Breaking News

ರವಿ ಬೆಳಗೆರೆ ಕೆಐಡಿಗೆ ದಾಖಲು

Written by 
Published: 13 December 2017
50 times Last modified on Wednesday, 13 December 2017 11:00

ಕೆ. ಎನ್.ಪಿ.ವಾರ್ತೆ,ಬೆಂಗಳೂರು, ಡಿ.13;

ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ರವಿ ಬೆಳಗೆರೆ ಅವರನ್ನು ಕೆಐಡಿ ಗೆ ದಾಖಲಿಸಲಾಗಿದೆ.

ನ್ಯಾಯಾಂಗ ಬಂಧನದಲ್ಲಿರುವ ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದೆ. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವ ರವಿ ಬೆಳಗೆರೆ ತೀವ್ರ ರಕ್ತದೊತ್ತಡದಿಂದ ಅಸ್ವಸ್ಥರಾದ ಕಾರಣ ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆಯ ಆವರಣದಲ್ಲಿರುವ ಕರ್ನಾಟಕ ಮಧುಮೇಹ ಸಂಸ್ಥೆ (ಕೆಐಡಿ)ಗೆ ದಾಖಲಿಸಲಾಗಿದೆ. ರವಿ ಬೆಳಗೆರೆ ಜೊತೆ ಪುತ್ರಿ ಚೇತನಾ ಮತ್ತು ಪುತ್ರ ಕರ್ಣ ಇದ್ದಾರೆ. ನಿನ್ನೆ ರಾತ್ರಿ ಕೂಡ ಇದೇ ಕಾರಣಕ್ಕೆ ರವಿ ಬೆಳಗೆರೆ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಲಾಗಿತ್ತು. 

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250505
Today
Yesterday
This Week
Last Week
This Month
Last Month
All days
9912
16742
76233
4062809
281600
395132
4250505
Your IP: 54.234.190.237
2018-01-18 15:59