Breaking News

ರೈತರಿಗೆ ಸಹಾಯ ಹಸ್ತ ಕಾರ್ಯಕ್ರಮ ಮತ್ತು ಜಿಲ್ಲಾ ಘಟಕ ಉದ್ಘಾಟನೆ

Written by 
Published: 21 November 2017
33 times Last modified on Tuesday, 21 November 2017 11:44

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ನ.21;

ವರದಿ : ಬಸವರಾಜ್ ಪೂಜಾರ್

ಜಿಲ್ಲೆಯ ಕರ್ನಾಟಕ ಯುವ ರಕ್ಷಣಾ ವೇದಿಕೆಯಿಂದ ರೈತರಿಗೆ ಸಹಾಯ ಹಸ್ತ  ಹಾಗೂ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಮೊದಲು ಲಕ್ಷ್ಮಿ ಫ್ಲೋರ್ ಮಿಲ್ ಹತ್ತಿರ ಇರುವ ಜಿಲ್ಲಾ ಘಟಕದ ಬೋರ್ಡ್ ನ್ನು ಎಸ್.ಎಸ್.ಗಣೇಶ್ ಉದ್ಘಾಟನೆ ಮಾಡಿದರು. ನಂತರ ಲಕ್ಷ್ಮಿ ಫ್ಲೋರ್ ಮಿಲ್ ನಿಂದ ವಿವಿಧ ವಾದ್ಯಗಳ ಮೂಲಕ ಮೆರವಣಿಗೆಯು ಶಿವಯೋಗಿ ಮಂದಿರಕ್ಕೆ ಬಂದು ತಲುಪಿತು. ಶಿವಯೋಗಿ ಮಂದಿರದಲ್ಲಿ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾಧಿಕಾರಿಗಳಾದ ಡಿಎಸ್ ರಮೇಶ್ ಹಾಗೂ ಬಸವಪ್ರಭು ಸ್ವಾಮೀಜಿಗಳು ಉದ್ಘಾಟನೆ ಮಾಡಿದರು. 

ಪ್ರತಿಯೊಂದು ಕರ್ನಾಟಕ ಸಂಘಟನೆಯು ವಿಶೇಷವಾಗಿ ಹಬ್ಬವನ್ನು ಆಚರಿಸುತ್ತಾರೆ. ಆದರೆ ಅದೇ ಸಮಯದಲ್ಲಿ ರೈತರ ಬಗ್ಗೆ  ಕಾಳಜಿಯನ್ನು ವಹಿಸಿ, ಅವರ ಸಮಸ್ಯೆಗಳ ಕಡೆ ಗಮನ ಹರಿಸಿ, ಜಿಲ್ಲಾ ಘಟಕವು ಸಂಕಷ್ಟದಲ್ಲಿರುವ ರೈತರನ್ನು ಗುರುತಿಸಿ, ತೀರಾ ಕಷ್ಟದಲ್ಲಿರುವ ಇಬ್ಬರು ರೈತರಾದ ಬೆಳ್ಳೂಡಿಯ ಗೌರಮ್ಮ ಹಾಗೂ ಹಾಲಿವಾಣದ ಸುಮಿತ್ರ ಎನ್ನುವ ರೈತ ಕುಟುoಬಕ್ಕೆ ತಲಾ ಹತ್ತು ಸಾವಿರದ ಚೆಕ್ಕನ್ನು ಮಾನ್ಯ  ಜಿಲ್ಲಾಧಿಕಾರಿಗಳು ವಿತರಿಸಿದರು. ಇನ್ನೂ ಕೆಲವು ರೈತರು ವೇದಿಕೆಗೆ ಬರದೇ ಇರುವ ಕಾರಣ ಅವರ ಮನೆಗೆ ಚೆಕ್ ವಿತರಿಸುವ ಕಾರ್ಯವನ್ನು ಸಂಘಟನೆಯಿಂದ ಮಾಡಲಾಗುತ್ತದೆ.

ಈ ಸಂದರ್ಭದಲ್ಲಿ ಸಂಘಟನೆಯ ಹಲವಾರು ಜನರನ್ನು ಸನ್ಮಾನಿಸಲಾಯಿತು. ಸಂಘಟನೆಯು ಅನೇಕ ಗ್ರಾಮಗಳಲ್ಲಿ  ಸ್ವಚ್ಛಗೊಳಿಸುವುದು, ಶೌಚಾಲಯ ನಿರ್ಮಿಸಲು ಜಾಗೃತಿ ಮೂಡಿಸುವುದು ಹಾಗೂ ಹೊಸ ಯೋಜನೆಯಾಗಿ ಅಂಗವಿಕಲರು, ವೃದ್ಧರು, ಹಾಗೂ ವಿಧವೆಯರಿಗೆ ಸರ್ಕಾರಿ ಸೌಲಭ್ಯವನ್ನು ಕೊಡಿಸುವಲ್ಲಿ ಹೋರಾಡುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಡಿಎಸ್ ರಮೇಶ್, ಬಸವಪ್ರಭು ಸ್ವಾಮೀಜಿಗಳು ವಿರಕ್ತಮಠ,  ಕರ್ನಾಟಕ ಯುವ ರಕ್ಷಣಾ ವೇದಿಕೆ ಅಧ್ಯಕ್ಷರಾದ ಸುನೀಲ್,  ಜಿಲ್ಲಾಧ್ಯಕ್ಷರಾದ ಶಿವಕುಮಾರ್,  ರಾಜ್ಕುಮಾರ್ ಸಂಘದ ರಂಗದ ಕೆಜಿ ಶಿವಣ್ಣ ಹಾಗೂ ಕನ್ನಡ ಚಳವಳಿ ಹೋರಾಟಗಾರ ಟಿ.ಶಿವಣ್ಣ ಹಾಗೂ ಊರಿನ ಎಲ್ಲ ಪದಾಧಿಕಾರಿಗಳು ಭಾಗವಹಿಸಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

3770777
Today
Yesterday
This Week
Last Week
This Month
Last Month
All days
5949
14978
20927
3647859
197004
189062
3770777
Your IP: 54.221.76.68
2017-12-18 08:48