Breaking News

ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯಿಸಿ ಸವಿತಾ ಸಮಾಜದಿಂದ ಧರಣಿ

Written by 
Published: 22 November 2017
38 times Last modified on Wednesday, 22 November 2017 07:36

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ನ.22;

ವರದಿ : ಟಿ.ಗಣೇಶ್

ರಾಜ್ಯ ಸರ್ಕಾರವು ಸವಿತಾ ಸಮಾಜಕ್ಕೆ ಪ್ರತ್ಯೇಕ ಅಬಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಒತ್ತಾಯಿಸಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಧರಣಿ ನಡೆಸಲಾಯಿತು.

ನಿನ್ನೆ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರಿನಲ್ಲಿ ಬೃಹತ್ ಗಾತ್ರದ ಪೆಂಡಲ್‍ಹಾಕಿ, ಸವಿತಾ ಸಮಾಜದ ನೂರಾರು ಕಾರ್ಯಕರ್ತರು ಮತ್ತು ಮುಖಂಡರು ಧರಣಿ ನಡೆಸಿದರು. ಸಮಾಜದ ಮಹರ್ಷಿ ಜಯಂತಿಯನ್ನು ಸರಕಾರದಿಂದಲೇ ಆಚರಿಸಬೇಕು. ಸಮುದಾಯ ಭವನಕ್ಕೆ ಧನಸಹಾಯ ನೀಡಬೇಕು. ಹಜಾಮ ಎಂದು ಜಾತಿ ಪ್ರಮಾಣ ಪತ್ರ ನೀಡುತ್ತಿದ್ದು ಅದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ನಮ್ಮ ಸಮಾಜದವರು 100ಕ್ಕೆ 90ರಷ್ಟು ಭಾಗ ಜನರು ಕ್ಷೌರಿಕವೃತ್ತಿ ಮಾಡುತ್ತಿದ್ದು. ಇದರ ಜೊತೆಗೆ ವಾದ್ಯ, ಬ್ಯಾಂಡ್, ನಾಟಿವೈಧ್ಯ ಪದ್ದತಿ ಮಾಡುತ್ತಾ ಬಂದಿದ್ದಾರೆ. ನಮ್ಮ ಸಮಾಜದವರಿಗೆ ಈ ಕಸುಬು ಅಲ್ಲದೇ ಬೇರೆ ಕಸುಬು ಮಾಡುವುದು ಗೊತ್ತಿಲ್ಲ. ಸರಕಾರವು ಅಯವ್ಯಯದಲ್ಲಿ ಸವಿತಾ ಸಮಾಜಕ್ಕೆ 15ಕೋಟಿ ರೂಗಳನ್ನು ನಿಗಧಿಪಡಿಸಿ, ಅದರಲ್ಲಿ 5ಕೋಟಿ ರೂ.ಗಳನ್ನು ಗಂಗಾ ಕಲ್ಯಾಣಯೋಜನೆಗೆ ಉಪಯೋಗಿಸಿಕೊಳ್ಳಲು ಸೂಚನೆ ನೀಡಿತ್ತು.

ಆದರೆ ರಾಜ್ಯಾದ್ಯಂತ ಸವಿತಾ ಸಮಾಜವು 15 ಲಕ್ಷ ಜನಾಂಗವನ್ನು ಹೊಂದಿದೆ. ಮುಂದಿನ ದಿನಗಳಲ್ಲಿ 25ಕೋಟಿ ರೂ ನಿಗಧಿಪಡಿಸಿ ಮತ್ತು ನಿಗಮ ಮಂಡಳಿಗಳನ್ನು ಸ್ಥಾಪಿಸಿ, ಅದಕ್ಕಾಗಿ 100ಕೋಟಿ ಮೀಸಲಿಡಬೇಕೆಂದು ಮನವಿ ಮಾಡಿದರು. ಮತ್ತು ನಮ್ಮ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿದರು.

ಬಳ್ಳಾರಿ ತಾಲೂಕಿನಲ್ಲಿ ಸಮುದಾಯ ಭವನಕ್ಕೆ ಸ್ಥಳ ಹೊಂದಿದ್ದು, ಧನಸಹಾಯ ಮಾಡಬೇಕೆಂದು ಕೋರಿದರು. ಮುಖ್ಯಮಂತ್ರಿಗಳಿಗೆ ಪತ್ರದ ಮುಖಾಂತರ ಮನವಿ ಮಾಡಿದರು. ಈ ಸಂದರ್ಭದಲ್ಲಿ ಹೆಚ್.ತಿಪ್ಪಣ್ಣ, ಆರ್.ಶೇಖಣ್ಣ, ಜಿ.ನಾಗೇಂದ್ರ, ಜಿ.ಶ್ರೀಧರ್, ಸಣ್ಣತಿಮ್ಮಪ್ಪ, ನವೀನ್ ಪಲಾ.ಬಿ.ಜಾನಕಿರಾಮ್, ಬಿ.ವೆಂಕಟೇಶಲು, ಎಸ್,ರಾಕೇಶ್, ಎಂ.ರಾಘವೇಂದ್ರ ಇತರ ನೂರಾರು ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770845
Today
Yesterday
This Week
Last Week
This Month
Last Month
All days
6017
14978
20995
3647859
197072
189062
3770845
Your IP: 54.221.76.68
2017-12-18 08:54