Breaking News

ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರದ ದಿವಾಳಿಯಾಗಿದೆ : ಯಡಿಯೂರಪ್ಪ

Written by 
Published: 04 January 2018
87 times Last modified on Thursday, 04 January 2018 08:28

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಜ.04;

ವರದಿ : ಮಹಮ್ಮದ್ ಅಬ್ದುಲ್ ರಖೀಬ್

ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರದ ದಿವಾಳಿಯಾಗಿದೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ಜಗಳೂರು ಪಟ್ಟಣದಲ್ಲಿ ಇಂದು ಬಿಜೆಪಿ ಪರಿವರ್ತನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮುಖ್ಯಬೀದಿಗಳಲ್ಲಿ ಮೆರವಣಿಗೆ ಮೂಲಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 

ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರದ ದಿವಾಳಿಯಾಗಿದೆ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣವಿಲ್ಲಾ. ಬೆಂಗಳೂರು ಮಹಾನಗರ ಪಾಲಿಕೆ ಕಾರ್ನರ್ ಸೈಟ್ ಒತ್ತೆಯಿಟ್ಟು 975 ಕೋಟಿ ಪಡೆದ ಸಾಲ ಮತ್ತು ಮೈಸೂರು ಮಿನರಲ್ಸ್ ಲಿಮಿಟೆಡ್ ಬ್ಯಾಂಕ್ ನಲ್ಲಿ ಡಿಪಾಜಿಟ್ ಇಟ್ಟತಂಹ 1400 ಕೋಟಿ ರೂಪಾಯಿಗಳು, ಇಷ್ಟೆಲ್ಲ ಹಣ ಎಲ್ಲಿಗೆ ಹೋತು ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದರು.

ಇನ್ನೂ ಅಪ್ಪರ್ ಭದ್ರ ಯೋಜನೆಗೆ ನನ್ನ ಅವಧಿಯಲ್ಲಿ 18500 ಸಾವಿರ ಎಕರೆ ಪ್ರದೇಶದಲ್ಲಿ ನೀರಾವರಿ ಯೋಜನೆ ರೂಪಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ 5 ವರ್ಷದ ಅವಧಿ ಮುಗಿತಾ ಬಂದರೂ, ತಾಲ್ಲೂಕಿನ ರೈತರಿಗೆ ನೀರಿನ ಭಾಗ್ಯ ಕಲ್ಪಿಸದೆ, ಇನ್ನೂ ಸರ್ವೆ ಕಾರ್ಯ ನಡೆಯುತ್ತಿದೆ ಎಂದು ಸುಳ್ಳು ಭರವಸೆ ನೀಡುತ್ತಿ ದ್ದಾರೆ.

ನಮ್ಮ ಸರ್ಕಾರದ ಅವಧಿಯಲ್ಲಿ, ಕ್ಷೇತ್ರದಲ್ಲಿ ಬಡವರಿಗೆ 13 ಸಾವಿರ ಮನೆಗಳನ್ನು ನೀಡಲಾಗಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರದವರು 1.86 ಸಾವಿರ ಕೋಟಿ ರೂ ಬಡ್ಜೆಟ್, 2 ಲಕ್ಷ ಕೋಟಿ ಕೇಂದ್ರ 14ನೇ ಹಣಕಾಸಿನ ಆಯೋಗದ ಹಣ, 2 ಲಕ್ಷ ಕೋಟಿ ಸಾಲಾಮನ್ನಾದ ಹಣ ಲೂಟಿ, ದರೋಡೆ ಮಾಡಿದ್ದಾರೆ. 

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ 65 ಕೇಸ್ ಗಳು ಇವೆ. ಆದರೆ ಎಫ್.ಐ.ಆರ್ ಮಾಡಿಸದೆ ಎ.ಸಿ.ಬಿ ಲೋಕಾಯುಕ್ತರಿಂದ ಮುಚ್ಚುವಂತ ಪ್ರಯತ್ನ ಮಾಡುತ್ತಾರೆ. ಹೆತ್ತತಾಯಿ ತನ್ನ ಮಗುವಿಗೆ ವಿಷದಹಾಲು ಕುಡಿಸಿದರೆ ಏನಾಗುತ್ತದೆ. ಜವಬ್ದಾರಿ ಇರುವ ಮುಖ್ಯಮಂತ್ರಿ ಕಮಿಷನ್ ಏಜೆಂಟ್ ಅದರೆ. ಅಧಿಕಾರಿಗಳು ಮತ್ತು ಶಾಸಕರು ಭ್ರಷ್ಟಾಚಾರ, ಕೊಲೆ, ಸುಲಿಗೆಗಳನ್ನು ನಡೆಸುತ್ತಾರೆ ಎಂದು ಹೇಳಿದರು.

ಮುಂಬರುವ ದಿನಗಳಲ್ಲಿ ಬೇರೆ ಕೆಲಸ ಬದಿಗೊತ್ತಿ, 1ಲಕ್ಷ ಕೋಟಿ ರೂ ವೆಚ್ಚದಲ್ಲಿ, ರೈತರಿಗೆ ನೀರಾವರಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದು, ಎಲ್ಲಾ ಕೆರೆ ತುಂಬಿಸಿ, ಅಭಿವೃದ್ಧಿ ಮಾಡುತ್ತೇನೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊಡುತ್ತೇನೆ ಇಲ್ಲವಾದರೆ ನನ್ನ ಹೆಸರು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಹೇಳಿದರು.

4 ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಹಣ, ಹೆಂಡ, ಅಧಿಕಾರ ಬಲ, ಜಾತಿಯಲ್ಲಿ ವಿಷ ಬಿತ್ತಿ, ಚುನಾವಣೆ ಗೆಲ್ಲುವ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ರಾಜ್ಯದಲ್ಲಿ 150 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿಯಾಗುತ್ತದೆ. ಜಗಳೂರು ತಾಲ್ಲೂಕಿನಲ್ಲಿ ಎಸ್.ವಿ.ರಾಮಚಂದ್ರಪ್ಪ 20 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲ್ಲುತ್ತಾರೆ ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ  ಕಾರ್ಯದರ್ಶಿ ಮುರುಳಿಧರ್, ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಎಸ್. ಎ. ರವೀಂದ್ರ ನಾಥ್, ರೇಣುಕಾಚಾರ್ಯ, ಚಿತ್ರದುರ್ಗದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಮಾಜಿ ಶಾಸಕರಾದ ಟಿ.ಗುರುಸಿದ್ದನಗೌಡ, ಮಾಡಾಳು ವಿರುಪಾಕ್ಷಪ್ಪ, ಬಸವರಾಜ್ ನಾಯ್ಕ್, ಜಿಲಾಧ್ಯಕ್ಷ ಯಶವಂತ ರಾವ್ ಜಾದವ್, ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸದಸ್ಯರು, ಬಿಜೆಪಿ ಪದಾಧಿಕಾರಿಗಳು, ಮತ್ತು  ಮುಖಂಡರು ಹಾಜರಿದ್ದರು.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4274392
Today
Yesterday
This Week
Last Week
This Month
Last Month
All days
827
15484
100120
4062809
305487
395132
4274392
Your IP: 54.167.126.106
2018-01-20 01:18