Breaking News

ರವಿ ಬೆಳಗೆರೆ ಪತ್ನಿ ಯಶೋಮತಿ ನಾಪತ್ತೆ...!

Written by 
Published: 09 December 2017
64 times Last modified on Saturday, 09 December 2017 09:29

ಕೆ.ಎನ್.ಪಿ.ವಾರ್ತೆ,ಬೆಂಗಳೂರು,ಡಿ.09;

ರವಿ ಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿ ರಾಜರಾಜೇಶ್ವರಿ ನಗರ ಸಮೀಪದ ಪಟ್ಟಣಗೆರೆಯ ನಿವಾಸದಿಂದ ನಾಪತ್ತೆಯಾಗಿದ್ದಾರೆ.

ಸಹೋದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಫಾರಿ ನೀಡಿದ ಪ್ರಕರಣದಲ್ಲಿ ಬಂಧಿತರಾಗಿರುವ 'ಹಾಯ್ ಬೆಂಗಳೂರು' ಸಂಪಾದಕರಾದ ರವಿ ಬೆಳಗೆರೆ ಪತ್ನಿ ಯಶೋಮತಿ ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ವರದಿಗಳಿಂದ ಲಭ್ಯವಾಗಿದೆ. ಸುನಿಲ್ ಹೆಗ್ಗರವಳ್ಳಿ ಅವರೊಂದಿಗೆ ಬೆಳಗೆರೆ 2ನೇ ಪತ್ನಿ ಯಶೋಮತಿ ಅಕ್ರಮ ಸಂಬಂಧ ಹೊಂದಿದ್ದರು, ಈ ಕಾರಣಕ್ಕಾಗಿಯೇ ಬೆಳಗೆರೆ ಸುನಿಲ್ ಅವರ ಹತ್ಯೆಗೆ ಸುಪಾರಿ ನೀಡಿದ್ದರು ಎಂಬ ಮಾತುಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು.

ಈಗ ಇದಕ್ಕೆ ಪೂರಕ ಎಂಬಂತೆ ಅವರು ನಾಪತ್ತೆಯಾಗಿದ್ದು, ಈ ಮೂಲಕ ಅನುಮಾನಗಳು ಇನ್ನೂ ದಟ್ಟವಾದಂತಾಗಿದೆ. ರಾಜರಾಜೇಶ್ವರಿ ನಗರದಲ್ಲಿ 'ಹಿಮ ಬೆಳಗೆರೆ' ಎಂಬ ಹೆಸರಿನ ಭವ್ಯ ಮನೆಯಲ್ಲಿ ವಾಸವಿದ್ದ ರವಿ ಬೆಳಗೆರೆ ಅವರ ಪತ್ನಿ ಯಶೋಮತಿ ರವಿ ಬೆಳಗೆರೆ ಬಂಧನವಾಗುತ್ತಿದ್ದಂತೆಯೇ ಮನೆಯಿಂದ ನಾಪತ್ತೆಯಾಗಿದ್ದು, ತಮ್ಮ ಫೇಸ್‌ಬುಕ್‌ ಖಾತೆಯಿಂದ ಕೆಲವು ಚಿತ್ರಗಳನ್ನು ಡಿಲೀಟ್ ಕೂಡ ಮಾಡಿದ್ದಾರೆ.

ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳಗೆರೆ ಅವರ ಪತ್ನಿ ಯಶೋಮತಿ ಅವರನ್ನು ಸಿಸಿಬಿ ಪೋಲಿಸರು ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹೆದರಿ ನಾಪತ್ತೆಯಾಗಿರಬಹುದು ಎಂದು ಶಂಕಿಸಲಾಗಿದೆ. ಈ ಪ್ರಕರಣದಲ್ಲಿ ಯಶೋಮತಿ ಅವರ ಹೇಳಿಕೆ ಅತ್ಯಂತ ಪ್ರಮುಖವಾಗಿದ್ದು, ಸಿಸಿಬಿ ಪೊಲೀಸರು ಅವರನ್ನು ಪತ್ತೆ ಹಚ್ಚುವ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭಿಸಲಿದ್ದಾರೆ.

Media

Leave a comment

Make sure you enter all the required information, indicated by an asterisk (*). HTML code is not allowed.

Search For News

Cartoon Post

NewsLetter

Visitors Counter

4250462
Today
Yesterday
This Week
Last Week
This Month
Last Month
All days
9869
16742
76190
4062809
281557
395132
4250462
Your IP: 54.234.190.237
2018-01-18 15:56