಮಗೆ ಸಂಬಂಧ ಇಲ್ಲ ಎನ್ನುವ ರೀತಿ ವರ್ತಿಸುತ್ತಿವೆ. ಇಂತಹ ಎಲ್ಲ ಘಟನೆಗಳನ್ನು ಖಂಡಿಸಿ, ಪ್ರಗತಿಪರ ಸಂಘಟನೆಗಳಿಂದ ಗಂಗಾವತಿ ಬಂದ್‌ ನಡೆಸಿ ಉಗ್ರ ಹೋರಾಟ ಮಾಡಲಾಗುತ್ತಿದೆ ಎಂದು ಪ್ರಗತಿಪರ ಸಂಘಟನೆಗಳ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250581
Today
Yesterday
This Week
Last Week
This Month
Last Month
All days
9988
16742
76309
4062809
281676
395132
4250581
Your IP: 54.234.190.237
2018-01-18 16:03