Breaking News

ಪ್ರಮುಖ ವೃತ್ತಗಳಲ್ಲಿ ಶೌಚಾಲಯ ಮತ್ತು ಮೂತ್ರಾಲಯ ನಿರ್ಮಿಸುವಂತೆ ಒತ್ತಾಯಿಸಿ ಧರಣಿ

Written by 
Published: 21 November 2017
30 times Last modified on Wednesday, 22 November 2017 07:03

ಕೆ.ಎನ್.ಪಿ.ವಾರ್ತೆ,ಗಂಗಾವತಿ,ನ.22;

ನಗರದ ಪ್ರಮುಖ ವೃತ್ತಗಳಲ್ಲಿ ಶೌಚಾಲಯಗಳು ಮತ್ತು ಮೂತ್ರಾಲಯಗಳನ್ನು ನಗರಸಭೆಯಿಂದ ನಿರ್ಮಿಸಲು ಒತ್ತಾಯಿಸಿ ಧರಣಿ ನಡೆಸಲಾಯಿತು.

ನಗರದ ಆಮ್ ಆದ್ಮಿ ಪಕ್ಷ ಹಾಗೂ ಜನ್ಮಭೂಮಿ ರಕ್ಷಣಾ ಪಡೆಯವರು, ನಗರದ ಪ್ರಮುಖ ವೃತ್ತಗಳಲ್ಲಿ ಶೌಚಾಲಯಗಳು ಮತ್ತು ಮೂತ್ರಾಲಯಗಳನ್ನು ನಿರ್ಮಿಸಲು ಒತ್ತಾಯಿಸಿ ಜುಲಾಯಿ ನಗರ ವೃತ್ತದಲ್ಲಿ ನಿನ್ನೆ ಧರಣಿ ನಡೆಸಿದರು.

ಗಂಗಾವತಿ ನಗರಸಭೆಯು 1968ರಲ್ಲಿ ಸ್ಥಾಪನೆಯಾಗಿ ಸರಿಸುಮಾರು ಇಲ್ಲಿಗೆ ಐವತ್ತು ವರ್ಷಗಳು ಕಳೆದರೂ ಕೂಡ ಇಲ್ಲಿಯವರೆಗೂ ಸರ್ಕಲ್ ಗಳಲ್ಲಿ ಮೂಲಭೂತ ಸೌಕರ್ಯಗಳಾದ ಮೂತ್ರಾಲಯ ಮತ್ತು ಶೌಚಾಲಯಗಳ ವ್ಯವಸ್ಥೆ ಇಲ್ಲ. ಇದರಿಂದಾಗಿ ಸಾರ್ವಜನಿಕರು ಮತ್ತು ವಿವಿಧ ಊರುಗಳಿಂದ ಬಂದು ಇಳಿಯುವ ಪ್ರಯಾಣಿಕರು ಅದರಲ್ಲಿ ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳು, ಹಿರಿಯ ನಾಗರಿಕರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ದೂರದೂರದ ಊರುಗಳಿಂದ ಪ್ರಯಾಣ ಮಾಡಿ ಬಂದು ವಿವಿಧ ವೃತ್ತಗಳ ಬಸ್ ಸ್ಟಾಪ್ ನಲ್ಲಿ ಇಳಿಯುವ ಪ್ರಯಾಣಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ನಗರದಲ್ಲಿನ ಪ್ರಮುಖ ವೃತ್ತಗಳಾದ ಜೂಲಾಯಿನಗರ, ರಾಣಾ ಪ್ರತಾಪ ಸರ್ಕಲ್ˌ ಇಸ್ಲಾಂಪೂರˌಗಾಂಧಿ ಚೌಕ್ˌ ಕೋರ್ಟ್ ಸರ್ಕಲ್ˌ ಕನಕದಾಸ ಸರ್ಕಲ್ˌ ನೀಲಕಂಠೇಶ್ವರ ಸರ್ಕಲ್ ಮತ್ತು ಇತರೆ ಜನನಿಬೀಡ ಸ್ಥಳಗಳಲ್ಲಿ ಮೂತ್ರಾಲಯ ಮತ್ತು ಶೌಚಾಲಯ ಇಲ್ಲದೆ ಸಾರ್ವಜನಿಕರು ಮತ್ತು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಆದ್ದರಿಂದ ಎಲ್ಲಾ ಸರ್ಕಲ್ ಮತ್ತು ಇತರೆ ಜನನಿಬೀಡ ಸ್ಥಳಗಳಲ್ಲಿ ಮೂತ್ರಾಲಯ ಮತ್ತು ಶೌಚಾಲಯ ಕಟ್ಟಿಸಬೇಕೆಂದು ಒತ್ತಾಯಿಸಿ, ಆಮ್ ಆದ್ಮಿ ಪಾರ್ಟಿ ಮತ್ತು ಜನ್ಮಭೂಮಿ ರಕ್ಷಣಾ ಪಡೆ ಕಾರ್ಯಕರ್ತರು ಜಂಟಿಯಾಗಿ ನಗರಸಭೆಗೆ ಮನವಿ ಸಲ್ಲಿಸಿದರು.

shivakumar h

There is will There is way 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770713
Today
Yesterday
This Week
Last Week
This Month
Last Month
All days
5885
14978
20863
3647859
196940
189062
3770713
Your IP: 54.221.76.68
2017-12-18 08:43