Breaking News

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ : ಬಿ.ಎಸ್.ವೈ.

Written by 
Published: 06 January 2018
45 times Last modified on Saturday, 06 January 2018 07:57

ಕೆ.ಎನ್.ಪಿ.ವಾರ್ತೆ,ಬಳ್ಳಾರಿ,ಜ.06;

ವರದಿ : ಟಿ.ಗಣೇಶ್

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ  ಸಂಪೂರ್ಣ ಹದಗೆಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ನಿರಂತರವಾಗಿ, ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರ, ಹಿಂದುಗಳ ಹತ್ಯೆಗಳಾಗುತ್ತಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ, ಇದುವರೆಗೆ 24ಹಿಂದುಗಳ ಹತ್ಯೆ, ಮತ್ತು ಹೆಣ್ಣಿನ ಮೇಲೆ ನಿರಂತರವಾಗಿ ಅತ್ಯಾಚಾರಗಳು ನಡೆಯುತ್ತಿವೆ. 3215 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು.ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.

ನಿನ್ನೆ ನಗರದ ಖಾಸಗಿ ಹೊಟೆಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಕರ್ನಾಟಕ ನಿರ್ಮಾಣಕ್ಕಾಗಿ ನಾವು ಪರಿವರ್ತನೆ ಯಾತ್ರೆ ಮಾಡಿಕೊಂಡು 154 ಕ್ಷೇತ್ರಗಳನ್ನು ಮುಗಿಸಿ, ಇಂದು 155ನೇ ಕ್ಷೇತ್ರಕ್ಕೆ ಬಂದು ತಲುಪಿದ್ದೇವೆ. ರಾಜ್ಯಾದ್ಯಂತ ಜನ ಬೆಂಬಲ ನಮ್ಮ ಬಿಜೆಪಿ ಪಕ್ಷಕ್ಕೆ ಸಿಗುತ್ತಿದೆ ಎಂದರು. ಜ.28ರಂದು ದೇಶದ ಪ್ರಧಾನಿಗಳಿಂದ ಸಮಾರೋಪ ಸಮಾರಂಭ ನಡೆಯಲಿದೆ. ಜ.10ರಂದು ಚಿತ್ರದುರ್ಗಕ್ಕೆ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಬರಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಅತ್ಯಧಿಕ ಅಪರಾಧ ಪ್ರಕರಣಗಳು ನಡೆಯುತ್ತಿವೆ. ಈ ಬಾರಿ ರಾಜ್ಯದಲ್ಲಿ 45557 ಅಪರಾಧ ಪ್ರಕರಣಗಳು ದಾಖಲಾಗಿವೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಬೆಂಗಳೂರು ಗಾರ್ಡನ್ ಸಿಟಿ ಎಂದು ಹೆಸರು ಮಾಡಿತ್ತು. ಆದರೆ, ಈಗ ಆ ಹೆಸರು ಮಾಯವಾಗಿ ರೇಪ್ ಸಿಟಿಯಾಗಿದೆ ಎಂದು ಹೇಳಿದರು. ಲೋಕಾಯುಕ್ತಕ್ಕೆ ಇರುವ ಅಧಿಕಾರವನ್ನು ಕಿತ್ತು ಹಾಕಿ, ಎಸಿಬಿಯನ್ನು ಅವರ ತಾಳಕ್ಕೆ ತಕ್ಕಂತೆ ಆಡಿಸುತ್ತಿದ್ದಾರೆ.

ಡಿ.ವೈ.ಎಸ್.ಪಿ.ಗಣಪತಿ ಹತ್ಯೆ, ಕಲಬುರ್ಗಿ ಹತ್ಯೆ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳು ಇದುವರೆಗೂ ಪ್ರಕರಣಗಳಾಗಿಯೇ ಉಳಿದಿದ್ದು, ಹಂತಕರನ್ನು ಪತ್ತೆಹಚ್ಚಿ, ಬಂಧಿಸುವಲ್ಲಿ ಮತ್ತು ಇನ್ನು ಹಲವಾರು ಕ್ಷೇತ್ರಗಳಲ್ಲಿ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ ಎಂದರು. ಈ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್, ಮಾಜಿ ಶಾಸಕ ಸೋಮಶೇಖರರೆಡ್ಡಿ, ಕಂಪ್ಲಿ ಶಾಸಕ ಸುರೇಶ್ ಬಾಬು ಮತ್ತು ಇತರ ಬಿಜೆಪಿಯ ಪ್ರಮುಖ ಮುಖಂಡರು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250442
Today
Yesterday
This Week
Last Week
This Month
Last Month
All days
9849
16742
76170
4062809
281537
395132
4250442
Your IP: 54.234.190.237
2018-01-18 15:55