Breaking News

ರಸ್ತೆ ಕಾಮಗಾರಿಯ ಗುದ್ದಲಿ ಪೂಜೆ

Written by 
Published: 18 December 2017
37 times Last modified on Monday, 18 December 2017 06:58

ಕೆ.ಎನ್.ಪಿ.ವಾರ್ತೆ,ದಾವಣಗೆರೆ,ಡಿ.18;

ವರದಿ : ಬಸವರಾಜ್ ಪೂಜಾರ್

ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯು ಇಂದು ನೆರವೇರಿತು.

ಹರಪನಹಳ್ಳಿ ತಾಲ್ಲೂಕು ಉಚ್ಚಂಗಿದುರ್ಗದಲ್ಲಿರುವ ಸನಾವುಲ್ಲಾ ಅವರ ಮನೆಯಿಂದ ದಾವಣಗೆರೆಗೆ ಹೋಗುವ ರಸ್ತೆಯವರೆಗೂ ಸಿಮೆಂಟ್ ರಸ್ತೆ ಮಾಡುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಈ ಕಾಮಗಾರಿಗೆ ಮಾನ್ಯ ಶಾಸಕರಾದ ಎಚ್.ಪಿ.ರಾಜೇಶ್ ಅವರು ಇಂದು ಗುದ್ದಲಿ ಪೂಜೆಯನ್ನು ನೆರವೇರಿಸಿದರು. ಪೂಜೆ ಬಳಿಕ ಜನರ ಸಮಸ್ಯೆಗಳನ್ನು ಆಲಿಸಿ, ಮಾತನಾಡಿದ ಅವರು, ಇಲ್ಲಿ ಇರುವ ಎಲ್ಲಾ ಮುಸ್ಲಿಂ ಮಸೀದಿಗಳಿಗೆ ಅಲ್ಪಸಂಖ್ಯಾತರ ಇಲಾಖೆಯಿಂದ 5ಮಸೀದಿಗಳಿಗೂ ತಲಾ ಮೂರು ಲಕ್ಷ ರೂಪಾಯಿ ಕೊಡುವ ಭರವಸೆಯನ್ನು ನೀಡಿದರು. ಅಲ್ಲದೆ ಉಪಸ್ಥಿತರಿದ್ದ ಹಲವಾರು ಜನರು, ಹಲವಾರು ವರ್ಷಗಳಿಂದ ಒಡೆದ ಜಮೀನಿಗೆ ಹಕ್ಕುಪತ್ರ ನೀಡಬೇಕೆಂದು ಮನವಿ ಮಾಡಿದಾಗ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಎಚ್.ಪಿ.ರಾಜೇಶ್, ಅರಸೀಕೆರೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಮಂಜುನಾಥ್, ಅರಸೀಕೆರೆ ವಿಭಾಗದ ಎಸ್ಟಿ ಮೋರ್ಚಾದ ಅಧ್ಯಕ್ಷರಾದ ತಳವಾರ ಮಂಜಪ್ಪ ಹಾಗೂ ಕಾಂಗ್ರೆಸ್ ಮುಖಂಡರಾದ ಅಂಜಿನಪ್ಪ, ಶಿವಕುಮಾರಸ್ವಾಮಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುರುಡಿ ಗಂಗಮ್ಮ, ಉಪಾದ್ಯಕ್ಷರಾದ ಶಿವಕುಮಾರ್ ಉಪಸ್ಥಿತರಿದ್ದರು.

shivakumar h

There is will There is way 

 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250385
Today
Yesterday
This Week
Last Week
This Month
Last Month
All days
9792
16742
76113
4062809
281480
395132
4250385
Your IP: 54.234.190.237
2018-01-18 15:52