Breaking News

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಧರ್ಮಗ್ರಂಥವಾಗಲಿ - ಪ್ರೊ.ಎಂ.ಎಸ್.ಸುಭಾಷ್

Written by 
Published: 07 December 2017
27 times Last modified on Thursday, 07 December 2017 07:41

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಡಿ.07;

ವರದಿ : ಟಿ.ಗಣೇಶ್

ಭಾರತದಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನವೇ ಸರ್ವಜನಾಂಗದ ಧರ್ಮಗ್ರಂಥವಾಗಲಿ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎಂ ಎಸ್ ಸುಭಾಷ್‍ರವರು ಅಭಿಪ್ರಾಯಪಟ್ಟರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿಶೇಷ ಘಟಕ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಬಹು ಶಿಸ್ತೀಯ ಸಂಶೋಧನಾ ಕೇಂದ್ರ ಹಾಗೂ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿಶೇಷ ಘಟಕದ ವತಿಯಿಂದ ನಿನ್ನೆ ಏರ್ಪಡಿಸಿದ್ದ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್‍ರವರ 61ನೇ ಮಹಾಪರಿನಿರ್ವಾಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭಾರತವು ಜಗತ್ತಿನಲ್ಲಿಯೇ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊಮ್ಮಲು ಅಂಬೇಡ್ಕರ್‍ರವರ ಕೊಡುಗೆ ಅವಿಸ್ಮರಣೀಯ ಆದ್ದರಿಂದಲೇ ಅವರು ಓರ್ವ ಆದರ್ಶ ವ್ಯಕ್ತಿ ಮತ್ತು ಸಾಮಾಜಿಕ ಸಮಾನತೆಯ ಬಹುದೊಡ್ಡ ಶಕ್ತಿ ಎಂದು ನುಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ  ಡಾ. ಎರ್ರಿಸ್ವಾಮಿ ಸಹ ಸಂಶೋಧಕರು, ಮಹಿಳಾ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ ಇವರು ಅಂಬೇಡ್ಕರ್‍ರವರ ಮೌಲ್ಯಗಳ ಕುರಿತು ವಿವರಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ.ವೆಂಕಟೇಶ್, ವಿದ್ಯಾ ವಿಷಯತ್ ಪರಿಷತ್ ಸದ್ಯಸರು ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಅಂಬೇಡ್ಕರ್‍ರವರ ತತ್ವಾದರ್ಶಗಳನ್ನು ರೂಢಿಸಿಸೊಳ್ಳಿ ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಕುಲಸಚಿವರಾದ ಪ್ರೊ. ಎಸ್. ಎ. ಪಾಟೀಲ್ ಹಾಗೂ ಕುಲಸಚಿವರು (ಮೌಲ್ಯಮಾಪನ) ಪ್ರೊ. ಹೊನ್ನು ಸಿದ್ಧಾರ್ಥರವರು ಮಾತನಾಡಿದರು. ಡಾ. ಮೋಹನ್‍ದಾಸ್, ಪ್ರೊ. ಭೀಮನಗೌಡ, ಪ್ರೊ. ರಮೇಶ್ ಓಲೇಕಾರ್ ಮುಂತಾದವರು ಉಪಸ್ಥಿತರಿದ್ದರು. ಡಾ ಕುಮಾರ್ ಸ್ವಾಗತಿಸಿದರು, ರಾಮಾಂಜನೇಯ ವಂದಿಸಿದರು. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770674
Today
Yesterday
This Week
Last Week
This Month
Last Month
All days
5846
14978
20824
3647859
196901
189062
3770674
Your IP: 54.221.76.68
2017-12-18 08:39