Breaking News

ಪುರಸಭೆಯ ನಡೆಯನ್ನು ಖಂಡಿಸಿ ಉಪವಾಸ ಸತ್ಯಾಗ್ರಹ

Written by 
Published: 22 November 2017
29 times Last modified on Wednesday, 22 November 2017 07:51

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ನ.22;

ವರದಿ : ಟಿ.ಗಣೇಶ್

ಕಂಪ್ಲಿ ಶಿಬಿರದಿನ್ನಿ ಬಲಭಾಗದ ನಿವೇಶನ ಹಂಚಲು ವಿಳಂಭ ಮಾಡುತ್ತಿರುವ ಪುರಸಭೆಯ ನಡೆಯನ್ನು ಖಂಡಿಸಿ ಗ್ರಾಮಸ್ಥರು ಮತ್ತು ಕರ್ನಾಟಕ ಯುವ ಜಾಗೃತಿ ವೇದಿಕೆ ವತಿಯಿಂದ ಅಮರಣಾಂತರ ಉಪವಾಸ ಸತ್ಯಾಗ್ರಹ ನಡೆಸಿದರು.

ನಿನ್ನೆ ನಗರದ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಕಂಪ್ಲಿಯ ಶಿಭಿರದಿನ್ನಿ ಬಲಭಾಗದ ನಿವೇಶನಗಳನ್ನು ಹಂಚುವಲ್ಲಿ ಪುರಸಭೆ ಅಧಿಕಾರಿಗಳು ವಿನಾಕಾರಣ ವಿಳಂಭ ಮಾಡುತ್ತಿದ್ದಾರೆ. ಹೊಸಪೇಟೆ ತಾಲೂಕಿನ ಕಂಪ್ಲಿ ಪುರಸಭೆಯು 1988ರಲ್ಲಿ 634 ಜನರಿಂದ 350 ರೂಗಳಂತೆ ಹಣ ಕಟ್ಟಿಸಿಕೊಂಡು, ನಿವೇಶನಗಳನ್ನು ನೀಡುವುದಾಗಿ ಹೇಳಿ, ಅಲ್ಲಿನ ಬಡಜನರಿಗೆ ಅಂದಿನಿಂದ ಇಂದಿನವರೆಗೂ ನಿವೇಶನ ಹಂಚದೇ ವಂಚಿಸುತ್ತಾ ಬಂದಿರುವ ಕಂಪ್ಲಿ ಪುರಸಭೆಯ ನಡೆಯನ್ನು ಕರ್ನಾಟಕ ಯುವ ಜಾಗೃತಿ ವೇದಿಕೆಯು ತೀವ್ರವಾಗಿ ಖಂಡಿಸುತ್ತದೆ.

ಅಂದಿನಿಂದ ಇಂದಿನವರೆಗೆ ಸುಮಾರು 25ವರ್ಷಗಳಿಂದ ಹೋರಾಟ ಮಾಡುತ್ತಾ ಬಂದಿರುವ ಅಲ್ಲಿನ ನಿವಾಸಿಗಳು. ಕಳೆದ 2ವರ್ಷಗಳಿಂದ ಕರ್ನಾಟಕ ಯುವ ಜಾಗೃತಿ ವೇದಿಕೆ ನೇತೃತ್ವದಲ್ಲಿ ಹೋರಾಟಗಳನ್ನು ತೀವ್ರಗೊಳಿಸಿ, ಕಂಪ್ಲಿಯಲ್ಲಿ ಅನೇಕ ಭಾರಿ ಪುರಸಭೆಯ ಮುಂದೆ ಧರಣಿ ಸತ್ಯಾಗ್ರಹ ನಡಸಿ, ಮನವಿಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ.

ಕಂಪ್ಲಿ ಪುರಸಭೆ ಬಡಜನರೊಂದಿಗೆ ಚಲ್ಲಾಟವಾಡುತ್ತಿದೆ. ಇಲ್ಲಿ ದಪ್ಪ ಚರ್ಮದ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. 2ದಶಕದ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವವರೆಗೆ ಅಮರಣಾಂತರ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದ್ದಾರೆ. ಈ ಸಂಧರ್ಭದಲ್ಲಿ ಯಾಲ್ಟಿವಲಿಭಾಷ, ರಾಣಿತೋಟ ವಿರೇಶ್, ವಿ.ಗಾದಿಲಿಂಗಪ್ಪ, ಅಬ್ದುಲ್ ರಜಾಕ್, ವಿರುಪಾಕ್ಷಿ, ಪದ್ಮಾ.ಬಿ.ಅನುರಾಧಾ, ಹನುಮಂತ, ಭಂಡಯ್ಯ,ಹನುಮಂತ, ರಹೆಮಾನ್, ಮಹ್ಮದ್ ಗೌಸ್, ಮತ್ತು ಇತರ ಕಂಪ್ಲಿ ಶಿಬಿರದಿನ್ನಿ ಬಲಭಾಗದ ನಿವೇಶನಕ್ಕಾಗಿ ಕಂಪ್ಲಿಯಿಂದ ಆಗಮಿಸಿದ ನೂರಾರು ಬಡಜನರು ಹಾಜರಿದ್ದರು.


Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770716
Today
Yesterday
This Week
Last Week
This Month
Last Month
All days
5888
14978
20866
3647859
196943
189062
3770716
Your IP: 54.221.76.68
2017-12-18 08:44